Gruhajyothi update-ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರಕ್ಕೆ, ಅದೇ ಪಂಚ ಗ್ಯಾರಂಟಿ ಯೋಜನೆಗಳು ಆರ್ಥಿಕ ತೊಡಕು ಉಂಟುಮಾಡಿವೆ. ಸರ್ಕಾರ ಎಸ್ಕಾಂಗಳಿಗೆ ಪಾವತಿಸಬೇಕಾದ ಸಬ್ಸಿಡಿ ಹಣವನ್ನು ಜನರೇ ಭರಿಸುವಂತೆ ಪರಿಗಣಿಸುವ ಪ್ರಸ್ತಾವನೆ ಸಲ್ಲಿಸಿರುವುದು ಈ ಸಂಕಷ್ಟಕ್ಕೆ ನಿದರ್ಶನವಾಗಿದೆ.
ಚೆಸ್ಕಾಂ ಪ್ರಸ್ತಾವನೆ ಏನು?
ಸರ್ಕಾರ ಎಸ್ಕಾಂಗಳಿಗೆ ಪ್ರತಿ ವರ್ಷ ₹1,602 ಕೋಟಿ ಸಬ್ಸಿಡಿ ಪಾವತಿಸಬೇಕಾಗಿತ್ತು.ಈ ಮೊತ್ತ ಪಾವತಿಯಾಗದೆ ಇರುವುದರಿಂದ, ಜನರಿಂದಲೇ ಬಿಲ್ ವಸೂಲಿಗೆ ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ.ಆದರೆ, ಕೆಇಆರ್ಸಿ (KERC) ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ, ಜನರಿಂದ ಹಣ ವಸೂಲಿಗೆ ಅವಕಾಶವಿಲ್ಲ.
ಕೆಇಆರ್ಸಿ ಒಪ್ಪಿದರೆ ಫಲಿತಾಂಶ ಏನು?
- ಗೃಹಜ್ಯೋತಿ (Gruhajyothi) ಯೋಜನೆಗೆ ನೋಂದಾಯಿಸಿದ 1.71 ಕೋಟಿ ಬಳಕೆದಾರರು ಮೊದಲು ಬಿಲ್ ಪಾವತಿಸಬೇಕಾಗುತ್ತದೆ.
- ಇದರಲ್ಲಿ 1.65 ಕೋಟಿ ಕುಟುಂಬಗಳು ಶೂನ್ಯ ಬಿಲ್ ಪಡೆಯುತ್ತಿವೆ.ಬೆಸ್ಕಾಂ ವ್ಯಾಪ್ತಿಯಲ್ಲೇ 70 ಲಕ್ಷ ಫಲಾನುಭವಿಗಳಿದ್ದಾರೆ.
- ಎಲ್ಲ ಎಸ್ಕಾಂಗಳಿಗೆ (ESCOMs) ಈ ನಿಯಮ ಅನ್ವಯವಾಗಬಹುದು.ಈಗಾಗಲೇ ಸರ್ಕಾರ ಎರಡು ತಿಂಗಳ ಸಬ್ಸಿಡಿ ಹಣವನ್ನು ಮುಂಗಡವಾಗಿ ನೀಡದೆ ಬಾಕಿ ಇಡುತ್ತಿದೆ.
- 2008ರ ಕೆಇಆರ್ಸಿ ನಿಯಮಗಳ ಪ್ರಕಾರ ಪರಿಗಣಿಸಿದರೆ ಈ ಅನುಮತಿ ಸಿಗಬಹುದು.
ಅಂತಿಮ ನಿರ್ಧಾರ ಯಾವಾಗ?
ಈ ತಿಂಗಳು 27ರಂದು ಕೆಇಆರ್ಸಿ ಅಂತಿಮ ಸಭೆ ನಡೆಯಲಿದೆ.
ಸಭೆಯ ತೀರ್ಮಾನದ ಮೇಲೆ ಗ್ರಾಹಕರಿಗೆ ಶಾಕ್ ಸಿಗುತ್ತಾ ಅಥವಾ ರಿಲೀಫ್ ಸಿಗುತ್ತಾ ಎಂಬುದು ನಿರ್ಧಾರವಾಗಲಿದೆ.