Agriculture infrastructure fund-ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆಯನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಕೃಷಿ-ಉದ್ಯಮಿಗಳು, ಕೃಷಿ-ತಂತ್ರಜ್ಞಾನಿಗಳು, ರೈತ ಗುಂಪುಗಳಿಗೆ ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏನಿದು ಹೊಸ ಕೃಷಿ ಮೂಲ ಸೌಕರ್ಯ ನಿಧಿ?:2029ರವರೆಗೆ 10 ವರ್ಷಗಳ ಕಾಲಾವಧಿಯನ್ನು ಇದು ಹೊಂದಿರುತ್ತದೆ. ರೈತರ ಬೆಳೆಯ ಸುಗ್ಗಿಯ ನಂತರ ಕೃಷಿ ಮೂಲಸೌಕರ್ಯಗಳ ನಿರ್ವಹಣೆಗೆ, ಸಮುದಾಯ ಬೆಳೆ ಸಂಪತ್ತುಗಳಿಗೆ, ಕೃಷಿ ಆಸ್ತಿಗಳನ್ನು ಪೋಷಿಸಲು ಆರ್ಥಿಕ ಬೆಂಬಲವಾಗಿ ಮತ್ತು ಬಡ್ಡಿ ರೂಪದಲ್ಲಿ ಹೂಡಿಕೆ ಮಾಡಲು ಸರ್ಕಾರದಿಂದ ಮಧ್ಯಮದಿಂದ ದೀರ್ಘಾವಧಿಯವರೆಗೆ ಸಾಲದ ಹಣಕಾಸು ನೆರವು ನೀಡುವ ಯೋಜನೆಯಾಗಿದೆ.
ಇದರಡಿ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಹಲವು ಸಂಸ್ಥೆಗಳ ಮೂಲಕ ಸಾಲವಾಗಿ ಪ್ರಾಥಮಿಕ ಕೃಷಿ-ಕ್ರೆಡಿಟ್ ಸೊಸೈಟಿಗಳು, ರೈತ ಗುಂಪುಗಳು, ರೈತ ಉತ್ಪನ್ನ ಸಂಘಗಳು, ಕೃಷಿ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಕೃಷಿ-ತಾಂತ್ರಿಕ ಸಂಸ್ಥೆಗಳಿಗೆ ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ 11 ಸಾರ್ವಜನಿಕ ವಲಯ ಬ್ಯಾಂಕ್ ಗಳು ಕೃಷಿ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿವೆ.
ಕೋವಿಡ್-19 ಆರ್ಥಿಕ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 20 ಲಕ್ಷ ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ನ ಭಾಗವಾಗಿದೆ. ಈ ಕೃಷಿ ಮೂಲಸೌಕರ್ಯ ನಿಧಿಯ ಮೂಲಕ ರೈತರು ಬೆಳೆಗಳನ್ನು ಬೆಳೆದ ನಂತರ ಅವುಗಳ ಸಂಗ್ರಹಕ್ಕೆ, ಮಾರಾಟಕ್ಕೆ ಅನುಕೂಲವಾಗುವ ಆಧುನಿಕ ಕೃಷಿ ಉಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಿದೆ. ಇದರಿಂದ ಕಡಿಮೆ ಬೆಲೆಯಿರುವಾಗ ಬೇಗನೆ ಹಾಳಾಗದಿರುವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಅಧಿಕ ಬೆಲೆ ಇರುವ ಸಂದರ್ಭದಲ್ಲಿ ಮಾರಾಟ ಮಾಡಿ ಅಧಿಕ ಬೆಲೆ ಪಡೆಯಬಹುದು.
ಸಾಲಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ 10 ಸಾವಿರ ಕೋಟಿ ರೂಪಾಯಿಗಳಂತೆ ಬಿಡುಗಡೆ ಮಾಡಲಾಗುತ್ತದೆ. 6 ತಿಂಗಳಿನಿಂದ 2 ವರ್ಷಗಳವರೆಗೆ ರೈತರಿಗೆ ಕೊಟ್ಟ ಸಾಲದ ಮರುಪಾವತಿಗೆ ಸಮಯವಿರುತ್ತದೆ. ಕ್ರೆಡಿಟ್ ಖಾತ್ರಿ ಸೌಲಭ್ಯವನ್ನೂ ಕ್ರೆಡಿಟ್ ಖಾತ್ರಿ ನಿಧಿ ಟ್ರಸ್ಟ್ ಮೂಲಕ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ 2 ಕೋಟಿಯವರೆಗಿನ ಸಾಲಕ್ಕೆ ನೀಡಲಾಗುತ್ತದೆ.
ಇನ್ನು, ಎಂ ಕಿಸಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಎಂಟೂವರೆ ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 17 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದರು.
