ಕರ್ನಾಟಕ ಸರ್ಕಾರದ ಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೂಲಕ, ಮಹತ್ವದ ‘ಯುವನಿಧಿ’ ಯೋಜನೆ 2023ರ ಡಿಸೆಂಬರ್ 26ರಂದು ಪ್ರಾರಂಭಿಸಲಾಗಿದೆ.
ಅರ್ಹತೆ:
2023-24ರಲ್ಲಿ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪೂರೈಸಿ ಆರು ತಿಂಗಳಾದರೂ ಉದ್ಯೋಗ ವಿಲ್ಲದವರು ಹಾಗೂ ಉನ್ನತ ಶಿಕ್ಷಣ ಮುಂದುವರೆಸದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯ ವಿಧಾನ:
ಅಭ್ಯರ್ಥಿಗಳು ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ನಿರುದ್ಯೋಗ ಭತ್ಯೆ:
ಪದವೀಧರರು, ಸ್ನಾತಕೋತ್ತರರು, ಎಂಜಿನಿಯರಿಂಗ್ ಪದವೀಧರರು – ₹3,000 ಪ್ರತಿ ತಿಂಗಳುಡಿಪ್ಲೋಮಾ ಪದವೀಧರರು – ₹1,500 ಪ್ರತಿ ತಿಂಗಳುಉದ್ಯೋಗ ದೊರಕುವವರೆಗೆ ಅಥವಾ ಗರಿಷ್ಠ 2 ವರ್ಷಗಳವರೆಗೆ ಈ ಭತ್ಯೆ ಲಭ್ಯ.
ಸ್ವಯಂ ಘೋಷಣೆ:ಹಣ ಪಡೆಯುತ್ತಿರುವ ಫಲಾನುಭವಿಗಳು ಪ್ರತಿ 3 ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಸಲ್ಲಿಸಬೇಕು. ಮಾರ್ಚ್, ಏಪ್ರಿಲ್, ಮೇ ತಿಂಗಳ ಮಾಹಿತಿಯನ್ನು ಮೇ 25ರೊಳಗೆ ಸಲ್ಲಿಸಬೇಕು.
ಸಂಪರ್ಕ ಮಾಹಿತಿ:
ಸಹಾಯವಾಣಿ: 1800 599 9918ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ: 9449692691 (ಕಚೇರಿ ವೇಳೆಯಲ್ಲಿ ಸಂಪರ್ಕಿಸಿ)