Horticulture department training : ಧಾರವಾಡ ಜಿಲ್ಲೆಯ ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ – 2025-26

ಧಾರವಾಡ ಜಿಲ್ಲೆಯ ರೈತ ಕುಟುಂಬದ ಮಕ್ಕಳಿಗಾಗಿ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ 10 ತಿಂಗಳ (ಮೇ 2, 2025 ರಿಂದ ಫೆಬ್ರವರಿ 28, 2026) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಗೆ ಮಹಿಳಾ – 5, ಪುರುಷ – 10, ಒಟ್ಟು 15 ಆಸನಗಳು ಲಭ್ಯವಿವೆ.

ಅರ್ಜಿಯ ಪ್ರಕ್ರಿಯೆ:

ಆಸಕ್ತ ಅಭ್ಯರ್ಥಿಗಳು ಮಾರ್ಚ್ 31, 2025ರೊಳಗಾಗಿ ಅರ್ಜಿ ಫಾರಂನ್ನು ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಿಂದ ಅಥವಾ ಅಧಿಕೃತ ವೆಬ್‌ಸೈಟ್ horticulturedir.karnataka.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅರ್ಜಿ ಶುಲ್ಕ:ಸಾಮಾನ್ಯ ಅಭ್ಯರ್ಥಿಗಳಿಗೆ ₹30ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ ₹15

ಶುಲ್ಕವನ್ನು ಇಂಡಿಯನ್ ಪೋಸ್ಟಲ್ ಆರ್ಡರ್ (IPO) ಅಥವಾ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಮೂಲಕ “ತೋಟಗಾರಿಕೆ ಉಪನಿರ್ದೇಶಕರು (ಜಿಲ್ಲಾ ಪಂಚಾಯತ್), ಧಾರವಾಡ” ಎಂಬ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 1, 2025ರೊಳಗಾಗಿ ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ: 0836-2957801 ಅನ್ನು ಸಂಪರ್ಕಿಸಬಹುದು

sreelakshmisai
Author

sreelakshmisai

Leave a Reply

Your email address will not be published. Required fields are marked *