ಇದೀಗ ಕೃಷಿ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಇಚ್ಛಿಸುವವರಿಗಾಗಿ ಕೃಷಿ ಎಂಜಿನಿಯರಿಂಗ್ ಅತ್ಯುತ್ತಮ ಆಯ್ಕೆಯಾಗಿದ್ದು, ಉತ್ತಮ ಭವಿಷ್ಯಕ್ಕಾಗಿ ಬಿ.ಟೆಕ್, ಎಂ.ಟೆಕ್ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಆಯ್ದುಕೊಳ್ಳಬಹುದು. ಈ ಲೇಖನದಲ್ಲಿ ಕೃಷಿ ಎಂಜಿನಿಯರಿಂಗ್ ಎಂದರೇನು, ಅದರ ಅರ್ಹತೆಗಳು, ಕೋರ್ಸ್‌ಗಳ ಮಾಹಿತಿ, ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಕೃಷಿ ಎಂಜಿನಿಯರಿಂಗ್ ಎಂದರೇನು?
ಕೃಷಿ ಎಂಜಿನಿಯರಿಂಗ್ ಒಂದು ಇಂಜಿನಿಯರಿಂಗ್ ಶಾಖೆಯಾಗಿದ್ದು, ಕೃಷಿಯಲ್ಲಿ ಉಪಯೋಗವಾಗುವ ಯಂತ್ರೋಪಕರಣಗಳ ವಿನ್ಯಾಸ, ನಿರ್ಮಾಣ ಹಾಗೂ ಸುಧಾರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಕೃಷಿಕರಿಗೆ ಸಹಾಯ ಮಾಡುವುದರೊಂದಿಗೆ ಬೆಳೆ ಇಳುವರಿ ಹೆಚ್ಚಿಸಲು ಮತ್ತು ಕೃಷಿಯಲ್ಲಿ ತಂತ್ರಜ್ಞಾನ ಬಳಸುವುದರಿಂದ ಲಾಭವರ್ಧನೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಅರ್ಹತೆಗಳು
ಬಿ.ಟೆಕ್: ಪಿಯುಸಿಯಲ್ಲಿ ವಿಜ್ಞಾನ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ) ವಿಭಾಗದಲ್ಲಿ ಕನಿಷ್ಠ 50% ಅಂಕಗಳಿರಬೇಕು.
ಎಂ.ಟೆಕ್: ಬಿ.ಟೆಕ್ ನಂತರ 2 ವರ್ಷದ ಪಿಜಿ ಕೋರ್ಸ್.
ಡಿಪ್ಲೊಮಾ: 10ನೇ ಅಥವಾ 12ನೇ ತರಗತಿ ನಂತರ 3 ವರ್ಷದ ಕೋರ್ಸ್.
ಪ್ರವೇಶ ಪರೀಕ್ಷೆಗಳು:
ICAR (B.Tech/M.Tech)
IIT-JAM (M.Tech)
JEE (B.Tech)ಈ ಪರೀಕ್ಷೆಗಳ ಮೂಲಕ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
ಕೋರ್ಸ್ ಶುಲ್ಕ:
ಬಿ.ಟೆಕ್: ಖಾಸಗಿ ಕಾಲೇಜು: ₹1 ಲಕ್ಷ – ₹12.40 ಲಕ್ಷ | ಸರ್ಕಾರಿ ಕಾಲೇಜು: ₹36,000 – ₹10.58 ಲಕ್ಷ
ಎಂ.ಟೆಕ್: ಖಾಸಗಿ: ₹60,000 – ₹12.50 ಲಕ್ಷ | ಸರ್ಕಾರಿ: ₹24,000 – ₹4.44 ಲಕ್ಷ
ಡಿಪ್ಲೊಮಾ: ಖಾಸಗಿ: ₹65,100 – ₹1.55 ಲಕ್ಷ | ಸರ್ಕಾರಿ: ₹4,000 – ₹33,300
ಉದ್ಯೋಗಾವಕಾಶಗಳು:
ಕೃಷಿ ಎಂಜಿನಿಯರ್‌ಗಳಿಗೆ ಸರ್ಕಾರಿ ಸಂಸ್ಥೆಗಳು (ಆಹಾರ ಇಲಾಖೆ, ಕೃಷಿ ಸಂಶೋಧನಾ ಕೇಂದ್ರಗಳು), ಖಾಸಗಿ ಕಂಪನಿಗಳು, ಕೃಷಿ ತಂತ್ರಜ್ಞಾನ ಸಂಸ್ಥೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆ.
ಸಂಬಳ:ಆರಂಭಿಕ ಸಂಬಳ ವರ್ಷಕ್ಕೆ ₹4 ಲಕ್ಷ – ₹5 ಲಕ್ಷ. ಅನುಭವ ಹೊಂದಿದ ಬಳಿಕ ವರ್ಷಕ್ಕೆ ₹6 ಲಕ್ಷ – ₹10 ಲಕ್ಷವರೆಗೆ ಸಂಬಳ ದೊರಕಬಹುದು.
ಕೃಷಿ ಎಂಜಿನಿಯರಿಂಗ್ ಪ್ರಗತಿಶೀಲ ಹಾಗೂ ಲಾಭದಾಯಕ ವೃತ್ತಿ ಮಾರ್ಗವಾಗಿದೆ. ಯಂತ್ರೋಪಕರಣಗಳ ಜ್ಞಾನವನ್ನು ಬಳಸಿಕೊಂಡು ರೈತರ ಬದುಕಿನಲ್ಲಿ ಬದಲಾವಣೆ ತರಲು ಇದು ಉತ್ತಮ ಆಯ್ಕೆ.