2nd PUC results : ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದವರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಪರೀಕ್ಷೆ ಫಲಿತಾಂಶ ಯಾವಾಗ ಬರಲಿದೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025 ರ ಕರ್ನಾಟಕ ದ್ವಿತೀಯ ಪಿಯುಸಿ (PUC) ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆ ಇದೆ. ಫಲಿತಾಂಶವನ್ನು ಏಪ್ರಿಲ್ ಮೊದಲ ಅಥವಾ ಎರಡನೇ ವಾರದಲ್ಲಿ ಘೋಷಿಸುವ ನಿರೀಕ್ಷೆಯಿದೆ
ಕಳೆದ ವರ್ಷ, ದ್ವಿತೀಯ ಪಿಯುಸಿ ಫಲಿತಾಂಶ 2nd PUC results ಏಪ್ರಿಲ್ 10ರಂದು ಪ್ರಕಟವಾಗಿತ್ತು. ಈ ವರ್ಷ, ಮಾರ್ಚ್ 1ರಿಂದ ಮಾರ್ಚ್ 20ರ ವರೆಗೆ ನಡೆದ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ ಪರಿಶೀಲಿಸಬಹುದು.
ಮಾರ್ಚ್ 21 ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಇದೇ ವಾರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.ಅದರಲ್ಲೂ ಏಪ್ರಿಲ್ 11 ರಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ವಾರವೇ ಪತ್ರಿಕಾಗೋಷ್ಠಿ ಕರೆದು ಫಲಿತಾಂಶ ಪ್ರಕಟಿಸುವ ಸಾಧ್ಯತೆಯಿದೆ.ಎಂದಿನಂತೆ ಈ ಬಾರಿಯೂ ಆನ್ ಲೈನ್ ನಲ್ಲೇ ಫಲಿತಾಂಶ ವೀಕ್ಷಣೆ, ಅಂಕಪಟ್ಟಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳು karresults.nic.in ಅಥವಾ kseab.karnataka.gov.in ವೆಬ್ ಸೈಟ್ ಗೆ ತೆರಳಿ ಫಲಿತಾಂಶ ವೀಕ್ಷಿಸಬಹುದಾಗಿದೆ.ಫಲಿತಾಂಶ ವೀಕ್ಷಿಸುವುದು ಹೇಗೆ?ಅಭ್ಯರ್ಥಿಗಳು ವೆಬ್ ಪೇಜ್ ಗೆ ತೆರಳಿ ಸೆಕೆಂಡ್ ಪಿಯು ರಿಸಲ್ಟ್ 2025 ಎಂಬ ಆಯ್ಕೆ ಕ್ಲಿಕ್ ಮಾಡಬೇಕು.ನೋಂದಣಿ ಸಂಖ್ಯೆ ಮತ್ತು ಪಾಸ್ ವರ್ಡ್ ನಮೂದಿಸಬೇಕು.ಈಗ ನಿಮ್ಮ ಫಲಿತಾಂಶ ಸ್ಕ್ರೀನ್ ನಲ್ಲಿ ಕಾಣುತ್ತದೆ.ಫಲಿತಾಂಶದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಲೂ ಅವಕಾಶವಿರುತ್ತದೆ.