Agriculture department subsidy schemes-2025 -ಕೃಷಿ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು
ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಬೀಜ,ಗೊಬ್ಬರ,ಕೀಟನಾಶಕಗಳ ಜೊತೆ ತಾಡಪತ್ರಿ,ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತದೆ.
ಕೃಷಿ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು
ಕೃಷಿ ಯಾಂತ್ರಿಕರಣ
ಸಾಮಾನ್ಯ ವರ್ಗದ ರೈತರಿಗೆ ಶೇಕಡ 50ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ಜನರಿಗೆ ಶೇಕಡ 90ರ ರಿಯಾಯಿತಿಯಲ್ಲಿ ಪವರ್ ಟಿಲ್ಲರ್ ರೋಟೋವೇಟರ್ ಪವರ್ ವೀಡರ್ ಪವರ್ ಸ್ಪ್ರೇಯರ್ ಡೀಸೆಲ್ ಪಂಪ್ಸೆಟ್ ಫ್ಲೋರ್ ಮಿಲ್ ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉತ್ಪಕರಣಗಳನ್ನು ವಿತರಿಸಲಾಗುತ್ತದೆ.
ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಒಂದು ಭಾವಚಿತ್ರ ಇಪ್ಪತ್ತರ ಚಾಪ ಕಾಗದದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
SMAM ಯೋಜನೆಯಡಿ ಕೃಷಿ ಯಂತ್ರೋಪಕರಣ ಖರೀದಿಸಲು ಶೇಕಡಾ 50%-90% ಸಬ್ಸಿಡಿ
ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿ, ಕೃಷಿಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಿ, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು, ಕೃಷಿಯಲ್ಲಿ ಯಾಂತ್ರೀಕರಣ ವನ್ನು ಪ್ರೋತ್ಸಾಹಿಸಲು ಕೃಷಿ ಯಾಂತ್ರೀಕರಣ ಯೋಜನೆ ಅಡಿ ಟ್ಯಾಕ್ಟರ್ ಹೊರತುಪಡಿಸಿ, ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ರೈತರಿಗೆ ಶೇಕಡ 50ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 90ರಷ್ಟು ಸಹಾಯಧನವನ್ನು ಒಂದು ಲಕ್ಷದವರೆಗೆ ಮಿತಿ ಗೊಳಿಸಲಾಗಿದೆ. ಮುಂದುವರೆದು 45 ಪಿ. ಟಿ. ಒ.hp ವರಿಗೆ ಟ್ಯಾಕ್ಟರ್ ಗಳಿಗೆ ಸಾಮಾನ್ಯ ರೈತರಿಗೆ 75000 ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 90 ರಷ್ಟು ಗರಿಷ್ಠ ಮೂರು ಲಕ್ಷ ಸಹಾಯಧನ ನೀಡುವುದು.
ಕೃಷಿ ಯಾಂತ್ರೀಕರಣ ಯೋಜನೆ ಅಡಿ ಉಳುಮೆಯಿಂದ ಕೊಯ್ಲು ವರೆಗೆ ಉಪಕರಗಳು, ವಿವಿಧ ಮಾದರಿಯ ಟ್ಯಾಕ್ಟರ್ ಗಳು, ಪವರ್ ಟಿಲ್ಲರ್ ಗಳು, ಭೂಮಿ ಸಿದ್ಧತೆ ಉಪಕರಣಗಳು, ನಾಟಿ/ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸಲ್ ಪಂಪ್ಸೆಟ್, ಟ್ಯಾಕ್ಟರ್/ ಟಿಲ್ಲರ್/ ಇಂಜಿನ್ ಚಾಲಿತ ಸಸ್ಯ ಸಂರಕ್ಷಣೆ ಬೆಳೆ ಕಟಾವು/ ಒಕ್ಕಣಿ ಯಂತ್ರಗಳು, ತ್ಯಾಜ್ಯ ವಸ್ತುಗಳ ನಿರ್ವಹಣೆ ಉಪಕರಣಗಳನ್ನು ಸಹಾಯಧನದಲ್ಲಿ ವಿತರಿಸಲು ಕೇಂದ್ರ ಪುರಸ್ಕೃತ ಕೃಷಿ ಯಾಂತ್ರೀಕರಣ ಉಪ ಅಭಿಯಾನ(SMAM) ಯೋಜನೆಯಡಿ ಒದಗಿಸಲಾಗಿರುವ ಅನುದಾನದ ಆಧಾರದ ಮೇಲೆ ಜಿಲ್ಲಾವಾರು ಕಾರ್ಯಕ್ರಮ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು.
ರೈತರು ಸಹಾಯಧನದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಇಲಾಖೆಯ ಗಮನಕ್ಕೆ ಬರದೇ ಪೂರ್ವಾನುಮತಿ ಪಡೆಯದೆ ರೈತರು ಸ್ವಂತವಾಗಿ ಪಡೆದ ಸವಲತ್ತುಗಳಿಗೆ ಸಹಾಯಧನ ನೀಡಲು ಅವಕಾಶವಿರುವುದಿಲ್ಲ.
ದಿನಾಂಕ 1.4. 2023ರ ನಂತರ ಪಡೆದ ಸವಲತ್ತು ಉಪಕರಣಗಳಿಗೆ ಮಾತ್ರ ಸಹಾಯಧನವನ್ನು ನೀಡುವುದು
ಒಂದು ಉಪಕರಣವನ್ನು ಸಹಾಯಧನದಲ್ಲಿ ಪಡೆದ ನಂತರ ಅದೇ ಉಪಕರಣವನ್ನು ಮುಂದಿನ ಏಳು ವರ್ಷಗಳವರೆಗೆ ಸಹಾಯಧನದಡಿ ಪಡೆಯಲು ಅವಕಾಶ ಇರುವುದಿಲ್ಲ
ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ಹಾಗೂ ಕೆ ಕಿಸಾನ್ ಮೂಲಕ ಅರ್ಜಿ ಸಲ್ಲಿಸುವ ರೈತರು ಮಾತ್ರ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ
ಕೃಷಿ ಯಾಂತ್ರೀಕರಣ ಯೋಜನೆಯ ಕಾರ್ಯಕ್ರಮದಡಿ ಒದಗಿಸಬಹುದಾದ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣ ವಿವರಗಳುಳ್ಳ ಸರಬರಾಜುದಾರರ ಇನ್ ಫೈನಲ್ ಪಟ್ಟಿ ಹಾಗೂ ಸಹಾಯಧನ ವಿವರಗಳನ್ನು ಕೇಂದ್ರ ಕಚೇರಿಯಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದ ಕೃಷಿ ಯಂತ್ರೋಪಕರಣಗಳು ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತವೆ.
