Post office Scheme : ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ 18000 ಬಡ್ಡಿ ಪಡೆಯಿರಿ

Post office Scheme ನಿಮ್ಮ ಗಳಿಕೆಯನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಪ್ರತಿ ತಿಂಗಳು ಒಂದು ನಿರ್ದಿಷ್ಟ ಆದಾಯವನ್ನು ಪಡೆಯಲು ಬಯಸುತ್ತಿದ್ದರೆ, ಭಾರತೀಯ ಅಂಚೆ ಇಲಾಖೆಯು ನಿಮಗಾಗಿಯೇ ಹೊಸ ಯೋಜನೆಯೊಂದನ್ನು ತಂದಿದೆ. ‘ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) 2025’ ಹಿರಿಯ ನಾಗರಿಕರು, ಗೃಹಿಣಿಯರು, ನಿವೃತ್ತ ನೌಕರರು ಹಾಗೂ ಕಡಿಮೆ ಅಪಾಯ ಬಯಸುವ ಹೂಡಿಕೆದಾರರಿಗೆ ಹೇಳಿ ಮಾಡಿಸಿದಂತಿದೆ.

ಈ ಸರ್ಕಾರಿ ಬೆಂಬಲಿತ ಯೋಜನೆಯ ನಿಯಮಗಳಲ್ಲಿ ಈಗ ಬದಲಾವಣೆ ಮಾಡಲಾಗಿದ್ದು, ಇದು ಮೊದಲಿಗಿಂತಲೂ ಹೆಚ್ಚು ಲಾಭದಾಯಕವಾಗಿದೆ. ವಿಶೇಷ ಅಂದ್ರೆ, ನೀವು ಗರಿಷ್ಠ ₹9 ಲಕ್ಷವನ್ನು ಒಮ್ಮೆ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹18,350 ರವರೆಗೆ ಆದಾಯ ಪಡೆಯಬಹುದು!

ಈ ಯೋಜನೆಯಲ್ಲಿ ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ಸರ್ಕಾರವೇ ಇದಕ್ಕೆ ಭರವಸೆ ನೀಡುತ್ತದೆ. ಇದರ ಅವಧಿ 5 ವರ್ಷಗಳು. ನೀವು ಏಕ ಖಾತೆಯಲ್ಲಿ ಗರಿಷ್ಠ ₹4.5 ಲಕ್ಷ ಹಾಗೂ ಜಂಟಿ ಖಾತೆಯಲ್ಲಿ ₹9 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಸದ್ಯಕ್ಕೆ ಈ ಯೋಜನೆಗೆ ವಾರ್ಷಿಕ 7.4% ಬಡ್ಡಿ ದರ ಲಭ್ಯವಿದ್ದು, ಇದನ್ನು ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಭಾರತದ ಎಲ್ಲಾ ಅಂಚೆ ಕಚೇರಿಗಳಲ್ಲೂ ಈ ಸೌಲಭ್ಯ ಲಭ್ಯವಿದೆ.

ನೀವು ಜಂಟಿ ಖಾತೆಯಲ್ಲಿ ₹9 ಲಕ್ಷ ಹೂಡಿಕೆ ಮಾಡಿದರೆ, ವಾರ್ಷಿಕ 7.4% ಬಡ್ಡಿಯಂತೆ ನಿಮಗೆ ಪ್ರತಿ ತಿಂಗಳು ₹5,550 (ಪ್ರತಿಯೊಬ್ಬರಿಗೂ) ಬರುತ್ತದೆ. ಅಂದರೆ, 5 ವರ್ಷಗಳಲ್ಲಿ ನೀವು ಒಟ್ಟು ₹3,99,600 ಬಡ್ಡಿಯನ್ನು ಗಳಿಸಬಹುದು. ಬೇಕಿದ್ದರೆ ತ್ರೈಮಾಸಿಕ ಪಾವತಿ ಆಯ್ಕೆಯೂ ಇದೆ.

18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ, ಪೋಷಕರ ಮೂಲಕ ಅಪ್ರಾಪ್ತ ವಯಸ್ಕರು ಹಾಗೂ ಒಂದರಿಂದ ಮೂರು ಜನರ ಜಂಟಿ ಖಾತೆಯನ್ನು ಹೊಂದಿರುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿಳಾಸ ಪುರಾವೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಅಗತ್ಯವಿದೆ. ನೀವು ಅಂಚೆ ಕಚೇರಿಗೆ ಹೋಗಿ MIS ಫಾರ್ಮ್ ಭರ್ತಿ ಮಾಡಿ, ನಗದು ಅಥವಾ ಚೆಕ್ ಮೂಲಕ ಹಣ ಠೇವಣಿ ಮಾಡಿದರೆ ತಕ್ಷಣವೇ ನಿಮಗೆ ಪಾಸ್‌ಬುಕ್ ನೀಡಲಾಗುತ್ತದೆ.

ಇನ್ನು ಈ ಯೋಜನೆಯ ಬಡ್ಡಿ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ನೆನಪಿಡಿ. ಹಾಗೂ ಈ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿ ಲಭ್ಯವಿಲ್ಲ. ಒಂದು ವರ್ಷದ ನಂತರ ಸಣ್ಣ ಮೊತ್ತದ ದಂಡದೊಂದಿಗೆ ಖಾತೆಯನ್ನು ಮುಚ್ಚುವ ಅವಕಾಶವಿದೆ. ಗಮನಿಸಬೇಕಾದ ಅಂಶವೆಂದರೆ ಈ ಸಂಪೂರ್ಣ ಪ್ರಕ್ರಿಯೆಯು ಆಫ್‌ಲೈನ್‌ನಲ್ಲಿ ನಡೆಯುತ್ತದೆ, ಆನ್‌ಲೈನ್ ಸೌಲಭ್ಯ ಲಭ್ಯವಿಲ್ಲ.

sreelakshmisai
Author

sreelakshmisai

Leave a Reply

Your email address will not be published. Required fields are marked *