2018ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯ 6ನೇ ಕಂತಿನ ಭಾಗವನ್ನು ಇಂದು ಪ್ರಧಾನಿ ಮೋದಿಯವರು ದೇಶದ ರೈತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. 2018ರ ಡಿಸೆಂಬರ್ ನಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ 9 ಕೋಟಿ ರೈತರಿಗೆ ಆರ್ಥಿಕ ಸಹಾಯವನ್ನು ಮಾಡುವ ಉದ್ದೇಶದಿಂದ 75 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರವಾಗಿ ವರ್ಗಾಯಿಸುವುದಾಗಿದೆ.
ನಿಜವಾದ ರೈತ ಫಲಾನುಭವಿಗಳಿಗೆ ಸರ್ಕಾರದ ಈ ನಗದು ಲಾಭ ಸಿಗಲು ಮತ್ತು ಯಾವುದೇ ರೀತಿಯಲ್ಲಿ ಸೋರಿಕೆ ತಡೆಗಟ್ಟಲು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿರುವ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕದ ಈ ಸಮಯದಲ್ಲಿ ಯೋಜನೆಯು ರೈತರಿಗೆ ಸಹಕಾರಿಯಾಗಲಿದೆ.
ಉದ್ದೇಶ
- ಶೀತಲ ಮಳಿಗೆಗಳು, ಗೋದಾಮುಗಳು, ಸಿಲೋಗಳು, ಪ್ಯಾಕಿಂಗ್ ಘಟಕಗಳು, ಮೌಲ್ಯಮಾಪನ/ಶ್ರೇಣಿೀಕರಣ, ಲಾಜಿಸ್ಟಿಕ್ ಸೌಲಭ್ಯಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು, ಪ್ಯಾಕಿಂಗ್ ಘಟಕಗಳು, ಮಾಗಿದ ಕೋಣೆಗಳು / ವ್ಯಾಕ್ಸಿಂಗ್ ಘಟಕಗಳು ಇತ್ಯಾದಿಗಳನ್ನು ಸ್ಥಾಪಿಸಲು.
ಉದ್ದೇಶ
- ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯವನ್ನು ಹೆಚ್ಚಿಸಲು.
ವೈಶಿಷ್ಟ್ಯಗಳು
- ಸೌಲಭ್ಯದ ಪ್ರಕಾರ: ಅವಧಿ ಸಾಲ
- ಅಂಚು:
- ಸಾಲದ ಮಿತಿ ರೂ. 2 ಕೋಟಿ ವರೆಗೆ: ಯೋಜನಾ ವೆಚ್ಚದ ಕನಿಷ್ಠ 10%.
- 2 ಕೋಟಿ ರೂ. ಸಾಲದ ಮಿತಿಗಿಂತ ಹೆಚ್ಚು: ಯೋಜನಾ ವೆಚ್ಚದ 25%.
- ಸಾಲದ ಪ್ರಮಾಣ:
- ಕನಿಷ್ಠ ಸಾಲ: ಮಿತಿ ಇಲ್ಲ
- ಗರಿಷ್ಠ ಸಾಲ: ಮಿತಿ ಇಲ್ಲ
- ಭದ್ರತೆ: ಬ್ಯಾಂಕಿನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ.
- ಮರುಪಾವತಿ: ಮರುಪಾವತಿ ಅವಧಿಯು ಹತ್ತು (10) ವರ್ಷಗಳಾಗಿದ್ದು, 6 – 24 ತಿಂಗಳ ನಿಷೇಧ ಅವಧಿಯನ್ನು ಒಳಗೊಂಡಿದೆ.
- ಬಡ್ಡಿ ದರ: –
- 2 ಕೋಟಿ ರೂ. ಸಾಲದ ಮಿತಿಯವರೆಗೆ: 6 ಮಿಲಿಯನ್ MCLR +100 ಬೇಸಿಸ್ ಪಾಯಿಂಟ್‌ಗಳು.
- ಬ್ಯಾಂಕಿನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ : ರೂ. 2.00 ಕೋಟಿ ಸಾಲದ ಮಿತಿಗಿಂತ ಹೆಚ್ಚು .
- ಬಡ್ಡಿ ಸಹಾಯಧನ – 2 ಕೋಟಿ ರೂ.ಗಳವರೆಗಿನ ಸಾಲಗಳಿಗೆ 7 ವರ್ಷಗಳ ಅವಧಿಗೆ ವಾರ್ಷಿಕ 3% ಬಡ್ಡಿ ಸಹಾಯಧನ.
- ಕ್ರೆಡಿಟ್ ಗ್ಯಾರಂಟಿ: –
- MSME ಗಳಿಗೆ CGTMSE : ರೂ.2 ಕೋಟಿ ವರೆಗೆ .
- 2 ಕೋಟಿ ವರೆಗೆ: ಡಿಎ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಫ್‌ಪಿಒ ಪ್ರಚಾರ ಯೋಜನೆಯಡಿಯಲ್ಲಿ ಎಫ್‌ಪಿಒ/ಎಫ್‌ಪಿಸಿಗಳಿಗೆ ಎಸ್‌ಎಫ್‌ಎಸಿಯಿಂದ.
- ಪೋರ್ಟಲ್: http://www.agriinfra.dac.gov.in
ಅರ್ಹ ಕೃಷಿ ಚಟುವಟಿಕೆಗಳು/ಯೋಜನೆಗಳು ಈ ಕೆಳಗಿನಂತಿವೆ
ಇ-ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು ಗೋದಾಮುಗಳು ಮತ್ತು ಸೈಲೊಗಳು + ಪ್ಯಾಕ್ ಹೌಸ್‌ಗಳು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ಶೀತಲಗೃಹ ಸರಪಳಿಗಳು ಸಾಗಾಣಿಕೆ ಸೌಲಭ್ಯಗಳು ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಹಣ್ಣು ಮಾಗಿಸುವ ಘಟಕಗಳು
ಮೌಲ್ಯಮಾಪನ ಘಟಕಗಳು ಸಂಕುಚಿತ ಜೈವಿಕ ಅನಿಲ (CBG) ಸ್ಥಾವರ + ಸಾವಯವ ಪರಿಕರ ಉತ್ಪಾದನೆ + ಜೈವಿಕ ಉತ್ತೇಜಕ ಉತ್ಪಾದನಾ ಘಟಕಗಳು * ಸಸ್ಯ ನರ್ಸರಿ /ಅಂಗಾಂಶ ಕೃಷಿ ಬೀಜ ಸಂಸ್ಕರಣೆ + ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಮಾರ್ಟ್ ಮತ್ತು ನಿಖರವಾದ ಕೃಷಿ ಸಂಯೋಜಿತ ಸ್ಪಿರುಲಿನಾ ಉತ್ಪಾದನೆ ಮತ್ತು ಸಂಸ್ಕರಣಾ ಘಟಕಗಳು ರೇಷ್ಮೆ ಕೃಷಿ ಸಂಸ್ಕರಣಾ ಘಟಕ • ಜೇನು ಸಂಸ್ಕರಣಾ ಘಟಕ ಪ್ಲಾಂಟ್ ಕ್ಯಾರಂಟೈನ್ ಘಟಕಗಳು ಮತ್ತು ಸಾಮೂಹಿಕ ಕೃಷಿ ಅಡಿ: ಜಲಕೃಷಿ, ವಾಯುಕೃಷಿ, ಹಸಿರುಮನೆ, ಬಹುಮಹಡಿ ಕೃಷಿ, ಅಣಬೆ ಬೇಸಾಯ
ಅರ್ಹ ಫಲಾನುಭವಿಗಳು
ರೈತರು/ ರೈತ ಉತ್ಪಾದಕ ಸಂಸ್ಥೆಗಳು, ಪ್ರಾಂತೀಯ ಸಹಕಾರ ಒಕ್ಕೂಟಗಳು ಕೃಷಿ ಉದ್ಯಮಿಗಳು / ನವೋದ್ಯಮಿಗಳು ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು + ವಿವಿಧೋದ್ದೇಶ ಸಹಕಾರ ಸಂಘಗಳು * ಸ್ವ-ಸಹಾಯ ಗುಂಪುಗಳು / ಜಂಟಿ ಬಾಧ್ಯತಾ ಗುಂಪುಗಳು / ಖಾಸಗಿ ಮಾಲೀಕತ್ವ ಸಂಸ್ಥೆಗಳು.
ಯೋಜನೆಯಲ್ಲಿ ಭಾಗವಹಿಸುವ ಹಣಕಾಸು ಸಂಸ್ಥೆಗಳು:
ರಾಷ್ಟ್ರೀಕೃತ ಬ್ಯಾಂಕುಗಳು + ಶೆಡ್ಯೂಲ್ಡ್ ಸಹಕಾರಿ ಬ್ಯಾಂಕ್ ಗಳು + ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಸಣ್ಣ ಹಣಕಾಸು ಬ್ಯಾಂಕುಗಳು + ಬ್ಯಾಂಕೇತರ ಹಣಕಾಸು ಸಂಸ್ಥೆಗಳು + ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ ಸಿಡಿಸಿ).