ಕೃಷಿ ಸಂಸ್ಕರಣಾ ಘಟಕಗಳಿಗೆ ಶೇಕಡ 50 ರಿಂದ 90% ಸಬ್ಸಿಡಿ
ಕೃಷಿ ಉತ್ಪನ್ನಗಳ ಸಂಸ್ಕರಣೆ
ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯ ಪ್ರಮುಖ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನುಉತ್ತಮ ಸಂಸ್ಕರಣೆಗೆ ಒಳಪಡಿಸಿದಾಗ ಮಟ್ಟದ ಉತ್ಪನ್ನಗಳನ್ನು ರೈತರಿಗೆ ಹಾಗೂ ಬಳಕೆದಾರರಿಗೆ ಒದಗಿಸುವುದಾಗಿದೆ.
ಗುಣಮಟ್ಟದ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ರೈತರಿಗೆ ಹೆಚ್ಚಿನ ಬೆಲೆಯನ್ನು ಸಹ ಒದಗಿಸಿ ಕೊಡುವುದರಿಂದ ಅವರ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತದೆ. ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳು ಹಾಗೂ ಟಾರ್ಪಲಿನ್ ವಿತರಣೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆಯ ಗಾಳಿ ಹಾಗೂ ಇತರೆ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು 5 ಪದರಗಳುಳ್ಳ 250 GSM ಕಪ್ಪು ಬಣ್ಣದ HDPE tarpaulin confirming IS7903/2007(Type-II)8x6mtr. ಅಳತೆಯ ಟಾರ್ಪಲಿನ್ ಗಳನ್ನು ವಿತರಿಸಲಾಗುವುದು.
ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇಕಡ 50ರಷ್ಟು ಹಾಗೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಶೇಕಡ 90ರಷ್ಟು ಮತ್ತು ಸಣ್ಣ ಯಂತ್ರಚಾಲಿತ ಎಣ್ಣೆಗಾಣ ಘಟಕಗಳಿಗೆ ಸಾಮಾನ್ಯ ರೈತರಿಗೆ ಶೇಕಡ 75 ಮೀರದಂತೆ ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 90ರಷ್ಟು ಸಹಾಯಧನವನ್ನು ಗರಿಷ್ಠ ಒಂದು ಲಕ್ಷದವರೆಗೆ ಮಿತಿಗೊಳಿಸಿ ನೀಡಲಾಗಿದೆ.
ಟಾರ್ಪಲಿನ್ ಗಳ ವಿತರಣೆಗೆ ರಾಜ್ಯ ವಲಯದಡಿ ಸಾಮಾನ್ಯ ರೈತರಿಗೆ ಶೇಕಡ 50ರಷ್ಟು ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 90ರಷ್ಟು ಸಹಾಯಧನವನ್ನು ನೀಡಬಹುದಾಗಿದೆ.ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇಕಡ 50ರಷ್ಟು ಸಹಾಯಧನವನ್ನು ಬರಿಸಲು ಅವಕಾಶವಿದ್ದು ಪರಿಶಿಷ್ಟ ಜಾತಿ ಪಂಗಡದವರಿಗೆ ಉಳಿಕೆ ಶೇಕಡ ನಲವತ್ತರ ಸಹಾಯಧನವನ್ನು ರಾಜ್ಯ ವಲಯದಡಿ ಪೂರಕ ಅನುದಾನವನ್ನು ಬರಿಸುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬೇಕು
ನಿಯಮಾನುಸಾರ ಕ್ರಮ ಬದ್ಧವಾಗಿ ಸ್ವೀಕರಿಸಿದ( ಬಾಕಿ) ಅರ್ಜಿಗಳಿಗೆ ಮೊದಲು ಜೇಷ್ಠತೆ ಆಧಾರದ ಮೇಲೆ ನಿಯಮಾನುಸಾರ ಸಹಾಯಧನ ನೀಡುವುದು.
ದಿನಾಂಕ 1.4. 2023ರ ನಂತರ ಪಡೆದ ಸವಲತ್ತುಗಳಿಗೆ ಮಾತ್ರ ಸಹಾಯಧನ ನೀಡುವುದು.
ಕೃಷಿ ಸಂಸ್ಕರಣೆಯ ಸಹಾಯಧನ ಕಾರ್ಯಕ್ರಮದಡಿ ಒದಗಿಸಬಹುದಾದ ವಿವಿಧ ಮಾದರಿಯ ಕೃಷಿ ಸಂಸ್ಕರಣ ಘಟಕಗಳ ಮತ್ತು ಟಾರ್ಪಲಿನ್ ವಿವರಗಳುಳ್ಳ ಸರಬರಾಜುದಾರರ ಎಂಪನೆಲ್ ಪಟ್ಟಿ ಹಾಗೂ ಸಹಾಯಧನದ ವಿವರಗಳನ್ನು ಕೇಂದ್ರ ಕಚೇರಿಯಿಂದ ಅನುಮೋದನೆಗೊಂಡಿರುವ ಸಂಸ್ಥೆಗಳಿಂದ ಪಡೆದ ಕೃಷಿ ಸಂಸ್ಕರಣ ಘಟಕಗಳ ಮಾದರಿಗಳು ಮಾತ್ರ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ.
ರೈತರು ಇಚ್ಚಿಸುವ ಕೃಷಿ ಸಂಸ್ಕರಣಾ ಘಟಕಗಳನ್ನು ಕೇಂದ್ರ ಕಚೇರಿಯಿಂದ ಅರ್ಹ ಗೊಂಡ ಸಂಸ್ಥೆಗಳಿಂದ ಪ್ರಚಲಿತವಿರುವ ಮಾರುಕಟ್ಟೆ ದರ/ ಅನುಕೂಲಕರ ದರದಲ್ಲಿ ಚೌಕಾಸಿಮಾಡಿ ಸವಲತ್ತು ಪಡೆಯಲು ಸಂಪೂರ್ಣವಾಗಿ ಸ್ವತಂತ್ರರಾಗಿರುತ್ತಾರೆ.
ಕೃಷಿ ಸಂಸ್ಕರಣಾ ಘಟಕಗಳ ತಯಾರಿಕಾ ನ್ಯೂನ್ಯತೆಗಳು ಏನಾದರೂ ಬಂದಲ್ಲಿ ರೈತರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಗಳನ್ನು ಸಂಪರ್ಕಿಸಿ ದೂರು ನೀಡಬಹುದು
ಒಂದು ಉಪಕರಣವನ್ನು ಸಹಾಯಧನದ ಡಿ ಪಡೆದ ನಂತರ ಅದೇ ಉಪಕರಣವನ್ನು ಮುಂದಿನ ಮೂರು ವರ್ಷಗಳವರೆಗೆ ಸಹಾಯಧನದಡಿ ಪಡೆಯಲು ಅವಕಾಶವಿರುವುದಿಲ್ಲ
FRUITS ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ಹಾಗೂ ಕೆ ಕಿಸಾನ್ ಮೂಲಕ ಅರ್ಜಿ ಸಲ್ಲಿಸುವ ರೈತರು ಮಾತ್ರ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ರೈತರು ಸಹಾಯಧನದಲ್ಲಿ ಕೃಷಿ ಸಂಸ್ಕರಣಾ ಘಟಕಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ
ಇಲಾಖೆಯ ಗಮನಕ್ಕೆ ಬರದೇ ಪೂರ್ವಾನುಮತಿ ಪಡೆಯದೆ ರೈತರು ಸ್ವಂತವಾಗಿ ಪಡೆದ ಸವಲತ್ತುಗಳಿಗೆ ಸಹಾಯಧನ ನೀಡಲು ಅವಕಾಶ ಇರುವುದಿಲ್ಲ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಪ್ರತಿಹನಿಗೆ ಅಧಿಕ ಬೆಳೆ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಕೃಷಿ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತದೆ
ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆ ಕಚೇರಿಯಿಂದ ಪಡೆದುಕೊಳ್ಳಬಹುದು. ಯೋಜನೆಯಡಿ ಪ್ರತಿ ಅರ್ಜಿದಾರರಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಮೊದಲ ಎರಡು ಹೆಕ್ಟರ್ ಪ್ರದೇಶದವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 90ರಷ್ಟು ಇತರೆ ಹಾಗೂ ಸಾಮಾನ್ಯ ರೈತರಿಗೆ ಶೇಕಡ 75 ರಷ್ಟು, ಉಳಿದಂತೆ ಎರಡು ಹೆಕ್ಟರ್ ಮೇಲ್ಪಟ್ಟು 5 ಹೆಕ್ಟೇರ್ವರೆಗೆ ಶೇಕಡ 45ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ ಇತರೆ ಹಾಗೂ ಸಾಮಾನ್ಯ ವರ್ಗದವರಿಗೆ ಒಮ್ಮೆ ಹಾಗೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವರಿ ಪದ್ಧತಿ ಹಾಳಾಗಿದ್ದಲ್ಲಿ ಘಟಕ ಕಾರ್ಯ ನಿರ್ವಹಿಸದೆ ಇದ್ದಲ್ಲಿ ಏಳು ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಇಲಾಖೆ ಮಾರ್ಗಸೂಚಿ ಅನ್ವಯ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು.
ನೀರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಗತ್ಯವಾಗಿರುವ ಸಂಪನ್ಮೂಲಗಳಲ್ಲಿ ಒಂದು. ಆಧುನಿಕ ತೋಟಗಾರಿಕೆಯಲ್ಲಿ ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಅತ್ಯಂತ ಮಹತ್ವವನ್ನು ಪಡೆದಿದ್ದು ಈ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿಯ ಬಳಕೆ ಅವಶ್ಯಕವಾಗಿದೆ. ಸೂಕ್ಷ್ಮ ನೀರಾವರಿ ಪದ್ಧತಿ ಬಳಕೆಯಿಂದ ನಾಡಿನ ಜಲ ಸಂಪನ್ಮೂಲವನ್ನು ಸಂರಕ್ಷಣೆ ಹಾಗೂ ಮಿತವೆಯ ಮಾಡಬಹುದಲ್ಲದೆ ಬೆಳೆಗಳಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ಸೂಕ್ಷ್ಮ ನೀರಾವರಿಯ ಮಹತ್ವವನ್ನು ಮನಗಂಡು ರಾಜ್ಯ ಸರ್ಕಾರವು 1991-92ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಅಡಿ ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ (ಹನಿ/ತಂತುರು) ನೀರಾವರಿಯನ್ನು ಪ್ರೋತ್ಸಾಹಿಸುತ್ತಿದೆ. ಕೇಂದ್ರ ಸರ್ಕಾರವು ಸೂಕ್ಷ್ಮ ನೀರಾವರಿಯ ಮಹತ್ವವನ್ನು ಗುರುತಿಸಿ 2005-06ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಸೂಕ್ಷ್ಮ ನೀರಾವರಿ ಯೋಜನೆಯನ್ನು ಪ್ರಾರಂಭಿಸಿರುತ್ತದೆ ತದನಂತರ ಇದನ್ನು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್ ಆಗಿ ಮರುನಾಮಕರಣ ಮಾಡಲಾಗಿದೆ 2014 15ನೇ ಸಾಲಿನ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ( National mission sustainable agriculture on farm water management (NMSA-OFWM) ದಡಿ ಅನುಷ್ಠಾನಗೊಳಿಸಲಾಗುತ್ತಿದ್ದು 2015-16 ನೇ ಸಾಲಿನಿಂದ ಈ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರತಿ ಹನಿ ಗೆ ಅಧಿಕ ಇಳುವರಿ (Micro irrigation) ದಡಿ ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಸುವ ಎಲ್ಲಾ ವರ್ಗದ ರೈತರಿಗೆ ನಿಯಮಾನುಸಾರ ಗರಿಷ್ಠ ಮಿತಿಗೆ ಒಳಪಟ್ಟು ನೀಡಲಾಗುವುದು
ಈ ಯೋಜನೆಯಲ್ಲಿ ಹನಿ ನೀರಾವರಿ ಮತ್ತು ವಿವಿಧ ರೀತಿಯ ತುಂತುರು ನೀರಾವರಿ ಘಟಕಗಳಿಗೆ ಸಹಾಯಧನ ಲಭ್ಯವಿದ್ದು ಕಾಫಿ ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಲಭ್ಯವಿರುತ್ತದೆ.
