KSDC ಹಾಗೂ ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್ ಮಡಿಕೇರಿ ಸಂಯುಕ್ತಾಶ್ರಯದಲ್ಲಿ ದಿ. 08.03.2025 ರಂದು ಶನಿವಾರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಜಿಲ್ಲಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ITI)ಮಡಿಕೇರಿ. ಇಲ್ಲಿ ʻಉದ್ಯೋಗ ಮೇಳ- 2025ʼ ಆಯೋಜಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಈ ಮೇಳಕ್ಕೆ ಹಾಜರಾಗಬಹುದು.
ಕೆಎಸ್‌ಡಿಸಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯ ಮಿಷನ್ ಮೈಸೂರು ಇವರ ಸಹಯೋಗದಲ್ಲಿ ನಂಜನಗೂಡು ತಾಲೂಕಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ದಿನಾಂಕ 08.03.2025ರಂದು ಶನಿವಾರ ಬೆಳಿಗ್ಗೆ 8-00 ರಿಂದ ಸಂಜೆ 4-00 ರವರೆಗೆ ʻಉದ್ಯೋಗ ಮೇಳʼ ನಡೆಯಲಿದೆ. ಆಸಕ್ತರು ಕೆಳಗೆ ನೀಡಿರುವ ಬಯೋಡಾಟಾಗಳೊಂದಿಗೆ ಹಾಜರಾಗಬಹುದು.


ಸಂದರ್ಶನಕ್ಕೆ ಬೇಕಾದ ದಾಖಲೆಗಳ ವಿವರ :
- ಬಯೋಡೇಟಾ (Resume)
- ಶೈಕ್ಷಣಿಕ ದಾಖಲೆಗಳ ಪ್ರತಿ
- ಫೋಟೋ (photos )
- ಆಧಾರ್ ಕಾರ್ಡ್
ವಿದ್ಯಾ ಅರ್ಹತೆ :
SSLC
PUC
DIPLOMA
Any degree