Gold price: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಧಿಸಿದ ಪ್ರತೀಕಾರದ ಸುಂಕಕ್ಕೆ ಜಾಗತಿಕ ಮಾರುಕಟ್ಟೆ ಅಲ್ಲೋಲ-ಕಲ್ಲೋಲ ಅನುಭವಿಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಂಕದ ಬಿಸಿ ತಟ್ಟುತ್ತಿದ್ದಂತೆಯೇ ಚೀನಾ ದೇಶವನ್ನು ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಿಗೂ 90 ದಿನಗಳ ಸುಂಕ ವಿರಾಮ ಘೋಷಿಸಿರುವ ಟ್ರಂಪ್, ಷೇರುಪೇಟೆಗೆ ಕೊಂಚ ಚೇತರಿಕೆ ನೀಡಿದ್ದಾರೆ.
ಒಂದೆಡೆ ಇದು ಬಿಗ್ ರಿಲೀಫ್ ನೀಡಿದ್ದೇ ಆದರೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಗೆ ಸಾಕ್ಷಿಯಾಗುತ್ತಿದೆ.ದಿನ ಕಳೆದಂತೆ ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣುತ್ತಿದೆ. 98,000 ರೂ.ಗೆ ಬಂದು ನಿಂತಿರುವ 10 ಗ್ರಾಂ ಚಿನ್ನದ ಬೆಲೆ, ಈಗ 1 ಲಕ್ಷ ರೂ. ಗಡಿದಾಟುವತ್ತ ಸಾಗಿದೆ. 1955ರಲ್ಲಿ, 10 ಗ್ರಾಂ ಚಿನ್ನದ ಬೆಲೆ ಕೇವಲ 79 ರೂಪಾಯಿಗಳಷ್ಟಿತ್ತು. ಅದೇ ಇಂದು, ಒಂದು ಗ್ರಾಂ ಚಿನ್ನದ ಬೆಲೆ 98,000 ರೂ. ಮೀರಿ ಹೋಗಿದೆ. ಇಂದು ಗೋಲ್ಡ್ ಗ್ರಾಹಕರನ್ನು ಭಾರೀ ಚಿಂತೆಗೆ ದೂಡಿದೆ. ವರದಿಗಳ ಪ್ರಕಾರ, ಒಂದೇ ದಿನದಲ್ಲಿ ಚಿನ್ನದ ಬೆಲೆ 2,350 ರೂ.ಗಳಷ್ಟು ಹೆಚ್ಚಾಗಿದೆ. ಅಮೆರಿಕ ಮತ್ತು ಚೀನಾ ನಡುವಿನ ಮಹಾ ಸುಂಕ ಸಮರ ಈ ದಿಢೀರ್ ಬೆಲೆ ಏರಿಕೆಗೆ ಕಾರಣ ಎಂಬುದು ಗಮನಾರ್ಹ.
ಯಾವ ವರ್ಷದಲ್ಲಿ ಚಿನ್ನದ ಬೆಲೆ ಎಷ್ಟಿತ್ತು? (10 ಗ್ರಾಂ 24 ಕ್ಯಾರೆಟ್)
1955 – 79 ರೂ.1960 – 111 ರೂ.1970 – 184 ರೂ.1980 – 1,330 ರೂ.1990- 3,200 ರೂ.2000- 4,400 ರೂ.2005 – 7,000 ರೂ.2010 – 18,500 ರೂ.2015- 26,343 ರೂ.2020 -.48,651 ರೂ2022- 56,100 ರೂ.2023 – 61,100 ರೂ.2024 – 74,100 ರೂ.
ಪ್ರಸ್ತುತ ವಿವರ
2025 – 90,150 ರೂ. (22 ಕ್ಯಾರೆಟ್)2025 – 98,350 ರೂ. (24 ಕ್ಯಾರೆಟ್)
ಅಂತರರಾಷ್ಟ್ರೀಯ ಉದ್ವಿಗ್ನತೆ, ಭೌಗೋಳಿಕ ರಾಜಕೀಯ ಸನ್ನಿವೇಶಗಳು ಹಾಗೂ ಅಮೆರಿಕದಲ್ಲಿನ ಬಡ್ಡಿದರ ಹೊಂದಾಣಿಕೆಗಳು ಮತ್ತು ದೇಶಗಳ ನಡುವಿನ ಸುಂಕ ಸಮರದಿಂದ ಚಿನ್ನದ ಬೆಲೆ ಆಕಾಶದತ್ತ ಮುಖ ಮಾಡುತ್ತಿವೆ. ಇಂದಿಗೂ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದೇ ಪರಿಗಣಿಸುತ್ತಾರೆ,