ಕೃಷಿ ಮೂಲಭೂತ ಸೌಕರ್ಯ ನಿಧಿ (ಎಐಎಫ್ ) ಯೋಜನೆಯ ಅನುಷ್ಠಾನಕ್ಕೆ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸ್ವಸಹಾಯ ಸಂಘ, ರೈತ ಉತ್ಪಾದಕ ಸಂಸ್ಥೆ, ಕೃಷಿ ನವೋದ್ಯಮಿಗಳು, ಜಂಟಿ ಬಾಧ್ಯತಾ ಗುಂಪು, ಮಾರುಕಟ್ಟೆ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದು.
ಭಾರತ ಸರ್ಕಾರ ಹೊಸ ಕೇಂದ್ರ ಪುರಸ್ಕೃತ “ಕೃಷಿ ಮೂಲಭೂತ ಸೌಕರ್ಯ ನಿಧಿಯಡಿಯಲ್ಲಿ ಹಣಕಾಸು ಸೌಲಭ್ಯಗಳು” ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಕೊಯ್ಲೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿಗಳನ್ನು ಸೃಷ್ಟಿಸಲು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯ ಭಾಗಕ್ಕೆ ಸಹಾಯಧನವನ್ನು ಒದಗಿಸುವುದು, ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಶೇ 9ರ ಬಡ್ಡಿಯ ಭಾಗಕ್ಕೆ ಶೇ 3ರ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.
ನೀಡಲಾಗುವ ಬಡ್ಡಿ ಸಹಾಯಧನದ ಗರಿಷ್ಟ ಮೊತ್ತ ರೂ. 2 ಕೋಟಿ. ಸುಧಾರಿತ ಮಾರುಕಟ್ಟೆ ಸೌಕರ್ಯವನ್ನು ಸೃಷ್ಟಿಸಿ ರೈತರು ಅವರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
ಗೋದಾಮು, ಸೈಲೋಗಳು, ಪ್ಯಾಕ್ ಹೌಸ್‍ಗಳು, ಜೋಡಣಾ ಘಟಕಗಳು, ವಿಗಂಡಣೆ ಮತ್ತು ಶ್ರೇಣಿಕರಣ ಘಟಕಗಳು, ಶೀಥಲ ಗೃಹಗಳು, ಸಂಗ್ರಹಣಾ ಕೇಂದ್ರಗಳು, ಸಾಮೂಹಿಕ ಅಣಬೆ ಉತ್ಪಾದನ ಚಟುವಟಿಕೆಗಳು, ಸಾವಯವ ಕೃಷಿ ಪರಿಕರಗಳ ಉತ್ಪಾದನ ಘಟಕಗಳು ಮತ್ತು ಜೈವಿಕ ಪ್ರಚೋದಕ ಘಟಕಗಳು, ಪ್ರಾಥಮಿಕ ಸಂಸ್ಕರಣಾ ಘಟಕಗಳು ಮತ್ತು ಸಾಕಾಣಿಕ ಸೌಲಭ್ಯಗಳನ್ನು ಪಡೆಯಬಹುದಾದ ಅರ್ಹ ಯೋಜನೆಗಳಾಗಿರುತ್ತವೆ.
ಅರ್ಜಿಕೆ ಹೇಗೆ?: ಫಲಾನುಭವಿಯು ತಮ್ಮ ಪ್ರಸ್ತಾವನೆಗೆ ಸಾಲ ಪಡೆಯುವ ಸಂಬಂಧಿತ ಹಣಕಾಸು ಸಂಸ್ಥೆಯೊಂದಿಗೆ ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಹಾಯಧನ ಪಡೆಯಲು ನೋಂದಾಯಿಸಿಕೊಳ್ಳಬೇಕು. ಫಲಾನುಭವಿ/ ಅರ್ಜಿದಾರರು ಅಥವಾ ಸಾಲ ವಿತರಿಸುವ ಹಣಕಾಸು ಸಂಸ್ಥೆಯು ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯ ಆನ್ ಲೈನ್ ಪೋರ್ಟಲ್ www.agriinfra.dac.gov.in ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಸಂಬಂಧಿತ ಸಾಲ ವಿತರಣಾ ಸಂಸ್ಥೆಗಳು ಅರ್ಹ ಪ್ರಸ್ತಾವನೆಗಳ ಪರಿಶೀಲನೆ ಕೈಗೊಂಡು ಸಾಲ ಮಂಜೂರಾತಿ ನೀಡಿ ಸಾಲ ವಿತರಿಸಲಾಗುತ್ತದೆ. ಸಾಲ ವಿತರಣೆ ನಂತರ ಬಡ್ಡಿ ಸಹಾಯಧನ ಹಾಗೂ ಸಾಲಕ್ಕೆ ಖಾತರಿಯನ್ನು ಕೇಂದ್ರ ಸರ್ಕಾರವು ಸಂಬಂಧಿಸಿದ ಸಾಲ ವಿತರಣಾ ಸಂಸ್ಥೆಗಳಿಗೆ ಒದಗಿಸುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.