ಹೆಚ್ಚುವರಿ ನೀರಿನ ಬೇಡಿಕೆ ಇರುವ ಬೆಳೆಗಳಾದ ಬಾಳೆ ತೆಂಗು ಅಡಿಕೆ ಪಪ್ಪಾಯ ತಾಳೆ ಬೆಳೆ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಆದ್ಯತೆ ಮೇರೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕ್ರಮವಹಿಸಿ ವೆಚ್ಚ ಭರಿಸುವುದು.
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದವರೆಗೆ ಸಹಾಯಧನ ಲಭ್ಯವಿರುತ್ತದೆ.ಮತ್ತು ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟರ್ ವರೆಗೆ ಸಹಾಯಧನ ನೀಡಲಾಗುವುದು.
ಅಡಿಕೆ ತೆಂಗು ತೋಟಗಳಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಮಿಶ್ರ ಬೆಳೆಗೆ ಹನಿ ನೀರಾವರಿ ಅಳವಡಿಸಿದ್ದಲ್ಲಿ ಅಂತಹ ರೈತರಿಗೆ ಆದ್ಯತೆ ನೀಡಲಾಗುವುದು
ಯೋಜನೆಯ ಉದ್ದೇಶ
ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಬಳಸಿ ಜಲ ಸಂಪನ್ಮೂಲವನ್ನು ಮಿತವ್ಯಯ ಮಾಡುವುದು
ರೈತರಿಗೆ ಸಹಾಯಧನ ನೀಡುವುದರ ಮೂಲಕ ಸೂಕ್ಷ್ಮ ನೀರಾವರಿಯ ಪದ್ಧತಿಯನ್ನು ರೈತರ ಜಮೀನುಗಳಲ್ಲಿ ಪ್ರೋತ್ಸಾಹಿಸಿ ಶೇಕಡ 50-70 ರಷ್ಟು ನೀರಿನ ಮಿತವೆಯ ಸಾಧಿಸುವುದಲ್ಲದೆ ವಿದ್ಯುಚ್ಛಕ್ತಿ ಮತ್ತು ಕೂಲಿ ವೆಚ್ಚವನ್ನು ಮಿತವೆಯ ಸಾಧಿಸುವುದು.
ಸೂಕ್ಷ್ಮ ನಿರಾವರಿಯಲ್ಲಿ ರಸ್ತಾವರಿ ಪದ್ಧತಿಯ ಮೂಲಕ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದರ ಮೂಲಕ ಶೇಕಡ 30- 40 ರಷ್ಟು ರಾಸಾಯನಿಕ ಗೊಬ್ಬರಗಳ ಮಿತವ್ಯಯ ಸಾಧಿಸುವುದು
ಬೆಳೆಗಳಲ್ಲಿ ಶೇಕಡ 30-100ರಷ್ಟು ಹೆಚ್ಚು ಇಳುವರಿ ಹಾಗೂ ಉತ್ಪಾದಕತೆ ಸಾಧಿಸುವುದು .
ಯೋಜನೆಯ ಮುಖ್ಯ ಘಟಕ ಕಾರ್ಯಕ್ರಮಗಳು
ಹನಿ ನೀರಾವರಿ/ತುಂತುರು ನೀರಾವರಿ
ರಾಜ್ಯದ್ಯಂತ ಎಲ್ಲಾ ವರ್ಗದ ರೈತರಿಗೆ ಹನಿ ನೀರಾವರಿ ಪ್ರತಿ ಫಲಾನುಭವಿಗೆ ಗರಿಷ್ಠ ಐದು ಹೆಕ್ಟರ್ ಪ್ರದೇಶದ ವರೆಗೆ ಸಹಾಯಧನ ನೀಡಲಾಗುವುದು ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಠ ಎರಡು ಹೆಕ್ಟರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು.
