Ayushman Bharath yojane-ಆಯುಶ್ಮಾನ್ ಯೋಜನೆಯಡಿ ಮತ್ತಷ್ಟು ಉಚಿತ ಚಿಕಿತ್ಸೆಗಳು ಸೇರ್ಪಡೆ

Ayushman Bharath yojane-ರಾಜ್ಯದ ಜನತೆಯ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ Spinal Deformities (scoliosis, kyphosis, lordosis) ಸಮಸ್ಯೆಗಳ ಚಿಕಿತ್ಸಾತ್ಮಕ ಸೇವೆಗಳನ್ನು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ Unspecified Surgical Package ಅಡಿ ಸೇರಿಸಲಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮುಖಾಂತರ ಈ ಷರತ್ತುಬದ್ಧ ಚಿಕಿತ್ಸಾತ್ಮಕ ಸೇವೆಗಳನ್ನು ಒದಗಿಸಲು ಸರ್ಕಾರ ಆದೇಶಿಸಿದೆ. ಈ ಯೋಜನೆಯಡಿ, ತಜ್ಞ ವೈದ್ಯರ ಶಿಫಾರಸ್ಸಿನಂತೆ ಪ್ರತಿ ಶಸ್ತ್ರಚಿಕಿತ್ಸೆಗೆ ರೂ. 1.5 ಲಕ್ಷ ನಿಗದಿಪಡಿಸಲಾಗಿದ್ದು, ಪ್ಯಾಕೇಜ್ ಮತ್ತು ದರವನ್ನು ಸಕ್ಸಮ ಪ್ರಾಧಿಕಾರ ಅನುಮೋದಿಸಬೇಕು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೋಂದಾವಣೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ. ಸರ್ಕಾರಿ ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ವೆಚ್ಚದ ಶೇ.75% ಪಾವತಿ ಆಗಲಿದೆ. ಪ್ರಸ್ತುತ ಆರೋಗ್ಯ ನೀತಿಗಳು ಈ ಚಿಕಿತ್ಸೆಗೂ ಅನ್ವಯಿಸುತ್ತವೆ. ಆರ್ಥಿಕ ಪರಿಣಾಮಗಳನ್ನು ಬಜೆಟ್‌ನಲ್ಲಿ ಒದಗಿಸಲಾದ ಅನುದಾನದಿಂದ ಪೂರೈಸಲಾಗುವುದು. ಯಾವುದೇ ಹೊಸ ಚಿಕಿತ್ಸಾ ಕ್ರಮ ಸೇರಿಸಲು ಅಥವಾ ತೆಗೆಯಲು ಸರ್ಕಾರದ ಅನುಮೋದನೆ ಅಗತ್ಯ. ಈ ಆದೇಶವನ್ನು ಆರ್ಥಿಕ ಇಲಾಖೆಯ ಅನುಮೋದನೆ ಮೇರೆಗೆ ಜಾರಿಗೊಳಿಸಲಾಗಿದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *