ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ರೈತರಿಗೆ ಬೋರ್‌ವೆಲ್ ಕೊರೆಯಲು ಸಹಾಯಧನ ನೀಡಲಾಗುತ್ತಿದೆ. ಅರ್ಹ ರೈತರು ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಹನಿ ನೀರಾವರಿ:
ಬಳ್ಳಾರಿ ಜಿಲ್ಲೆಗೆ ₹153.53 ಲಕ್ಷ ಅನುದಾನ ಮಂಜೂರಾಗಿದೆ. ಶೇ.90 ರಂತೆ ಗರಿಷ್ಠ 2 ಹೆಕ್ಟೇರ್ ವರೆಗೆ ಸಹಾಯಧನ ಪಡೆಯಬಹುದು.
ಗಂಗಾ ಕಲ್ಯಾಣ ಯೋಜನೆಗೆ ಅರ್ಹತೆ:
ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.ಜಮೀನು ಕೃಷಿ ಚಟುವಟಿಕೆಯಲ್ಲಿ ಬಳಸಲ್ಪಡುತ್ತಿರಬೇಕು.ಯಾವುದೇ ನೀರಾವರಿ ಸೌಲಭ್ಯ ಇರುವಂತಿಲ್ಲ.ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.ವಯಸ್ಸು: 18-60 ವರ್ಷ.
ವಾರ್ಷಿಕ ಆದಾಯ:ಗ್ರಾಮಾಂತರ – ₹98,000 ಒಳಗಾಗಿ.ಪಟ್ಟಣ – ₹1,20,000 ಒಳಗಾಗಿ.ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
ಸಹಾಯಧನ:ಈ ಯೋಜನೆಯಡಿ ₹4 ಲಕ್ಷ ಸಬ್ಸಿಡಿ ಒದಗಿಸಲಾಗುತ್ತದೆ.
ಅಗತ್ಯ ದಾಖಲೆಗಳು:ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಆಧಾರ್ ಕಾರ್ಡ್ಬ್ಯಾಂಕ್ ಪಾಸ್‌ಬುಕ್ಜಾತಿ ಮತ್ತು ಆದಾಯ ಪ್ರಮಾಣ ಪತ್ರಸ್ವಂತ ಜಮೀನಿನ ಪಹಣಿಭಾವಚಿತ್ರBPL ರೇಷನ್ ಕಾರ್ಡ್ಮೊಬೈಲ್ ಸಂಖ್ಯೆ
ಅರ್ಜಿಯ ಪ್ರಕ್ರಿಯೆ:
ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್ / ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.