ಅನುದಾನ ಮತ್ತು ಸಹಾಯಧನ
2022 23ನೇ ಸಾಲಿನ ಭಾರತ ಸರ್ಕಾರದ ಮಾರ್ಗಸೂಚಿ ಪ್ರಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ರಾಜ್ಯದ ವಿವಿಧ ವರ್ಗದ ರೈತರಿಗೆ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಶೇಕಡ 55 ರಷ್ಟು ಹಾಗೂ ಇತರೆ ರೈತರಿಗೆ ಶೇಕಡ 45ರಷ್ಟು ಸಹಾಯಧನದ ಮಾದರಿಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈಗಾಗಲೇ ನೀಡುತ್ತಿರುವ ಅನುಪಾತದಲ್ಲಿ 60-40 ನೀಡಲಾಗುತ್ತದೆ ಆದ್ದರಿಂದ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಕೇಂದ್ರ ಹಾಗೂ ರಾಜ್ಯ ಪಾಲಿನ ಅನುಪಾತದ ವಿವರ ಈ ಕೆಳಗಿನಂತಿದೆ
ಸಣ್ಣ ಅತಿ ಸಣ್ಣ
ಕೇಂದ್ರದ ಪಾಲು -33%
ರಾಜ್ಯದ ಪಾಲು -22%
ಒಟ್ಟು -55%
ಇತರೆ ರೈತರು
ಕೇಂದ್ರದ ಪಾಲು-27%
ರಾಜ್ಯದ ಪಾಲು -27%
ಒಟ್ಟು -45%
ಎರಡು ಹೆಕ್ಟೇರುವರೆಗಿನ ಸಹಾಯಧನ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
ಕೇಂದ್ರದ ಪಾಲು -33%
ರಾಜ್ಯದ ಪಾಲು-57%
ಒಟ್ಟು -90%
ಇತರೆ
ಕೇಂದ್ರದ ಪಾಲು -33%
ರಾಜ್ಯದ ಪಾಲು-42%
ಒಟ್ಟು -75%
ಎರಡು ಹೆಕ್ಟರ್ ಮೇಲ್ಪಟ್ಟ ಸಹಾಯಧನ
ಎಲ್ಲಾ ವರ್ಗದ ರೈತರಿಗೆ
ಕೇಂದ್ರದ ಪಾಲು-27%
ರಾಜ್ಯದ ಪಾಲು-18%
ಒಟ್ಟು -45%
ಫಲಾನುಭವಿಗಳ ಅರ್ಹತೆ
ಫಲಾನುಭವಿಗಳು ರೈತರಾಗಿದ್ದು ಜಮೀನು ಅವರ ಹೆಸರಿನಲ್ಲಿರಬೇಕು ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನಿದ್ದು ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರು ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು)
ಮಹಿಳೆಯರ ಹೆಸರಿನಲ್ಲಿ ಖಾತೆ ಹೊಂದಿದ್ದಲ್ಲಿ ಮಹಿಳಾ ಖಾತೆದಾರರೇ ಅರ್ಜಿ ಸಲ್ಲಿಸಬೇಕು (ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲ )
ಫಲಾನುಭವಿಗಳು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ತೋಟಗಾರಿಕೆ ಬೆಳೆ ಬೆಳೆಯುವ ಆಸಕ್ತಿ ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿ ಅಳವಡಿಸಿದ ನಂತರ ತೋಟಗಾರಿಕೆ ಬೆಳೆಗಳನ್ನೇ ಬೆಳೆಯಬೇಕು
ಫಲಾನುಭವಿಗಳು ನೀರಾವರಿ ಮೂಲವನ್ನು ಹೊಂದಿರಬೇಕು ಹಾಗೂ ಸೂಕ್ಷ್ಮ ನೀರಾವರಿಗೆ ಯೋಗ್ಯವಿರುವಂತಹ ನೀರನ್ನು ಹೊಂದಿರಬೇಕು ಜೊತೆಗೆ ಸೂಕ್ಷ್ಮ ನೀರಾವರಿ ಘಟಕಗಳು ಕಾರ್ಯನಿರ್ವಹಿಸಲು ಅವಶ್ಯ ಇರುವ ವಿದ್ಯುತ್ ಶಕ್ತಿ ಅಥವಾ ಇತರೆ ಶಕ್ತಿ ಮೂಲಗಳನ್ನು ಹೊಂದಿರಬೇಕು (ತನ್ನ ಸ್ವಂತ ನಿರಾವರಿ ಮೂಲ ಇಲ್ಲದಿದ್ದಲ್ಲಿ ಬೇರೆ ರೈತರಿಂದ ಈ ಸಂಬಂಧ ಒಪ್ಪಿಗೆ ಪತ್ರ ಪಡೆದು ಸಲ್ಲಿಸಬೇಕು )
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಈ ಮೇಲೆ ತಿಳಿಸಿರುವಂತೆ ಗರಿಷ್ಠ ಎರಡು ಹೆಟ್ಟಿರುವರೆಗೆ ಶೇಕಡ 90ರಷ್ಟು ಸಹಾಯಧನ ನೀಡಲು ಅವಕಾಶವಿರುವುದರಿಂದ ಸದರಿ ಪಂಗಡಗಳಿಗೆ ಸೇರಿರುವ ಬಗ್ಗೆ ಆರ್‌ಡಿ ಸಂಖ್ಯೆ ಇರುವಂತಹ ಜಾತಿ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.
ಇತರೆ ರೈತರಿಗೆ ಈ ಮೇಲೆ ತಿಳಿಸಿರುವಂತೆ ಗರಿಷ್ಠ ಎರಡು ಹೆಕ್ಟರ್ ವರೆಗೆ ಶೇಕಡ 75 ರಷ್ಟು ಸಹಾಯಧನ ನೀಡಲು ಅವಕಾಶವಿರುತ್ತದೆ
ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಎರಡು ಹೆಕ್ಟರ್ ಮೇಲ್ಪಟ್ಟು 5 ಹೆಕ್ಟರ್ ಇರುವರೆಗೂ ಶೇಕಡ 45ರಷ್ಟು ಸಹಾಯಧನವನ್ನು ಪಡೆಯಬಹುದು
ಅರ್ಜಿ ಸಲ್ಲಿಸುವ ವಿಧಾನ
ರೈತರು ಸೂಕ್ಷ್ಮ ನೀರಾವರಿ ಯೋಜನೆಯ ಸಹಾಯಕ್ಕಾಗಿ farmers registration and unified beneficiary information system (FRUITS) ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಹೊಂದಿರಬೇಕಾಗಿರುತ್ತದೆ ಹಾಗೂ Horticulture management application for scheme implementation for regulating utilisation of benefits(HASIRU) ತಂತ್ರಾಂಶದ ಮೂಲಕ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆಯುವುದು
20223 ನೇ ಸಾಲಿನ ಮಾರ್ಗಸೂಚಿ ಹಾಗೂ ಅರ್ಜಿ ಇತರೆ ನಮೂನೆಗಳನ್ನು ತೋಟಗಾರಿಕಾ ಇಲಾಖೆ ವೆಬ್ಸೈಟ್ http://horticulturedir.karnataka.gov in/ ನಲ್ಲಿ ನೀಡಲಾಗಿದೆ. ಆದ್ದರಿಂದ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸಹಾಯಧನ ಪಡೆದುಕೊಳ್ಳಲು ಸಲ್ಲಿಸಬಹುದು.
ಅರ್ಜಿದಾರರು ಈ ಕೆಳಕಂಡ ವಿವರ ಹಾಗೂ ದಾಖಲಾತಿಗಳನ್ನು ಅರ್ಜಿಯೊಂದಿಗೆ ತಾಲೂಕು ಕಚೇರಿಗಳಲ್ಲಿ ಸಲ್ಲಿಸಬೇಕು
ನಿಗದಿತ ನಮೂನೆಯಲ್ಲಿ ನೋಂದಣಿ ಅರ್ಜಿ( ಆನ್ಲೈನ್ ಅಥವಾ ಇಲಾಖೆಯಲ್ಲಿ ಲಭ್ಯವಿರುವ ಅರ್ಜಿ )
ವೈಯಕ್ತಿಕ ವಿವರ ಹಾಗೂ ಮೊಬೈಲ್ ಅಥವಾ ದೂರವಾಣಿ ಸಂಖ್ಯೆ
ಪಹಣಿ
ಪಹಣಿಯಲ್ಲಿ ಬೆಳೆಯನ್ನು ನಮೂದಿಸದೆ ಇದ್ದಲ್ಲಿ ಕಂದಾಯ ಇಲಾಖೆಯಿಂದ ಡಿಜಿಟಲ್ ಬೆಳೆ ದೃಢೀಕರಣ ಪತ್ರ ಪಡೆಯುವುದು ( ಕಂದಾಯ ಇಲಾಖೆಯಿಂದ ನೀಡಲಾದ ಬೆಳೆ ದೃಢೀಕರಣ ಪತ್ರವನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು crop survey ವರದಿಯಿಂದ ಖಾತರಿಪಡಿಸಿಕೊಳ್ಳಬೇಕು )
ನೀರಿನ ಮೂಲದ ವಿವರ ( ಸ್ವತಹ ನೀರಿನ ಮೂಲ ಹೊಂದದೇ ಇದ್ದಲ್ಲಿ ಇತರರಿಂದ ನೀರು ಪಡೆಯುವ ಬಗ್ಗೆ ಒಪ್ಪಿಗೆ ಪತ್ರ ಸಲ್ಲಿಸುವುದು )
ನೀರು ಅಥವಾ ವಿದ್ಯುತ್ ಶಕ್ತಿ ಹಾಗೂ ಇತರೆ ಶಕ್ತಿಗಳ ಮೂಲಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾತರಿಪಡಿಸಿಕೊಳ್ಳಬೇಕಾಗಿರುತ್ತದೆ
ಮಣ್ಣು ಮತ್ತು ನೀರು ವಿಶ್ಲೇಷಣೆ ಪ್ರಮಾಣ ಪತ್ರ ಸಲ್ಲಿಸುವುದು ( ಇಲಾಖೆಯ ಜೈವಿಕ ಕೇಂದ್ರಗಳಿಂದ ಪಡೆಯುವುದು ಅಥವಾ ಸರ್ಕಾರಿ ಸೌಮ್ಯ ಅಥವಾ ಸರ್ಕಾರಿ ಅಂಗೀಕೃತ ಸಂಸ್ಥೆಗಳಿಂದ )
ಆಧಾರ್ ಕಾರ್ಡ್ ಪ್ರತಿ
ಇಲಾಖಾ ನೊಂದಾಯಿತ ಕಂಪನಿಯ ಇಂಜಿನಿಯರ್ ಅವರಿಂದ ದೃಢೀಕರಿಸಲ್ಪಟ್ಟ ವಿನ್ಯಾಸ ನೀಡುವುದು
ದರ ಪಟ್ಟಿಯನ್ನು ಹನಿ ಅಥವಾ ತುಂತುರು ನೀರಾವರಿ ಘಟಕ ಅಳವಡಿಸಿದ ಇಲಾಖೆ ಅನುಮೋದಿತ ಕಂಪನಿಯವರಿಂದ ಮಾತ್ರ ಪಡೆಯುವುದು.
Pre sanction order ನಲ್ಲಿ ನಮೂದಿಸಿರುವಂತೆ ರೈತರವಂತಿಕೆಯನ್ನು ಸಂಬಂಧಿತ ಸೂಕ್ಷ್ಮ ನೀರಾವರಿ ಕಂಪನಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಬಗ್ಗೆ ಆನ್ಲೈನ್ ಪೇಮೆಂಟ್ ಡೀಟೇಲ್ಸ್ ಅನ್ನು ತಂತ್ರಾಂಶದಲ್ಲಿ ನಮೂದಿಸಿ ಪ್ರತಿಯನ್ನು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅವರ ಕಚೇರಿಗೆ ಸಲ್ಲಿಸುವುದು
ಫಲಾನುಭವಿಯ ಬ್ಯಾಂಕ್ ಸಂಖ್ಯೆ ಐಎಫ್ಎಸ್ ಸಿ ಕೋಡ್ ಇತ್ಯಾದಿಗಳನ್ನು ಸಲ್ಲಿಸುವುದು ಸದರಿ ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು
ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿ ತಾವು ಆಗಲಿ ಅಥವಾ ತಮ್ಮ ಕುಟುಂಬದ ಸದಸ್ಯರಾಗಲಿ ಈ ಹಿಂದೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದಿರುವ ಅಥವಾ ಪಡೆಯದೆ ಇರುವ ಬಗ್ಗೆ ಘೋಷಣೆ ಪತ್ರ ಸಲ್ಲಿಸುವುದು
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಫಲಾನುಭವಿಗಳು ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ಆರ್ ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರವನ್ನು ಸಹ ಕಡ್ಡಾಯವಾಗಿ ನೀಡುವುದು
ರೊಟ್ಟಿಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆಗೆ ಶೇಕಡ 50 ರಷ್ಟು ಸಬ್ಸಿಡಿ
ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ದೇಶದ ರೈತ 2020-21 ನೇ ಸಾಲಿನಲ್ಲಿ 305 ದಶಲಕ್ಷ ಟನ್ ಆಹಾರ ಉತ್ಪಾದನೆ ಹಾಗೂ 320 ದಶಲಕ್ಷ ಟನ್ ಹಣ್ಣು-ತರಕಾರಿಗಳ ಉತ್ಪಾದನೆಯನ್ನು ಕೊಡುಗೆಯಾಗಿ ನೀಡಿದ್ದಾನೆ. ಕೊಯ್ಲೋತ್ತರ ನಂತರ ಶೇಖರಣೆ ಸಾಕಾಣಿಕೆ ಹಾಗೂ ಮಾರಾಟಕ್ಕೆ ಮುಂಚೆ ಹಣ್ಣು ತರಕಾರಿಗಳಲ್ಲಿ ಶೇಕಡ 25 ರಿಂದ 30 ಹಾಗೂ ಆಹಾರ ಧಾನ್ಯಗಳಲ್ಲಿ ಶೇಕಡ 8 ರಿಂದ 10 ಪ್ರತಿವರ್ಷ ನಷ್ಟವಾಗುತ್ತದೆ.
