Gruhalakshmi rejected list-ಗೃಹಲಕ್ಷ್ಮಿ ರದ್ದಾದ ಪಟ್ಟಿ ಬಿಡುಗಡೆ,ಈ ಪಟ್ಟಿಯಲ್ಲಿರುವವರಿಗಿಲ್ಲ ಗೃಹಲಕ್ಷ್ಮಿ ಹಣ

Gruhalakshmi rejected list-ಗೃಹಲಕ್ಷ್ಮೀ ಯೋಜನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಯೋಜನೆಯಿಂದ ಆರ್ಥಿಕ ಸ್ವಾತಂತ್ರ್ಯ ಹೆಚ್ಚಾಗಿದ್ದು, ಪುರುಷರ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಇದರ ಪರಿಣಾಮ ಸ್ಪಷ್ಟವಾಗಿ ಕಾಣಸಿಗುತ್ತಿದೆ.

ಆದರೆ, ಅಪಾತ್ರರಿಗೆ ಸಹ ಈ ಯೋಜನೆಯ ಹಣ ಹೋಗುತ್ತಿದೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಂಡಿದ್ದು, ಅರ್ಹರಿಗೆ ಮಾತ್ರ ಲಾಭ ಸಿಗುವಂತೆ ಕ್ರಮ ಜರುಗಿಸುತ್ತಿದೆ. ಈ ನಿಟ್ಟಿನಲ್ಲಿ, ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಹೆಸರನ್ನು ಯೋಜನೆಯಿಂದ ಕೈಬಿಡುವ ಪ್ರಕ್ರಿಯೆ ಆರಂಭವಾಗಿದೆ.

ಪ್ರತಿಯೊಬ್ಬರೂ ಈ ಪಟ್ಟಿಯನ್ನು ಪರಿಶೀಲಿಸಬಹುದು.

ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.karnataka.gov.in ಗೆ ತೆರಳಿ, e-Ration Card → Show Cancelled/Suspend List ಆಯ್ಕೆ ಮಾಡಿ ನಿಮ್ಮ ಜಿಲ್ಲೆ, ತಾಲೂಕು, ಹಾಗೂ ಗ್ರಾಮವನ್ನು ಆಯ್ಕೆ ಮಾಡಿದರೆ, ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರೀಕ್ಷಿಸಬಹುದು.

ಗುಡ್ ನ್ಯೂಸ್:

ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಮೂರು ತಿಂಗಳಿನಿಂದ ಬಾಕಿಯಾಗಿದೆ. ಈಗ ಸರಕಾರ ಈ ಬಾಕಿ ಮೊತ್ತವನ್ನು ಪಾವತಿಸುವ ಕಾರ್ಯ ಆರಂಭಿಸಿದ್ದು, ಹಂತಹಂತವಾಗಿ ಲಾಭಾರ್ಥಿಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಹಾಗಾಗಿ, ಯಾರು ಅರ್ಹರಾಗಿದ್ದಾರೋ ಅವರಿಗೆ ಯಾವುದೇ ಆತಂಕವಿಲ್ಲ!

sreelakshmisai
Author

sreelakshmisai

Leave a Reply

Your email address will not be published. Required fields are marked *