Karnataka budget-ಬಜೇಟ್ ನಲ್ಲಿ ನಿಮ್ಮ ಜಿಲ್ಲೆಗೆ ಏನು ಸಿಕ್ಕಿದೆ?

Karnataka budget-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಅನ್ನು (ಮಾರ್ಚ್ 7, 2025) ಮಂಡಿಸಿದ್ದು, ಇದು ₹4.09 ಲಕ್ಷ ಕೋಟಿ ಗಾತ್ರದ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಕೃಷಿ, ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ಧಿ, ಅಲ್ಪಸಂಖ್ಯಾತ ಕಲ್ಯಾಣ ಸೇರಿದಂತೆ ವಿವಿಧ ವಲಯಗಳಿಗೆ ಅನುದಾನ ಘೋಷಿಸಲಾಗಿದೆ.

ವಿವಿಧ ಜಿಲ್ಲೆಗಳ ಮುಖ್ಯ ಯೋಜನೆಗಳು:

ಮಂಡ್ಯಕೃಷಿ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯಕ್ಕೆ ₹25 ಕೋಟಿ

ವಿಜಯಪುರಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ₹348 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭತಿಡಗುಂಡಿಯಲ್ಲಿ ಪ್ಲಗ್‌ ಆಯಂಡ್‌ ಪ್ಲೇ ಫ್ಯಾಕ್ಟರಿ

ಬೆಳಗಾವಿಅಥಣಿಯಲ್ಲಿ ಹೊಸ ಕೃಷಿ ಕಾಲೇಜುತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆವಿಶೇಷ ಮಕ್ಕಳ ಸರ್ಕಾರಿ ವಸತಿ ಶಾಲೆಗಳ ಉನ್ನತೀಕರಣಬೈಲಹೊಂಗಲ, ಖಾನಾಪುರದ ನಂದಗಡದಲ್ಲಿ ₹28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಗ್ಲೋಬಲ್‌ ಇನ್ನೊವೇಷನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

ಗದಗಡಂಬಳದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ

ರಾಮನಗರಹೈ-ಟೆಕ್‌ ರೇಷ್ಮೆ ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ ಅನುದಾನಕುಡಿಯುವ ನೀರಿನ ಯೋಜನೆ

ಚಿಕ್ಕಬಳಾಪುರಹೈಟೆಕ್‌ ಹೂವಿನ ಮಾರುಕಟ್ಟೆಚಿಂತಾಮಣಿಯಲ್ಲಿ ₹150 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಕ ಕಾಲೇಜು

ಚಿಕ್ಕಬಳಾಪುರಹೈಟೆಕ್‌ ಹೂವಿನ ಮಾರುಕಟ್ಟೆಚಿಂತಾಮಣಿಯಲ್ಲಿ ₹150 ಕೋಟಿ ವೆಚ್ಚದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಕ ಕಾಲೇಜು

ಕೋಲಾರರೈತ ಉತ್ಪನ್ನಗಳಿಗೆ ಆಧುನಿಕ ಮಾರುಕಟ್ಟೆನರಸಾಪುರದಲ್ಲಿ 6,000 ಸಾಮರ್ಥ್ಯದ ಮಹಿಳಾ ವಸತಿ ನಿಲಯಕೆಜಿಎಫ್‌ನಲ್ಲಿ ಭಾರತೀಯ ಮೀಸಲು ಪೊಲೀಸ್‌ ಪಡೆ

ಮೈಸೂರುನಬಾರ್ಡ್‌ ಸಹಾಯದಲ್ಲಿ ರೇಷ್ಮೆಗೂಡಿನ ಮಾರುಕಟ್ಟೆ ಸ್ಥಾಪನೆತಗಡೂರು ಸಮುದಾಯ ಆರೋಗ್ಯ ಕೇಂದ್ರ 100 ಹಾಸಿಗೆಯ ಆಸ್ಪತ್ರೆಯಾಗಿ ಉನ್ನತೀಕರಣನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಕುಸ್ತಿ, ವಾಲಿಬಾಲ್‌, ಖೋಖೋ ಅಕಾಡೆಮಿ ಸ್ಥಾಪನೆಗೆ ₹2 ಕೋಟಿ

