Arecanut plantation-ಅಡಿಕೆ-ತೆಂಗಿನ ನಡುವೆ ಜಾಯಿಕಾಯಿ ಆಪತ್ಭಾಂದವ!
ಜಾಯಿಕಾಯಿ ಕೃಷಿಯಿಂದ ಎಷ್ಟೆಲ್ಲಾ ಲಾಭಗಳಿವೆ ನಿಮಗೆ ಗೊತ್ತಾ..?
ಅಡಿಕೆ ಮತ್ತು ತೆಂಗು ನಮ್ಮ ಬಹುತೇಕ ರೈತರ ನೆಚ್ಚಿನ ತೋಟಗಾರಿಕೆ ಬೆಳೆಗಳು. ಬೆಳೆಯಲು ಸಾಧ್ಯತೆ ಇಲ್ಲದವರೂ ಈ ತೋಟಗಳೆಡೆಗೆ ಒಂದು ಸೆಳೆತ ಹೊಂದೇ ಇರುವರು. ಈ ಸೆಳೆತಕ್ಕೆ ಮುಖ್ಯ ಕಾರಣ ಅಡಿಕೆ ಮತ್ತು ತೆಂಗಿನ ತೋಟಗಳ ಲಾಭ ಮತ್ತು ಆ ಮರಗಳ ನೆರಳು ಬಳಸಿ ಅಂತರ ಬೆಳೆಯಾಗಿ ಮತ್ತಷ್ಟು ಲಾಭದಾಯಕ ಬೆಳೆಗಳ ಬೆಳೆಸಲು ಇರುವ ಸಾಧ್ಯತೆಗಳು.
ಕಣ್ಣಿಗೆ ಹಚ್ಚಸಿರ ನೋಟ ಬಹು ಬೆಳೆಗಳ ಅಡಿಕೆ-ತೆಂಗಿನ ತೋಟ. ಸೂಕ್ತ ಅಂತರ ನೋಡಿಕೊಂಡು ಯೋಜಿತವಾಗಿ ಅಡಿಕೆ ಮತ್ತು ತೆಂಗಿನ ನಡುವೆ ಜಾಯಿಕಾಯಿ, ಲವಂಗ, ಕೋಕೋ, ಕಿತ್ತಳೆ, ಕಾಳು ಮೆಣಸು, ಕಾಫಿ, ಏಲಕ್ಕಿ, ಸುವರ್ಣ ಗೆಡ್ಡೆ, ಕೆಸುವಿನ ಗೆಡ್ಡೆ, ಸಿಹಿ ಗೆಣಸು, ಗಾಂಧಾರಿ ಮೆಣಸು, ಶುಂಠಿ, ಅರಿಶಿಣ ಹೀಗೆ ಇನ್ನೂ ಹತ್ತು ಹಲವಾರು ಬೆಳೆಗಳನ್ನು ಬೆಳೆಯಲು ಮತ್ತು ಲಾಭಗಳಿಸಲು ಸದಾವಕಾಶಗಳುಂಟು.
ಜಾಯಿಕಾಯಿ ಒಂದು ದೀರ್ಘಾವಧಿ ಅಂತರ ಬೆಳೆಯಾಗಿ ನಮ್ಮ ರೈತರಿಗೆ ಹಾಗೂ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಹೆಚ್ಚು ಲಾಭದಾಯಕ. ಅಂತರ ಬೆಳೆಯಾಗಿ ಏನೆಲ್ಲಾ ಉಪಯೋಗಗಳಿವೆ ಎಂದು ನೋಡುವುದಾದರೆ…
ಅ. ಜಾಯಿಕಾಯಿ ಮತ್ತು ಜಾಯಿ ಪತ್ರೆಗೆ ಇಳಿಕೆಯಿಲ್ಲದ ಏರುಗತಿಯ ಮಾರುಕಟ್ಟೆ ಬೆಲೆ ಮತ್ತು ಬೇಡಿಕೆ ಇದೆ. ಆಯುರ್ವೇದ ಮತ್ತು ಆಹಾರದಲ್ಲಿನ ಹೆಚ್ಚೆಚ್ಚು ಬಳಕೆಯೇ ಇದಕ್ಕೆ ಕಾರಣ. ಉದಾಹರಣೆಗೆ ನೋಡುವುದಾದರೆ ಇತ್ತೀಚಿನ ವರ್ಷಗಳಲ್ಲಿ ರೈಸ್ ಬಾತ್, ಪಲಾವ್, ಬಿರಿಯಾನಿ ಮತ್ತಿತರ ಸ್ಪೈಸಿ ಅಡುಗೆಗಳ ಆಸ್ವಾದನೆ 24*7 ಆಗಿದೆ.
