ವೈಯಕ್ತಿಕ ಸಾಲಗಳನ್ನ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ಗಳು(credit score) ಬಹಳ ಮುಖ್ಯವಾಗುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಆಧರಿಸಿ ಸಾಲದಾತರು ನಿಮಗೆ ಸಾಲವನ್ನು ನೀಡುತ್ತಾರೆ. ಹಾಗಿದ್ರೆ ನೀವು ಸಾಲವನ್ನು ಪಡೆಯುವ ಮುನ್ನಾ ಉಚಿತವಾಗಿ ಸಿಬಿಲ್ ಸ್ಕೋರ್(CIBIL Score) ಅಥವಾ ಕ್ರೆಡಿಟ್ ಕಾರ್ಡ್ ಚೆಕ್ ಮಾಡುವುದು ಹೇಗೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು,ನೀವು ವೈಯಕ್ತಿಕ ಸಾಲವನ್ನ ಪಡೆಯುವಾಗ ಮುಖ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ಗಳ ಮೇಲೇಯೆ ನಿಮ್ಮ ಬಡ್ಡಿದರಗಳು ನಿರ್ಧಾರವಾಗಿರುತ್ತದೆ.
ಉಚಿತ ಸಿಬಿಲ್ ಸ್ಕೋರ್ ಪರಿಶೀಲನೆ ಎಲ್ಲಿ ಲಭ್ಯ?
ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವ ಸೌಲಭ್ಯಗಳನ್ನು ಗ್ರಾಹಕರಿಗೆ ಹಲವು ಹಣಕಾಸು ಸಂಸ್ಥೆಗಳು ಒದಗಿಸುತ್ತಿದ್ದೇವೆ. ಆದರೆ ಇದೀಗ ಬಜಾಜ್ ಮಾರ್ಕೆಟ್ಸ್ ಕಂಪನಿ ಸಹ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (ಸಿಬಿಲ್) ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದು,ಗ್ರಾಹಕರಿಗೆ ಉಚಿತ ಸಿಬಿಲ್ ಸ್ಕೋರ್ ಪರಿಶೀಲಿಸುವ ಸೌಲಭ್ಯಗಳನ್ನು ಒದಗಿಸುತ್ತಿದೆ.
ನೀವು ಈ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಕ್ರೆಡಿಟ್ ಹಿಸ್ಟರಿಯನ್ನು ತಿಳಿದುಕೊಳ್ಳಬಹುದು.ಕ್ರೆಡಿಟ್ ಸ್ಕೋರ್ನಲ್ಲಿ ಆಗಿರುವ ಇನ್ನೂ ಕೆಲವು ಬದಲಾವಣೆಗಳನ್ನು ತಿಳಿಯಲು ಸಹಾಯವಾಗುತ್ತದೆ.ಹಾಗೂ ಕ್ರೆಡಿಟ್ ಸ್ಥಿತಿ ಹೇಗಿದೆ ಎಂದು ಪರಿಶೀಲನೆ ಮಾಡಿ ಮಾಹಿತಿ ಪಡೆಯಬಹುದು.ಇದರಿಂದ ಸೂಕ್ತ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಸಹಾಯವಾಗುತ್ತದೆ. ಇನ್ನೂ ಕೆಲವು ವೈಶಿಷ್ಟ್ಯಗಳನ್ನು ಬಳಸಿಕೊಂಡು ಗ್ರಾಹಕರು ಸುಲಭವಾಗಿ ಯಾವುದೇ ಸಮಯದಲ್ಲಿ ತಮ್ಮ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲನೆಯನ್ನು ಮಾಡಿಕೊಳ್ಳಬಹುದು.
ಸಿಬಿಲ್ ಸ್ಕೋರ್ ಚೆಕ್ ಸೌಲಭ್ಯ ಇರುವ ಅನುಕೂಲಗಳೇನು?
- ತಮ್ಮ ಕ್ರೆಡಿಟ್ ಇತಿಹಾಸ ಹಾಗೂ ಮರುಪಾವತಿಯ ನಡವಳಿಕೆ ಸೇರಿದಂತೆ ತಮ್ಮ ಕ್ರೆಡಿಟ್ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ.
- ನೀವು ಕೆಲವೇ ಕ್ಲಿಕ್ಗಳ ಮೂಲಕ ಕಾಗದ ರಹಿತ ಪ್ರಕ್ರಿಯೆಯಿಂದ ಸುಲಭವಾದ ರೀತಿಯಲ್ಲಿ ಕ್ರೆಡಿಟ್ ಸ್ಕೋರ್ ಚಕ್ ಮಾಡಬಹುದು.
- ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಸಾಫ್ಟ್ ಎನ್ಕ್ವೈರಿ ಆಗಿರುವುದರಿಂದ ಇದು ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- ಸಿಬಿಲ್ ಸ್ಕೋರ್ ಅನ್ನು ದಿನನಿತ್ಯ ಪರಿಶೀಲನೆ ಮಾಡುವ ಮೂಲಕ ವರದಿಯಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು ಹಾಗೂ ಈ ಮೂಲಕ ಉತ್ತಮ ಸ್ಕೋರ್ ಕಾಪಾಡಿಕೊಂಡಲ್ಲಿ ಸಾಲ ಪಡೆಯುವುದು ಸುಲಭವಾಗಬಹುದು.
- ನೀವು ಪ್ರತಿನಿತ್ಯ CIBIL ಸ್ಕೋರ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಆದ್ದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಮೇಲಕ್ಕೆತ್ತಲು ವರ್ಷವಿಡೀ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಅವುಗಳು ಯಾವುವು ಎಂದರೆ ಈ ಕೆಳಗಿನಂತೆ ಇದೆ ವಿವರ
- ಮೊದಲು ನೀವು ವಿವರವಾದ ಕ್ರೆಡಿಟ್ ವರದಿಯನ್ನು ಪಡೆದು ಅದನ್ನು ವಿಶ್ಲೇಷಣೆ ಮಾಡಿ.
ನೀವು ಯಾವುದೇ ದೋಷಗಳನ್ನು ಗುರುತಿಸಬೇಕು (ಉದಾಹರಣೆಗೆ ತಪ್ಪಾದ ಸಾಲದ ವಿವರಗಳು, ತಪ್ಪು ವೈಯಕ್ತಿಕ ಮಾಹಿತಿ)ನ್ನು ಗಮನಿಸುವುದು ಮುಖ್ಯವಾಗುತ್ತದೆ.
ತಪ್ಪುಗಳು ಯಾವುದಾದರೂ ಇದ್ದರೆ ಸರಿಪಡಿಸಲು ನೀವು ಕ್ರೆಡಿಟ್ ಬ್ಯೂರೋಗೆ ವಿವಾದಗಳನ್ನು ಸಲ್ಲಿಕೆ ಮಾಡಬಹುದು.
ಹಳೆಯ ಬಾಕಿಗಳನ್ನು ಪಾವತಿಸಲು ನೀವು ಬ್ಯಾಂಕುಗಳು/ಸಾಲದಾತರೊಂದಿಗೆ ಮಾತುಕತೆ ನಡೆಸಬೇಕು.
ಮುಂದಿನ ದಿನದವರೆಗೂ ಎಲ್ಲಾ EMI ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳಿಗೆ ನೀವು ಸ್ವಯಂ-ಪಾವತಿಯನ್ನು ಹೊಂದಿಸಬಹುದು.
ಉತ್ತಮ ಕ್ರೆಡಿಟ್ ಇತಿಹಾಸವನ್ನು ಪ್ರಾರಂಭಿಸಲು ನೀವು ಸುರಕ್ಷಿತ ಕ್ರೆಡಿಟ್ ಕಾರ್ಡ್ಗೆ (ಸ್ಥಿರ ಠೇವಣಿಗೆ ಲಿಂಕ್ ಮಾಡಲಾಗಿದೆ) ಅರ್ಜಿ ಸಲ್ಲಿಸಬಹುದು.
ನೀವು ಒಂದು ಸಣ್ಣ ವೈಯಕ್ತಿಕ ಸಾಲವನ್ನು ತೆಗೆದುಕೊಂಡು ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬಹುದು.
ನಿಮಗೆ ಸಾಲದ ಅಗತ್ಯವಿಲ್ಲದಿದ್ದರೂ ಸಹ, ಕ್ರೆಡಿಟ್ ಸ್ಕೋರ್ಗಳು ಎಂದಿಗೂ ನಿರ್ಲಕ್ಷಿಸಬೇಡಿ.ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಕಾಯ್ದುಕೊಳ್ಳುವಲ್ಲಿ ಆರ್ಥಿಕ ಶಿಸ್ತಿನ ಮಹತ್ವ ಬಹಳಷ್ಟಿದೆ.