Akrama Sakrama-ರೈತರಿಗೆ ಸಿಹಿಸುದ್ದಿ, ಕೃಷಿ ಪಂಪಸೆಟ್ ಅಕ್ರಮ ಸಕ್ರಮ ಸೇರಿದಂತೆ ನಿರಂತರ 7 ಗಂಟೆಗಳ ವಿದ್ಯುತ್

Akrama sakrama-ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಸಿ.ಬಿ. ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂತ್ರಿಕ ಸಾದ್ಯತೆ ಇರುವ ಉಪಕೇಂದ್ರಗಳಿಂದ ನಿರಂತರ 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದರು. ತಾಂತ್ರಿಕ ಸಾದ್ಯತೆ ಇಲ್ಲದ ಪ್ರದೇಶಗಳಲ್ಲಿ, ಹಗಲು 4 ಗಂಟೆ ಮತ್ತು ರಾತ್ರಿ 3 ಗಂಟೆ ಸೇರಿ ಒಟ್ಟು 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಅಕ್ರಮ ಪಂಪ್‌ಸೆಟ್‌ಗಳ ಸಕ್ರಮೀಕರಣ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2.5 ಲಕ್ಷ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದ್ದು, ಮುಂದಿನ ವರ್ಷದಲ್ಲಿ ಬಾಕಿ ಇರುವ 2 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.

ವಿದ್ಯುತ್ ಸಂಪರ್ಕದ ವಿಚಾರ

ರಾಜ್ಯದಲ್ಲಿ 500 ಮೀಟರ್ ಒಳಗಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸಂಪರ್ಕ ಒದಗಿಸಲಾಗುತ್ತಿದೆ. 500 ಮೀಟರ್‌ಗೆ ಅಧಿಕ ಅಂತರದಲ್ಲಿರುವ ಪಂಪ್‌ಸೆಟ್‌ಗಳಿಗೆ ವಿಶೇಷ ಯೋಜನೆ ಅಡಿಯಲ್ಲಿ ಸಂಪರ್ಕ ನೀಡಲಾಗುತ್ತಿದೆ.

ವಿಜಯಪುರದಲ್ಲಿ ವಿದ್ಯುತ್ ಪೂರೈಕೆ

ವಿಜಯಪುರ ಜಿಲ್ಲೆಯಲ್ಲಿ 353 ಕೃಷಿ ಮಾರ್ಗಗಳಿಗೆ ಹಗಲು 7 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. 165 ಮಾರ್ಗಗಳಲ್ಲಿ ಹಗಲು 4 ಗಂಟೆ, ರಾತ್ರಿ 3 ಗಂಟೆ, 42 ಮಾರ್ಗಗಳಲ್ಲಿ ಹಗಲು 3 ಗಂಟೆ ಮತ್ತು ರಾತ್ರಿ 4 ಗಂಟೆ, 43 ಮಾರ್ಗಗಳಲ್ಲಿ ಹಗಲು 3 ಗಂಟೆ ಹಾಗೂ ರಾತ್ರಿ 3 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

sreelakshmisai
Author

sreelakshmisai

Leave a Reply

Your email address will not be published. Required fields are marked *