ಆ. ಜಾಯಿಕಾಯಿ ಮರವು ತಾಯಿ ಬೇರಿನ ಜಾತಿಯದಾದ್ದ ಕಾರಣ ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಭೂಮಿಯ ಆಳಕ್ಕೆ ಮಳೆ ನೀರು ಹಿಂಗುವುದು. ನೀರು ಅಗತ್ಯವಿರುವ ಬೇಸಿಗೆಯ ದಿನಗಳಲ್ಲಿ ಭೂಮಿಯ ಆಳದಿಂದ ತೇವಾಂಶ ಪೂರೈಕೆಯಾಗುವುದು.
ಇ. ಜಾಯಿಕಾಯಿ ಮರಗಳು ತೋಟಕ್ಕೆ ನೆರಳು ನೀಡಿ ಸೂರ್ಯನ ಬಿಸಿಲಿನಿಂದ ಎರೆ ಹುಳುಗಳು ಮತ್ತು ಇತ್ಯಾದಿ ಸೂಕ್ಷ್ಮಾಣು ಜೀವಿಗಳನ್ನು ಸಂರಕ್ಷಿಸುವವು, ತೋಟದ ಫಲವತ್ತತೆ ಹೆಚ್ಚಲು ಹಾಗೂ ಮಣ್ಣಿನ ಆರೋಗ್ಯ ಕಾಯಲು ಸಹಕರಿಸುವವು.
ಈ. ಜಾಯಿಕಾಯಿ ಮರದ ಎಲೆಗಳು ಹಣ್ಣಾಗಿ ಬಿದ್ದು ಮಣ್ಣಿನಲ್ಲಿ ಹ್ಯೂಮಸ್ ಸೃಷ್ಟಿಯಾಗುವುದು. ಮಣ್ಣು ಸ್ವಾವಲಂಬಿ ಆಗುವುದು.
ಉ. ಜಾಯಿಕಾಯಿ ಮರಗಳು ಅಡಿಕೆ ಮತ್ತು ತೆಂಗಿನ ಮರಗಳ ನಡುವೆ ಸಾವಕಾಶವಾಗಿ, ಎತ್ತರವಾಗಿ ಬೆಳೆಯುವುದರಿಂದ ಬೇಸಿಗೆ ಮತ್ತು ಭೀಕರ ಬರಗಾಲದಲ್ಲೂ ಅಡಿಕೆ ಮತ್ತು ತೆಂಗಿನ ತೋಟ ಒಣಗದಂತೆ ಕಾಯುತ್ತವೆ.
ಊ. ಅಡಿಕೆ ಮತ್ತು ತೆಂಗಿನ ತೋಟಕ್ಕೆ ಬೀಸುವ ಬಿಸಿಗಾಳಿ ಮತ್ತು ಬಿರುಗಾಳಿ ನಿಯಂತ್ರಿಸಿ ತೋಟವನ್ನ ತಂಪಾಗಿಡುತ್ತವೆ, ತೇವಾಂಶ ಕಾಪಾಡುತ್ತವೆ.
ಋ. ಸೂಕ್ತ ಅಂತರ ಕೊಟ್ಟು ಅಡಿಕೆ ಮತ್ತು ತೆಂಗಿನ ನಡುವೆ ಜಾಯಿಕಾಯಿ ಬೆಳೆಯುವುದರಿಂದ ಅಡಿಕೆ ಮತ್ತು ತೆಂಗಿಗೆ ಬರುವ ರೋಗಗಳು ನಿಯಂತ್ರಣವಾಗುತ್ತವೆ. ಅಡಿಕೆ ಮತ್ತು ತೆಂಗಿನ ಮರಗಳು ಆರೋಗ್ಯವಾಗಿದ್ದು ಹೆಚ್ಚು ಫಸಲು ಕೊಡುತ್ತವೆ.
