7th Pay Commission-ಮಾಧ್ಯಮ ವರದಿ ಪ್ರಕಾರ, ಕೇಂದ್ರ ಸರ್ಕಾರವು ಹೋಳಿ ಹಬ್ಬದ (ಮಾರ್ಚ್ 14, 2025) ಮೊದಲು ಸರ್ಕಾರಿ ನೌಕರರಿಗೆ ಶೇಕಡಾ 2ರಷ್ಟು ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಹೆಚ್ಚಿಸುವ ಸಾಧ್ಯತೆ ಇದೆ. Moneycontrol ವರದಿಯ ಪ್ರಕಾರ, 7ನೇ ವೇತನ ಆಯೋಗ (2016) ಅಡಿಯಲ್ಲಿ 1.2 ಕೋಟಿ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಈ ಹೆಚ್ಚಳದಿಂದ ಲಾಭ ಪಡೆಯಲಿದ್ದಾರೆ. ಈ ಮೂಲಕ, ಪ್ರಸ್ತುತ ಶೇಕಡಾ 53ರಷ್ಟು ಇರುವ DA ಶೇಕಡಾ 55ಕ್ಕೆ ಏರಲಿದೆ.
ತುಟ್ಟಿಭತ್ಯೆ ಹೇಗೆ ಲೆಕ್ಕ ಹಾಕುತ್ತಾರೆ?
Bajaj Finserv ಪ್ರಕಾರ, ತುಟ್ಟಿಭತ್ಯೆ ಎಂಬುದು ಸರ್ಕಾರಿ ನೌಕರರ ವೇತನದ ಒಂದು ಭಾಗವಾಗಿದ್ದು, ಹಣದುಬ್ಬರದ ಪರಿಣಾಮ ತಗ್ಗಿಸಲು ಕೇಂದ್ರ ಸರ್ಕಾರ ಪಾವತಿಸುವ ಭತ್ಯೆಯಾಗಿದೆ. ಇದನ್ನು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
DA ಲೆಕ್ಕಾಚಾರದ ಸೂತ್ರ:
DA % = ((ಕಳೆದ 12 ತಿಂಗಳ CPI-IW ಸರಾಸರಿ (Base Year 2001=100) – 115.76) / 115.76) × 100
▶ ಕೇಂದ್ರ ಸಾರ್ವಜನಿಕ ವಲಯ ಉದ್ಯೋಗಿಗಳಿಗೆ:DA % = ((ಕಳೆದ 3 ತಿಂಗಳ CPI-IW ಸರಾಸರಿ (Base Year 2001=100) – 126.33) / 126.33) × 100
ಪ್ರತಿಯೊಬ್ಬ ಕೇಂದ್ರ ಸರ್ಕಾರಿ ನೌಕರರ DA, ಪ್ರತಿ ವರ್ಷ ಜನವರಿ ಮತ್ತು ಜೂನ್ ತಿಂಗಳಲ್ಲಿ ಪರಿಷ್ಕರಿಸಲಾಗುತ್ತದೆ, ಆದರೆ ಅಧಿಕೃತ ಘೋಷಣೆ ಸಾಮಾನ್ಯವಾಗಿ ಮಾರ್ಚ್ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ.
ಕೈಗಾರಿಕಾ ಕಾರ್ಮಿಕರ CPI-IW ಸೂಚ್ಯಂಕ ಆಧಾರದ ಮೇಲೆ, ಜನವರಿ 2025ರಿಂದ DA ಶೇಕಡಾ 55.98ಕ್ಕೆ ಏರಲಿದೆ.