ಉಡುಪಿಕಡಲ್ಕೊರೆತ ತಡೆಗಾಗಿ ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಯೋಜನೆಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್ ವ್ಯವಸ್ಥೆ

ಹಾಸನಬೇಲೂರು, ಹಳೆಬೀಡು, ಸೋಮನಾಥಪುರ ಪ್ರವಾಸಿ ತಾಣಗಳ ಅಭಿವೃದ್ಧಿ

ದಕ್ಷಿಣ ಕನ್ನಡಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜುಉಳ್ಳಾಲದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿ.ಯು ಕಾಲೇಜುಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಜಲಸಾರಿಗೆ ಸಂಗ್ರಹಾಲಯ

ಬೆಂಗಳೂರುಹೊರವಲಯದಲ್ಲಿ ಹೊಸ ಸೆಟಲೈಟ್‌ ಮಾರ್ಕೆಟ್‌ಬೌರಿಂಗ್‌, ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ₹297 ಕೋಟಿ ವೆಚ್ಚದಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ

ಕೊಪ್ಪಳ₹100 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ

ಕಲಬುರಗಿಹೊಸ ಮೆಗಾ ಡೇರಿ ಆರಂಭಿಸಲು ₹50 ಕೋಟಿನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ

ಬಾಗಲಕೋಟೆಮುಧೋಳ ಮತ್ತು ಹುನಗುಂದದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ

ಕೊಡಗುಪೊನ್ನಂಪೇಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ

ಚಿತ್ರದುರ್ಗಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ

ಬೀದರ್ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್‌ ಪತ್ತೆ ವಿಭಾಗ ಸ್ಥಾಪನೆ

ರಾಯಚೂರುರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ

ಯಾದಗಿರಿ₹6 ಕೋಟಿ ವೆಚ್ಚದಲ್ಲಿ ಹೊಸ ನರ್ಸಿಂಗ್‌ ಕಾಲೇಜು ಸ್ಥಾಪನೆ

ಬಳ್ಳಾರಿಸರ್ಕಾರಿ ಶ್ರವಣದೋಷ ಮಕ್ಕಳ ಶಾಲೆ ಪ್ರೌಢ ಶಾಲೆಯಾಗಿ ಮೇಲ್ದರ್ಜೆ

ಧಾರವಾಡಗ್ಲೋಬಲ್‌ ಇನ್ನೊವೇಷನ್‌ ಡಿಸ್ಟ್ರಿಕ್ಟ್‌ ಅಭಿವೃದ್ಧಿ

ದಾವಣಗೆರೆಲಂಬಾಣಿ ಜನಾಂಗದ ಕೌಶಲ ತರಬೇತಿ ಕೇಂದ್ರ ಸ್ಥಾಪನೆ

ತುಮಕೂರುಎತ್ತಿನಹೊಳೆ ಯೋಜನೆಯಡಿ 45 ಕೆರೆ ಮತ್ತು 62 ಕೆರೆ ತುಂಬಿಸುವ ಯೋಜನೆಗೆ ₹553 ಕೋಟಿ

ಉತ್ತರ ಕನ್ನಡಕಾರವಾರ ನೌಕಾನೆಲೆ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನಜೋಯಿಡಾ ತಾಲೂಕನ್ನು ಸಾವಯವ ತಾಲ್ಲೂಕಾಗಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರದೇವನಹಳ್ಳಿಯಲ್ಲಿ ಬೆಂಗಳೂರು ಸಿಗ್ನೇಚರ್ ಬಿಸಿನೆಸ್‌ ಪಾರ್ಕ್‌ ಸ್ಥಾಪನೆ

ವಿಜಯನಗರಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ

ಶಿವಮೊಗ್ಗಸೊರಬದ ಚಂದ್ರಗುತ್ತಿ ಗ್ರಾಮ ಧಾರ್ಮಿಕ, ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ

ಈ ಬಜೆಟ್‌ನಲ್ಲಿ ವಿವಿಧ ಜಿಲ್ಲೆಗಳ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನ ಮೀಸಲಾಗಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಪ್ರಾಮುಖ್ಯತೆ ನೀಡಲಾಗಿದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *