ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು (2025-26)ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದರು. ಕುವೆಂಪು ಅವರ ಕವನದ ಮೂಲಕ ಬಜೆಟ್ ಭಾಷಣ ಆರಂಭಿಸಿದ ಅವರು, ಆರು ಪ್ರಮುಖ ಅಭಿವೃದ್ಧಿ ಯೋಜನೆಗಳ ಜಾರಿ, ಗ್ಯಾರಂಟಿ ಯೋಜನೆಗಳ ವ್ಯಾಪ್ತಿ ವಿಸ್ತರಣೆ ಹಾಗೂ ಇತರ ಜನಪರ ಕಾರ್ಯಕ್ರಮಗಳ ಘೋಷಣೆ ಮಾಡಿದರು.
ಬಜೆಟ್ ಭಾಷಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಮಟ್ಟದಲ್ಲಿ ಅಕ್ಕ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಲಾಗುವುದು. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಈ ಸೊಸೈಟಿ ಅಡಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಮಕ್ಕಳು, ಮಹಿಳೆಯರಿಗೆ ಸಂವಿಧಾನ ಸಾಕ್ಷರತೆ, ಮಹಿಳೆಯರಿಗೆ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ, ಗ್ರಾಮೀಣ ಮಟ್ಟದಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪ್ರಮುಖ ಘೋಷಣೆಗಳು:
✔ ಬೆಂಗಳೂರು: ₹7,000 ಕೋಟಿ ಅನುದಾನ ಹೆಚ್ಚಳ.
✔ ಶಿಕ್ಷಣ:ಸರ್ಕಾರಿ ಪ್ರೌಢಶಾಲೆ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳಬಿಸಿಯೂಟ ಕಾರ್ಯಕರ್ತರಿಗೆ ₹1,000 ಹೆಚ್ಚಳಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ವಿತರಣೆ100 ಪ್ರಾಥಮಿಕ, 50 ಪ್ರೌಢಶಾಲೆಗಳ ಉನ್ನತೀಕರಣ500 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ
✔ ಸಾಮಾಜಿಕ ಯೋಜನೆಗಳು:ಹಿರಿಯ ನಾಗರಿಕರಿಗೆ ‘ಅನ್ನ ಸುವಿಧಾ’ ಯೋಜನೆ‘ಅನುಗ್ರಹ’ ಯೋಜನೆಯಡಿ ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ ₹15,000
✔ ಅಬಕಾರಿ ತಿದ್ದುಪಡಿ:ಮದ್ಯ ಮಾರಾಟದ ಪರಿಷ್ಕರಣೆ, ₹40,000 ಕೋಟಿ ಆದಾಯ ಗುರಿ
✔ ಗೃಹಲಕ್ಷ್ಮಿ ಯೋಜನೆ:ಫಲಾನುಭವಿಗಳನ್ನು ‘ಅಕ್ಕ ಕೋ-ಆಪರೇಟಿವ್ ಸೊಸೈಟಿ’ ಅಡಿಗೆ ತರಲು ಯೋಜನೆ
ಈ ಬಜೆಟ್ ರಾಜ್ಯದ ಅಭಿವೃದ್ಧಿ, ಗ್ರಾಮೀಣ ಪ್ರಗತಿ ಮತ್ತು ಜನಪರ ಯೋಜನೆಗಳಿಗೆ ನೂತನ ದಿಕ್ಕು ನೀಡಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.