ಗೃಹಲಕ್ಷ್ಮಿ ಹಣ ನನ್ನ ಖಾತೆಗೆ ಮಾರ್ಚ್ ಹತ್ತರಂದು ಜಮಾ ಆಗಿದೆ ಈ ಕೆಳಗಿನ ಮಾಹಿತಿಯಲ್ಲಿ ನಾನು ನಿಮ್ಮ ಗೃಹಲಕ್ಷ್ಮಿ ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೇನೆ.
ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣ ಜಮಾ ಮಾಡೋದಕ್ಕೆ ಶುರು ಮಾಡಲಾಗಿದೆ. ಇಂದು ಲಕ್ಷಾಂತರ ಯಜಮಾನಿಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ಬಾಕಿ ಇರುವಂತ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ನಾಳೆ ಅಥವಾ ನಾಡಿದ್ದು ಜಮಾ ಆಗಲಿದೆ.
ಹೌದು.. ರಾಜ್ಯದ ಯಜಮಾನಿ ಮಹಿಳೆಯರು ನಿರೀಕ್ಷೆ ಮಾಡುತ್ತಿದ್ದಂತ ಗೃಹ ಲಕ್ಷ್ಮೀ ಯೋಜನೆಯ ಜನವರಿ ತಿಂಗಳ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇಂದು ಅನೇಕ ಯಜಮಾನಿ ಮಹಿಳೆಯರಿಗೆ ರೂ.2000 ಬಾಕಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ನಿಮಗೆ ಗೃಹ ಲಕ್ಷ್ಮೀ ಯೋಜನೆ ಹಣ ( Gruhalkahsmi Scheme ) ಬಂದಿದ್ಯಾ ಅಂತ ಹೀಗೆ ಚೆಕ್ ಮಾಡಿ
ಹಂತ 1: ನಿಮ್ಮ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ, DBT Karnataka application ಅಂತ ಟೈಪ್ ಮಾಡಿ ಸರ್ಚ್ ಮಾಡಿ, ಡೌನ್ ಲೋಡ್ ಮಾಡಿಕೊಳ್ಳಿ.
ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ
ಹಂತ 3: ಆಗ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ನಮೂದಿಸಿ, ಗೆಟ್ ಓಟಿವಿ ನೀಡಿ, ಓಟಿಪಿ ಬಂದ ನಂತ್ರ, ವೆರಿಫೈ ಓಟಿಪಿಯ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ
ಹಂತ 5: ಈಗ ಹೋಂ ಪೇಜ್ ನಲ್ಲಿ ನೀವು Payment status ಮೇಲೆ ಕ್ಲಿಕ್ ಮಾಡಿ. ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು
ಹಂತ 6: ಇಲ್ಲಿ ನಿಮಗೆ ಸರ್ಕಾರದಿಂದ ಜಮಾ ಆಗಿರುವಂತ ಗೃಹ ಲಕ್ಷ್ಮೀ ಯೋಜನೆಯ ಹಣ ವರ್ಗಾವಣೆಯಾಗಿರುವುದು ತಿಳಿಯಲಿದೆ.