ನಷ್ಟ ತಡೆಯಲು ವೈಜ್ಞಾನಿಕ ಪದ್ಧತಿಯಲ್ಲಿ ಶೇಖರಣೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದಲ್ಲಿ ರೈತನಿಗೆ ಅಧಿಕ ಲಾಭ ದೊರೆಯುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು, ವಿಂಗಡಿಸಲು,ಗ್ರೇಡಿಂಗ್ ಮಾಡಲು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ಈಗಾಗಲೇ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದ ಕೃಷಿ ಉತ್ಪನ್ನಗಳನ್ನು ಪ್ರಾಥಮಿಕ ಹಂತದಲ್ಲಿ ಸಂಸ್ಕರಿಸುತ್ತಿದ್ದಾರೆ. ಪ್ರಾರಂಭಿಸಿದ ಘಟಕಗಳಿಗೆ ಆಧುನಿಕ ಯಂತ್ರೋಪಕರಣ ಹಾಗೂ ಸರ್ಕಾರದ ಸಹಾಯ ಮೂಲಕ ಬಲವರ್ಧನೆ ಗೊಳಿಸಿ ಸಂಸ್ಕರಣಾ ಘಟಕ, ವೇರ್ ಹೌಸ್, ಶೀತಲ ಗೃಹಗಳನ್ನು ಯೋಜನೆ ರೂಪಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಗಳ ಕ್ರಮಬದ್ಧ ಗೊಳಿಸುವ ಯೋಜನೆ( Prime Minister formalisation of micro food processing Enterprises -PMFME) ಯನ್ನು 2020-21 ರಿಂದ 5 ವರ್ಷಗಳ ಅವಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ 60:40 ಅನುಪಾತದ ಅನುದಾನದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸುವ ಆಹಾರ ಸಂಸ್ಕರಣೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ಐದು ವರ್ಷಗಳವರೆಗೆ ಆಹಾರ ಸಂಸ್ಕರಣೆಗಾಗಿ 10 ಸಾವಿರ ಕೋಟಿ ರೂ ಮೀಸಲಿಟ್ಟಿದ್ದಾರೆ. 2 ಲಕ್ಷ ಸಂಸ್ಕರಣ ಘಟಕಗಳ ಪ್ರಾರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಂತೆ ರಾಜ್ಯಕ್ಕೆ 493.5 ಕೋಟಿ ರು ಹಂಚಿಕೆ ಮಾಡಲಾಗಿದ್ದು, 10,784 ಘಟಕಗಳನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಈ ಯೋಜನೆಯನ್ನು ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲು ಕೃಷಿ ಇಲಾಖೆಯನ್ನು ನೋಡಲ್ ಇಲಾಖೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿ. (KAPPEC) ಅನ್ನು ರಾಜ್ಯದ ನೋಡಲೇ ಏಜೆನ್ಸಿ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ತಾಂತ್ರಿಕ ಸಂಸ್ಥೆಯನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ.
ಯೋಜನೆಯಲ್ಲಿ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ಮಾರ್ಗವನ್ನು ಅನುಸರಿಸುತ್ತೇವೆ ಪ್ರತಿ ಜಿಲ್ಲೆಯಲ್ಲಿ ಮಾರುಕಟ್ಟೆ ಸೃಷ್ಟಿಸುವ ದೃಷ್ಟಿಯಿಂದ ಆಸಕ್ತಿಯುಳ್ಳ ಉತ್ಸಾಹಿ ಉದ್ಯಮಿಗಳು ಹಾಗೂ ಈಗಾಗಲೇ ಸಣ್ಣಪ್ರಮಾಣದಲ್ಲಿ ಪ್ರಾಥಮಿಕ ಹಂತದ ಆಹಾರ ಸಂಸ್ಕರಣೆಯಲ್ಲಿ ತೊಡಗಿರುವವರಿಗೆ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಶೇಕಡಾ 50ಸಂಪರ್ಕಿತ ಸಹಾಯಧನವನ್ನು ಗರಿಷ್ಠ 15 ಲಕ್ಷ ರೂ ವರೆಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ಸ್ವಸಹಾಯ ಗುಂಪು, ರೈತ ಉತ್ಪಾದಕ ಸಂಸ್ಥೆ ಗಳಿಗೆ ಸಹಾಯ ಧನ ಒದಗಿಸಲಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಆಹಾರ ಸಂಸ್ಕರಣೆ ಉದ್ಯಮಗಳ ಪ್ರೋತ್ಸಾಹಕ್ಕಾಗಿ ಶೇಕಡಾ 15 ರಷ್ಟು ಹೆಚ್ಚಿನ ಸಹಾಯಧನ ನೀಡಲು 2021 -22 ಬಜೆಟ್ನಲ್ಲಿ ಘೋಷಿಸಿದೆ. ಒಟ್ಟಾರೆಯಾಗಿ ಶೇಕಡ 50ರಷ್ಟು ಸಬ್ಸಿಡಿಯನ್ನು ಯೋಜನೆಯಲ್ಲಿ ಪಡೆಯಬಹುದು.
ನಿಯಮಗಳೇನು?
ಕಿರು ಉದ್ಯಮ ಸ್ಥಾಪಿಸುವವರು ಶೇಕಡ 10 ಹಣವನ್ನು ವಂತಿಕೆ ಇರಿಸಿಕೊಳ್ಳಬೇಕಾಗುತ್ತದೆ. ಅರ್ಜಿದಾರರು ಆಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿ ಉಳ್ಳವರಾಗಿರಬೇಕು ಆಗಿರುತ್ತದೆ. ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತದೆ ಸಂಸ್ಥೆಗಳ ಆಗಿದ್ದಲ್ಲಿ ಕನಿಷ್ಠ ಮೂರುವರ್ಷದ ಸಂಸ್ಕರಣ ಅನುಭವ ಹೊಂದಿದವರಾಗಿರಬೇಕು.
ಯಾವ ಯಾವ ಉದ್ಯಮ ಮಾಡಬಹುದು?
ರೊಟ್ಟಿ ಮಾಡುವ ಯಂತ್ರ, ಎಣ್ಣೆಗಾಣ, ಬೆಲ್ಲದ ಗಾಣ, ಕಾರದಪುಡಿ ಘಟಕ, ಶಾವಿಗೆ, ಹಪ್ಪಳ-ಸಂಡಿಗೆ, ಹಿಟ್ಟಿನ ಗಿರಣಿ, ಬೇಕರಿ ಉತ್ಪನ್ನ, ಹಾಲಿನ ಉತ್ಪನ್ನ, ಉಪ್ಪಿನಕಾಯಿ ಸೇರಿದಂತೆ ಕಿರು ಆಹಾರ ಸಂಸ್ಕರಣೆ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವವರು http://mofpi.nic.in/pmfme/ ಪೋರ್ಟಲ್ ನಲ್ಲಿ ವಿವರಗಳನ್ನು ಭರ್ತಿ ಮಾಡಬೇಕು ಅಥವಾ ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕೂಡ ಅರ್ಜಿ ವಿವರಗಳನ್ನು ಭರ್ತಿ ಮಾಡಿಸಬಹುದು. ಜಿಲ್ಲಾ ಮಟ್ಟದಲ್ಲಿ ನೇಮಿಸಲ್ಪಟ್ಟ ಸಂಪನ್ಮೂಲ ವ್ಯಕ್ತಿಗಳು ಅರ್ಜಿ ಹಾಗೂ ಯೋಜನಾ ವರದಿ ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸುತ್ತಾರೆ. ಸಮಿತಿ ಅಧ್ಯಕ್ಷರು ಜಂಟಿ ಕೃಷಿ ನಿರ್ದೇಶಕ ರಾಗಿದ್ದು, ಸದರಿ ಅರ್ಜಿಗಳನ್ನು ಸಮಿತಿಯಲ್ಲಿಟ್ಟು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿಕೊಂಡು, ಬ್ಯಾಂಕ್ಗಳಿಗೆ ಸಾಲ ಮಂಜೂರಾತಿಗಾಗಿ ಕಳುಹಿಸುತ್ತಾರೆ. ಸಂಸ್ಥೆಗಳ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಸಮಿತಿಯು ನೋಡಲ ಏಜೆನ್ಸಿಗೆ ವರ್ಗಾಯಿಸುತ್ತದೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಹಕರಿಸುತ್ತಾರೆ. ಒಂದು ವೇಳೆ ಅರ್ಜಿಗಳು ಸಂಸ್ಥೆಗಳಿಂದ ಗುಂಪು ಅರ್ಜಿಗಳ ಆಗಿದ್ದಲ್ಲಿ ಜಿಲ್ಲಾ ಮಟ್ಟದ ಸಮಿತಿ ವರದಿ ಸಲ್ಲಿಸುತ್ತದೆ.ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಸುತ್ತದೆ. 15 ಲಕ್ಷಕ್ಕೂ ಹೆಚ್ಚು ಸಹಾಯಧನ ಬೇಕಾಗಿದ್ದಲ್ಲಿ ಸದರಿ ಅರ್ಜಿಗಳನ್ನು ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ಯಮಗಳ ಮಂತ್ರಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ 56 ಕಿರು ಸಂಸ್ಶಿಕರಣಾ ಉದ್ಯಮಗಳು ಪ್ರಾರಂಭವಾಗಿದ್ದು, ರಟ್ಟಿಹಳ್ಳಿ ತಾಲೂಕಿನ ದೊಡ್ಡಗುಬ್ಬಿ, ಮತ್ತು ಬ್ಯಾಡಗಿಯಲ್ಲಿ ಎಣ್ಣೆಗಾಣ ಘಟಕ, ಬ್ಯಾಡಗಿ ತಾಲೂಕ ಕಾಗಿನೆಲೆಯಲ್ಲಿ ಕಾರದಪುಡಿ ಘಟಕ, ಹಾವೇರಿ ತಾಲೂಕು ಕನಕಪುರದಲ್ಲಿ ರೊಟ್ಟಿ ಮಷೀನ್, ರಾಣೆಬೆನ್ನೂರು ತಾಲೂಕು ಹುಣಸೆಕಟ್ಟೆಯಲ್ಲಿ ಸುಗಂಧದ್ರವ್ಯ ಘಟಕ, ಸವಣೂರಿನಲ್ಲಿ ಹಿಟ್ಟಿನ ಗಿರಣಿ, ಹಾನಗಲ್ ತಾಲೂಕಿನ ಗೆಜ್ಜೆ ಹಳ್ಳಿಯಲ್ಲಿ ಮಸಾಲ ಸಂಸ್ಕರಣ ಘಟಕ, ಹಾನಗಲ್ ತಾಲ್ಲೂಕಿನ ಸೀಗೆಹಳ್ಳಿಯಲ್ಲಿ ಬೆಲ್ಲದ ಗಾಣ ಉದ್ದಿಮೆಗಳು ಸುಮಾರು 2.80 ಕೋಟಿ ಸಾಲ ಸಹಾಯಧನ ಪಡೆದಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಬ್ಯಾಂಕ್ ಪಾಸಬುಕ್