ಎ. ಯೋಜಿತವಾಗಿ ಅಂತರ ಬೆಳೆಯಾಗಿ ಜಾಯಿಕಾಯಿ ಗಿಡಗಳ ನೆಟ್ಟು ಬೆಳೆಸಿದರೆ ಜಾಯಿಕಾಯಿ ಮರಗಳು ಬೆಳೆದಂತೆಲ್ಲಾ ಅಡಿಕೆ ಮತ್ತು ತೆಂಗಿಗಿಂತಲೂ ಹೆಚ್ಚು ಲಾಭ ಜಾಯಿಕಾಯಿ ಮರಗಳಿಂದ ಸಿಗುವುದು.
Lemon plantation-ಅಡಿಕೆಗಿಲ್ಲಾ ಉಳಿಗಾಲ,ಅಡಿಕೆ ಬಿಡಿ, ಬಿಜಾಪುರದ ಕಾಗ್ಜಿ ನಿಂಬೆ ನೆಡಿ
ಭಾರತ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಅಡಿಕೆ ಉತ್ಪಾದನೆ ಮಾಡುವ ದೇಶ. ನಮ್ಮ ಕರ್ನಾಟಕದಲ್ಲೇ ನೋಡುವುದಾದರೆ 2018ರ ಈಚೆಗೆ ಮೂರು ಪಟ್ಟು ಅಡಿಕೆ ಬೆಳೆ ಕ್ಷೇತ್ರ ವಿಸ್ತರಣೆಯಾಗಿದೆ. ರೈತರ ಪಾಲಿಗೆ ಗ್ಯಾರೆಂಟಿ ಬೆಳೆಯಾಗಿದ್ದ ಅಡಿಕೆಗೆ ಮತ್ತು ರೈತರಿಗೀಗ ಸಂಕಷ್ಟದ ಕಾಲ! ಒಂದು ಕಡೆ ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ಹಸಿರ ಸಿರಿಯ ಅಡಿಕೆ ತೋಟ ಬರದ ಭೀಕರತೆಯಲ್ಲಿ ಬೆಂದು ಸ್ಮಶಾನದಂತಾಗುತ್ತಿದ್ದರೇ; ಮತ್ತೊಂದು ಕಡೆ ಹಳದಿ ರೋಗಕ್ಕೆ ಸೂಕ್ತ ಔಷಧಿ ಪತ್ತೆಯಾಗುವ ಮೊದಲೇ ಮಾರಣಾಂತಿಕ ಎಲೆ ಚುಕ್ಕಿ ರೋಗ ಅಡಿಕೆ ಬೆಳೆಗಾರರ ಉಸಿರು ನಿಲ್ಲಿಸಿದೆ; ಮಗದೊಂದು ಕಡೆ ಮಾತೆತ್ತಿದರೆ ರೈತರ ಉದ್ಧಾರ ಮಾಡ್ತಿದ್ದೀವಿ, ಆದಾಯ ಡಬ್ಬಲ್ ಮಾಡ್ತಿದ್ದೀವಿ ಅನ್ನೋ ನಮ್ಮದೇ ಸರ್ಕಾರ ಮತ್ತು ರಾಜಕಾರಣಿಗಳು ಕಾರ್ಪೋರೇಟ್ ಧಣಿಗಳಿಗೆ ಕಡಿಮೆ ಬೆಲೆಯಲ್ಲಿ ವಿದೇಶಗಳಿಂದ ಲಕ್ಷಾಂತರ ಟನ್ ಅಡಿಕೆ ತರಿಸಿಕೊಳ್ಳಲು ಏನೆಲ್ಲಾ ಸುಗಮ ವ್ಯವಸ್ಥೆ ಮಾಡಿಕೊಡಬೇಕೋ ಅವೆಲ್ಲವನ್ನೂ ಮಂದಹಾಸ ಬೀರುತ್ತಾ ಮಾಡಿಕೊಡುತ್ತಿಹರು, ನಮಗೆ ಚಟ್ಟ ಕಟ್ಟುತ್ತಿಹರು.
ಬಂಧುಗಳೇ…*
ಇಡೀ ಒಕ್ಕೂಟ ಭಾರತದಲ್ಲಿ ಅಸ್ಸಾಂ ರಾಜ್ಯದ ನಿಂಬೆ ತಳಿ ಬಿಟ್ಟರೇ ಭೌಗೋಳಿಕ ಮಾನ್ಯತೆ ದಕ್ಕಿಸಿಕೊಂಡಿರೋ ಮತ್ತೊಂದು ನಿಂಬೆ ತಳಿ ಎಂದರೆ ಅದು ನಮ್ಮ ಕನ್ನಡ ನಾಡಿನ ಬೆಳವಲ ಭೂಮಿಯ ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ. ಅಸ್ಸಾಂ ನಿಂಬೆ ಹಣ್ಣು ಸೌತೆಕಾಯಿಯಂತೆ ಉದ್ದವಿದ್ದರೇ, ಬಿಜಾಪುರದ ಕಾಗ್ಜಿ ನಿಂಬೆ ಹಣ್ಣು ಕ್ರಿಕೆಟ್ ಬಾಲ್ ನಂತೆ ಗುಂಡಾಗಿರುವುದು. ಹಂಗಾಗಿ ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಿಜಾಪುರದ ಕಾಗ್ಜಿ ನಿಂಬೆಗೆ ಬೇಡಿಕೆ, ಬೆಲೆ ಮತ್ತು ಗ್ರಾಹಕರ ಮೆಚ್ಚುಗೆ ಹೆಚ್ಚು.
ಭೌಗೋಳಿಕ ಮಾನ್ಯತೆ (Geographical Indication) ಪಡೆದಿರೋ ಬಿಜಾಪುರದ ಕಾಗ್ಜಿ ನಿಂಬೆ ಹಣ್ಣಿನ ಗುಣ-ವಿಶೇಷತೆಗಳ ಸಂಕ್ಷಿಪ್ತವಾಗಿ ಹೇಳುವುದಾದರೆ…*
ಅ. ‘ಸಿ’ ವಿಟಮಿನ್ ನಿಂದ ಸಮೃದ್ಧವಾದ 74% ರಷ್ಟು ಸ್ವಾದಿಷ್ಟ ರಸಭರಿತ ಹಣ್ಣು
ಆ. ಕ್ರಿಕೆಟ್ ಬಾಲ್ ನಂತ ಗುಂಡಾಕಾರ
ಇ. ಆಕರ್ಷಕ ಬಣ್ಣ ಮತ್ತು ಹೊಳಪು
ಈ. ಹೂನಂತಾ ಪರಿಮಳ
ಉ. ಕಹಿ ಅಂಶವಿಲ್ಲದ ಸಿಹಿ ಹುಳಿ
ಊ. ಬಹುಪಯೋಗಿ, ಜನೋಪಯೋಗಿ ಮತ್ತು ತಾಳಿಕೆ ಹಾಗೂ ಬಾಳಿಕೆ
ಋ. ವರ್ಷ ಪೂರ್ತಿ ಫಸಲು, ಭರಪೂರ ಲಾಭ
ಎ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರೀ ಬೇಡಿಕೆ
*ಎಲ್ಲಾ ಲೆಕ್ಕಾಚಾರದಲ್ಲೂ ಬಿಜಾಪುರದ ಕಾಗ್ಜಿ ನಿಂಬೆ ಕೃಷಿ ಅಡಿಕೆ ಬೆಳೆಗಿಂತ ದುಪ್ಪಟ್ಟು ಲಾಭದ ಬೆಳೆ, ರೈತರ ಪಾಲಿಗೆ ATM ಇದ್ದಂತೆ! ಅಡಿಕೆ ಫಸಲು ವರ್ಷಕ್ಕೊಮ್ಮೆ ಕೊಯ್ಲು, ಆದರೆ ನಿಂಬೆ ಬಹುತೇಕ ವರ್ಷ ಪೂರ್ತಿ ಫಸಲು. ತಂತು ಬೇರಿನ ಅಡಿಕೆ ಬೆಳೆಗೆ ಹೆಚ್ಚು ನೀರು ಬೇಕು, ನೀರಿನ ಕೊರತೆಯಾದರೆ ತೋಟ ಮತ್ತು ರೈತರ ಬದುಕು ಎರಡು ಒಣಗುವುದು. ನಿಂಬೆ ತಾಯಿ ಬೇರು ಜಾತಿಯ ಮರ – ಬರ ಸಹಿಸುವ ಶಕ್ತಿ ಇದೆ, ಬೇಸಿಗೆ ಮತ್ತು ಬರದಲ್ಲಂತೂ ನಿಂಬೆ ಫಸಲಿಗೆ ಬಂಗಾರದ ಬೇಡಿಕೆ ಮತ್ತು ಬೆಲೆಯೂ ದಕ್ಕುವುದು. ಅಡಿಕೆ ಭವಿಷ್ಯವಿಲ್ಲದ ವಾಣಿಜ್ಯ ಬೆಳೆ, ಅದೇ ನಿಂಬೆ ಆಹಾರ ಮತ್ತು ಔಷಧಿಯ ಬೆಳೆ. ಹಂಗಾಗಿ ಜನೋಪಯೋಗಿ, ಬಹುಪಯೋಗಿ. ಆದ್ದರಿಂದ ಮಾರುಕಟ್ಟೆ ಸಮಸ್ಯೆ ಎಂದೂ ಬಾರದು! ನಿಂಬೆ ಹಣ್ಣು ಭಾರತದಿಂದ ವಿದೇಶಗಳಿಗೆ ರಫ್ತಾಗಿ ದಿನೇ ದಿನೇ ಮತ್ತಷ್ಟು ಬೇಡಿಕೆ ಸೃಷ್ಠಿಸಿಕೊಳ್ಳುತ್ತಿದ್ದರೇ, ಇತ್ತ ಅಡಿಕೆ ವಿದೇಶಗಳಿಂದಲೇ ನಯಾಪೈಸೆ ಆಮದು ಶುಲ್ಕವಿಲ್ಲದೇ ಭಾರತಕ್ಕೆ ಹೆಚ್ಚೆಚ್ಚು ಲಗ್ಗೆ ಇಡುತ್ತಿದೆ, ಅಡಿಕೆಯನ್ನೇ ನಂಬಿದ್ದ ರೈತರ ಕಂಗೆಡಿಸಿದೆ*
ಬಿಜಾಪುರ ಸೇರಿದಂತೆ ಕನ್ನಡ ನಾಡಿನ ವಿವಿಧ ಭಾಗದ 30 ಸಾವಿರಕ್ಕೂ ಹೆಚ್ಚು ರೈತರು ಸಾವಿರಾರು ವರ್ಷಗಳಿಂದ ಪಾರಂಪರಿಕವಾಗಿ ನಿಂಬೆ ಬೆಳೆಯುತ್ತಾ ಹೇಗೆ ಸುಂದರ ಬದುಕು-ಬೇಸಾಯ ಕಟ್ಟಿಕೊಂಡಿಹರೋ ಅದೇ ಅನುಭವದ ಬೆಳಕಿನಲ್ಲಿ ‘ಪೂಚಂತೇ ಪರಪಂಚ’ ಕನ್ನಡ ನಾಡಿನ ಸಾವಿರಾರು ರೈತರಿಗೆ ಕಾಗ್ಜಿ ನಿಂಬೆ ಕೃಷಿಯ ಸ್ಫೂರ್ತಿ ತುಂಬುತ್ತಿದೆ, ಒಂದು ಹನಿ – ಒಂದು ಕಾಳು ರಾಸಾಯನಿಕ ಬಳಸದೇ ಸಂಪೂರ್ಣವಾಗಿ ನೈಸರ್ಗಿಕ ಕೃಷಿಯಲ್ಲಿ ಬೆಳೆಸಿರುವ ಜಗದ್ವಿಖ್ಯಾತ ಬಿಜಾಪುರದ ಕಾಗ್ಜಿ ನಿಂಬೆ ಹಣ್ಣಿನ ಗಿಡಗಳನ್ನ ಪೂರೈಸುತ್ತಿದೆ. ನಿಂಬೆ ಬೆಳೆದು ಬದುಕು ಬೆಳಗಿಕೊಳ್ಳಲು ಹೊರಟವರಿಗೆ ನಿರಂತರ ಸಾಥ್ ನೀಡುತ್ತಿದೆ. ನಿಂಬೆ ಗಿಡಗಳ ಹುಡುಕಿ ನಾಡಿನ ಬೇರೆ ಬೇರೆ ಭಾಗದಿಂದ ಬರುವ ರೈತರ ಅನುಕೂಲಕ್ಕೆಂದು 50ಕ್ಕೂ ಹೆಚ್ಚು ವೈವಿಧ್ಯ ಹಣ್ಣಿನ ಗಿಡಗಳು, ಸಾಂಬಾರ ಪದಾರ್ಥ ಗಿಡಗಳು, ಮೊದಲಾದವೂ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಾ ಹೋಗುವುದರಿಂದ ನಿಂಬೆಗೆ ನಿಬ್ಬೆರಗಾಗುವಂತಹ ಬೇಡಿಕೆ ಮತ್ತು ಬೆಲೆ ಸೃಷ್ಟಿಯಾಗುತ್ತಲೇ ಹೋಗುತ್ತವೆ.