Kisan Credit card-ಕೇಂದ್ರ ಹಣಕಾಸು ಸಚಿವಾಲಯದ ಪ್ರಕಾರ, ಡಿಸೆಂಬರ್ 2024 ರವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯಡಿ ರೈತರಿಗೆ ₹10.05 ಲಕ್ಷ ಕೋಟಿ ಸಾಲ ವಿತರಿಸಲಾಗಿದೆ. ಮಾರ್ಚ್ 2014 ರಲ್ಲಿ ₹4.26 ಲಕ್ಷ ಕೋಟಿಯಾಗಿದ್ದ ಸಾಲದ ಮೊತ್ತವು 2024 ರ ವೇಳೆಗೆ ದ್ವಿಗುಣಗೊಂಡಿದೆ. ಈ ಕ್ರೆಡಿಟ್ ಕಾರ್ಡ್ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಮತ್ತು ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸಲು ಸಹಾಯ ಮಾಡಿದೆ.
Kisan credit card ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನ್:
- ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ”ಕಿಸಾನ್ ಕ್ರೆಡಿಟ್ ಕಾರ್ಡ್” ಆಯ್ಕೆ ಮಾಡಿ
- ಅರ್ಜಿಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿಅರ್ಜಿ ಪರಿಶೀಲನೆಯ ನಂತರ, 3-4 ದಿನಗಳಲ್ಲಿ ಬ್ಯಾಂಕ್ ಸಂಪರ್ಕಿಸುತ್ತದೆ
ಅಫ್ಲಿನ್ :
- ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ
- ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಿ
Kisan credit card ಅಗತ್ಯ ದಾಖಲೆಗಳು
- ಅರ್ಜಿ ನಮೂನೆ
- ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು
- ಗುರುತಿನ ಪುರಾವೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್)
- ವಿಳಾಸ ಪುರಾವೆ (ಚಾಲನಾ ಪರವಾನಗಿ, ಆಧಾರ್ ಕಾರ್ಡ್)ಭೂ ಮಾಲೀಕತ್ವದ ದಾಖಲೆಬೆಳೆ ಮಾದರಿ ಪಟ್ಟಿಹೆಚ್ಚಿನ ಸಾಲಕ್ಕಾಗಿ ಭದ್ರತಾ ದಾಖಲೆಗಳು (₹1.60 ಲಕ್ಷ/₹3.00 ಲಕ್ಷ ಮೇಲ್ಪಟ್ಟ ಸಾಲಗಳಿಗೆ)
ಕೆಸಿಸಿ ಯೋಜನೆಯು ರೈತರ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ನೀವು ಅರ್ಜಿ ಸಲ್ಲಿಸಲು ಉತ್ಸುಕರಿದರೆ, ಹತ್ತಿರದ ಬ್ಯಾಂಕ್ ಅಥವಾ ಆನ್‌ಲೈನ್ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಿ!