Kisan credit card-2025 ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಮಿತಿ 5 ಲಕ್ಷಕ್ಕೆ ಹೆಚ್ಚಳ,ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

Kisan credit card-2025 ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪೈಕಿ ‘ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.6 ಲಕ್ಷ ರೂಪಾಯಿವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅಂದರೆ, ತಿಂಗಳಿಗೆ ಶೇ.0.5ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ ಲಭ್ಯವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಎಂದರೇನು? ರೈತರು ಈ ಯೋಜನೆಯ ಲಾಭವನ್ನು ಹೇಗೆ ಪಡೆಯಬಹುದು? ಎಂಬ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಕಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ಒದಗಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಪರಿಚಯ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಪೈಕಿ ರೈತರಿಗೆ ವಿಶೇಷ ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಕೂಡ ಒಂದು.ಕಿಸಾನ್ ಕ್ರೆಡಿಟ್ ಕಾರ್ಡ್ (kisan credit card) ನೀಡುವ ಮುಖ್ಯ ಉದ್ದೇಶ ದೇಶದ ಕೋಟ್ಯಾಂತರ ರೈತರಿಗೆ ಹಣಕಾಸಿನ ನೆರವು ಒದಗಿಸುವುದು.

ಭಾರತ ಕೃಷಿ ಪ್ರಧಾನ ದೇಶ. ಆದರೆ, ದೇಶದ ರೈತರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪೈಕಿ ‘ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ’ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.6 ಲಕ್ಷ ರೂಪಾಯಿವರೆಗೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅಂದರೆ, ತಿಂಗಳಿಗೆ ಶೇ.0.5ಕ್ಕಿಂತಲೂ ಕಡಿಮೆ ಬಡ್ಡಿಗೆ ಸಾಲ ಲಭ್ಯವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಎಂದರೇನು? ರೈತರು ಈ ಯೋಜನೆಯ ಲಾಭವನ್ನು ಹೇಗೆ ಪಡೆಯಬಹುದು? ಎಂಬ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಯೋಜನೆಯ ವಿವರ

  • ಯೋಜನೆಯ ಹೆಸರು – ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
  • ಆರಂಭಿಸಿದ್ದು- ಕೇಂದ್ರ ಸರ್ಕಾರ
  • ಫಲಾನುಭವಿ- ದೇಶದ ರೈತರು
  • ಉದ್ದೇಶ- ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲು
  • ಅರ್ಜಿ ಸಲ್ಲಿಕೆ ಪ್ರಕ್ರಿಯೆ – ಆನ್ಲೈನ್
  • ಅಧಿಕೃತ ವೆಬ್‌ಸೈಟ್- KCCY

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಮೂಲಕ ರೈತರಿಗೆ ‘ಕ್ರೆಡಿಟ್ ಕಾರ್ಡ್’ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1.6 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಅವರು ತಮ್ಮ ಹೊಲಗಳಿಗೆ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕುವುದು ಮೊದಲಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್‌ ಕಾರ್ಡ್‌ ಬಳಸಬಹುದು.

ಅಷ್ಟೇ ಅಲ್ಲದೆ, ರೈತರು ತಮ್ಮ ಬೆಳೆಗಳಿಗೆ ಈ ಕಾರ್ಡ್‌ ಮೂಲಕ ವಿಮೆ ಮಾಡಿಸಿಕೊಳ್ಳಬಹುದು. ಈ ಹಿಂದೆ ರೈತರು ಮಾತ್ರ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿತ್ತು. ಪ್ರಸ್ತುತ ಸರ್ಕಾರವು ಕಿಸಾನ್‌ ಕ್ರಿಡಿಟ್‌ ಕಾರ್ಡ್‌ ಯೋಜನೆ ವ್ಯಾಪ್ತಿಗೆ ಪಶುಸಂಗೋಪನೆ, ಹೈನುಗಾರಿಕೆ, ಮತ್ತು ಮೀನುಗಾರರನ್ನು ಸೇರಿಸಿದೆ. ಈ ಕಾರ್ಡ್ ಮೂಲಕ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಯೋಜನೆಯ ಉದ್ದೇಶ

ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ರೈತರ ಸ್ಥಿತಿಯನ್ನು ಸುಧಾರಿಸುವುದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆರ್ಥಿಕ ಕೊರತೆಯಿಂದಾಗಿ ರೈತರು ತಮ್ಮ ಹೊಲಗಳಲ್ಲಿ ಸರಿಯಾದ ಸಮಯದಲ್ಲಿ ಉತ್ತಮ ಬೆಳೆಗಳನ್ನು ಬಿತ್ತಲು ಸಾಧ್ಯವಾಗುತ್ತಿಲ್ಲ ಮತ್ತು ಆರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ಸುಮಾರು 3 ಕೋಟಿ ರೈತ ಕುಟುಂಬಗಳಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಗುರಿ. ಯೋಜನೆಯಡಿಯಲ್ಲಿ ಲಭ್ಯವಿರುವ ಸಾಲದ ಬಡ್ಡಿ ದರ ಕೂಡ ಕಡಿಮೆ ಮಟ್ಟದಲ್ಲಿದೆ.

ಯೋಜನೆಯ ಬಜೆಟ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಇದುವರೆಗೆ 1.82 ಕೋಟಿ ರೈತರಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ಒದಗಿಸಲಾಗಿದೆ. ಕೇಂದ್ರ ಸರ್ಕಾರವು ಪ್ರಸ್ತುತ ಹಣಕಾಸು ವರ್ಷದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೈತರಿಗೆ ಸುಮಾರು ₹2 ಲಕ್ಷ ಕೋಟಿ ಸಾಲ ವಿತರಿಸಲಿದೆ. ದೇಶದ ಯಾವುದೇ ರೈತರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಸಾಲ

ಈ ಯೋಜನೆಯಡಿ, ದೇಶದ ಯಾವುದೇ ರೈತರು ವಾರ್ಷಿಕ ಶೇ. 4ರ ಬಡ್ಡಿ ದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ದೇಶದ ಲಕ್ಷಾಂತರ ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸಾಲವನ್ನು ಮರುಪಾವತಿ ಮಾಡುವ ಮೊದಲು, ನೀವು ಶೇ. 7 ರ ಬಡ್ಡಿ ದರದಲ್ಲಿ ಹಣ ಮರುಪಾವತಿ ಮಾಡಬೇಕು.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ವೈಶಿಷ್ಟ್ಯಗಳು

  • ಯಾವುದೇ ರೈತರು ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ, ಅಂತಹ ರೈತರು ಕಿಸಾನ್ ಕ್ರೆಡಿಟ್ ಯೋಜನೆಯನ್ನು ಸಹ ಪಡೆಯುತ್ತಾರೆ.
  • ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳಲ್ಲಿ ಕಿಸಾನ್‌ ಕ್ರೆಡಿಟ್ ಕಾರ್ಡ್ ನೀಡಲಾಗುವುದು. ನಂತರ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸುಲಭವಾಗಿ ಸಾಲವನ್ನು ತೆಗೆದುಕೊಳ್ಳಬಹುದು.
  • ಈ ಯೋಜನೆಯಡಿಯಲ್ಲಿ ಲಭ್ಯವಿರುವ ಸಾಲದ ಬಡ್ಡಿ ದರವು ಇತರ ಸಾಲಗಳ ಬಡ್ಡಿ ದರಕ್ಕಿಂತ ತುಂಬಾ ಕಡಿಮೆಯಾಗಿದೆ.
  • ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಿಂದ ದೇಶದ ರೈತರು ತಮ್ಮ ಬೆಳೆಗಳನ್ನು ಯಾವುದೇ ತೊಂದರೆಯಿಲ್ಲದೆ ಬಿತ್ತನೆ ಮಾಡಬಹುದು.
  • ಕಾರ್ಡ್ ವಿತರಣೆ ಬಳಿಕ ಯಾವುದೇ ಕಾರಣದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಬ್ಲಾಕ್‌ ಆದರೆ, ಅದನ್ನು ಸಕ್ರಿಯಗೊಳಿಸುವುದು ತುಂಬಾ ಸುಲಭ.
  • ರೈತರು 5 ವರ್ಷಗಳವರೆಗೆ ಈ ಕಾರ್ಡ್‌ನ ಪ್ರಯೋಜನ ಪಡೆಯಬಹುದು.
  • ಈ ಯೋಜನೆಯಡಿ ಪಡೆದ ಸಾಲದಲ್ಲಿ 1.60 ಲಕ್ಷ ರೂ.ವರೆಗೆ ಯಾವುದೇ ಭದ್ರತೆ ಇಲ್ಲದೆ ರೈತರು ಸಾಲ ಪಡೆಯಬಹುದು.
  • ಈ ಕಾರ್ಡ್ ಮೂಲಕ ರೈತರು ತಮ್ಮ ಬೆಳೆಗಳಿಗೆ ಪ್ರತ್ಯೇಕವಾಗಿ ವಿಮೆ ಮಾಡಿಸಿಕೊಳ್ಳಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಯಾವ ರೀತಿಯ ಸಾಲಗಳು ಲಭ್ಯ?

  • ಬೆಳೆ ಸಾಲ
  • ಫಾರ್ಮ್ ಆಪರೇಟಿಂಗ್ ಸಾಲ
  • ಫಾರ್ಮ್ ಮಾಲೀಕತ್ವ ಸಾಲ
  • ಕೃಷಿ ವ್ಯವಹಾರ
  • ಡೈರಿ ಪ್ಲಸ್ ಯೋಜನೆ
  • ಬ್ರಾಯ್ಲರ್ ಪ್ಲಸ್ ಯೋಜನೆ
  • ತೋಟಗಾರಿಕೆ ಸಾಲ
  • ಫಾರ್ಮ್‌ ಸ್ಟೋರೇಜ್‌ ಫೇಸ್‌

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ

  • ಅರ್ಜಿದಾರ ರೈತರು ಭಾರತೀಯ ಪ್ರಜೆಯಾಗಿರಬೇಕು.
  • ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
  • ಬೇರೆಯವರ ಜಮೀನಿನಲ್ಲಿ ಸಾಗುವಳಿ ಮಾಡುವ ವ್ಯಕ್ತಿಯೂ ಈ ಕಾರ್ಡ್ ಮಾಡಿಸಿಕೊಳ್ಳಬಹುದು.
  • ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.


ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅಗತ್ಯವಿರುವ ದಾಖಲೆಗಳು

ಅರ್ಜಿದಾರರು ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲಗಾರರಾಗಿಲ್ಲದ ಅಫಿಡವಿಟ್

ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆಗಳನ್ನು ಹೊಂದಿರಬೇಕು. 

ಬೇರೆಯವರ ಜಮೀನಿನಲ್ಲಿ ರೈತರು ಸಾಗುವಳಿ ಮಾಡಿದರೆ, ಹೊಲಗಳ ಬಾಡಿಗೆ ಅಥವಾ ಗುತ್ತಿಗೆ ಒಪ್ಪಂದ ಪತ್ರ ಹೊಂದಿರಬೇಕು.

ಅರ್ಜಿದಾರರ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ

ಜಮೀನಿನ ಆರ್‌ಟಿಸಿ ಪ್ರತಿ 

ಅರ್ಜಿದಾರರ ಪ್ಯಾನ್ ಕಾರ್ಡ್

ಅರ್ಜಿದಾರರ ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿದಾರರ ಬ್ಯಾಂಕ್ ಖಾತೆ ಪುಸ್ತಕ

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ?

ಆಫ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ

  • ಹಂತ 1: – ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ (ಮೇಲೆ ತಿಳಿಸಲಾಗಿದೆ), ನೀವು ಖಾತೆ ಹೊಂದಿರುವ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ನಮೂನೆ ಪಡೆಯಿರಿ. 
  • ಹಂತ 2: – ಬ್ಯಾಂಕ್‌ನಿಂದ ಫಾರ್ಮ್ ಅನ್ನು ತೆಗೆದುಕೊಂಡ ನಂತರ, ನೀವು ಅರ್ಜಿದಾರರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
  • ಹಂತ 3: – ಅರ್ಜಿ ನಮೂನೆಯಲ್ಲಿ ಪೂರ್ಣ ಮಾಹಿತಿ ಭರ್ತಿ ಮಾಡಿದ ನಂತರ, ಅದರೊಂದಿಗೆ ಅಗತ್ಯ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಮತ್ತು ಅದನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಿ.
  • ಹಂತ 4: ಅರ್ಜಿ ಸಲ್ಲಿಕೆ ನಂತ ಬ್ಯಾಂಕ್‌ ನಿಮ್ಮ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ, ಪರಿಶೀಲನೆಯ ನಂತರ ನಿಮ್ಮ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದರೆ, 15 ದಿನಗಳೊಳಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯುತ್ತೀರಿ.


ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?

  • ಹಂತ 1: PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್‌ಸೈಟ್ ಗೆ ಭೇಟಿ ನೀಡಿ.
  • ಹಂತ 2: ವೆಬ್‌ಸೈಟ್ ತೆರೆದ ನಂತರ, ನೀವು ಸೈಟ್‌ನ ಮುಖಪುಟದಿಂದ ಕೆಳಗೆ ಸ್ಕ್ರಾಲ್ ಮಾಡಿ, ಸ್ಕ್ರೀನ್‌ನ ಬಲಭಾಗದಲ್ಲಿ ಕಾಣುವ KCC ಫಾರ್ಮ್ ಡೌನ್‌ಲೋಡ್ ಮಾಡುವ ಬಟನ್‌ ಮೇಲೆ ಕ್ಲಿಕ್ ಮಾಡಿ. ಈಗ ಅರ್ಜಿ ಡೌನ್‌ಲೋಡ್ ಆಗುತ್ತದೆ. 
  • ಹಂತ 3: ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದರಲ್ಲಿ ಕೇಳಲಾದ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಲು ನೀವು ಸುಶಿಕ್ಷಿತ ವ್ಯಕ್ತಿಯ ಸಹಾಯ ಪಡೆಯಬಹುದು.
  • ಹಂತ 4: ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅಗತ್ಯವಿರುವ ದಾಖಲೆಗಳ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ.
  • ಹಂತ 5: ನಂತರ ಅರ್ಜಿಯನ್ನು ನೀವು ಖಾತೆ ಹೊಂದಿರುವ ಬ್ಯಾಂಕ್‌ ಶಾಖೆಗೆ ಸಲ್ಲಿಸಿ. 
  • ಹಂತ 6 : ಬ್ಯಾಂಕ್‌ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ. ಪರಿಶೀಲನೆಯ ನಂತರ ನಿಮ್ಮ ದಾಖಲೆಗಳು ಸರಿಯಾಗಿ ಕಂಡುಬಂದರೆ ನಂತರ ನೀವು 15 ದಿನಗಳಲ್ಲಿ ಕಾರ್ಡ್ ಪಡೆಯುತ್ತೀರಿ.

ಭಾರತದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿರುವ ಟಾಪ್ ಬ್ಯಾಂಕ್‌ಗಳು

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • HDFC ಬ್ಯಾಂಕ್ 
  • ಆಕ್ಸಿಸ್ ಬ್ಯಾಂಕ್
  • ಬ್ಯಾಂಕ್ ಆಫ್ ಬರೋಂಡಾ
  • ಐಸಿಐಸಿಐ ಬ್ಯಾಂಕ್
  • ಅಲಹಾಬಾದ್ ಬ್ಯಾಂಕ್
  • ಆಂಧ್ರ ಬ್ಯಾಂಕ್
  • ಕೆನರಾ ಬ್ಯಾಂಕ್
  • ಮಹಾರಾಷ್ಟ್ರ ಬ್ಯಾಂಕ್
  • ಸರ್ವ್ ಹರಿಯಾಣ ಗ್ರಾಮೀಣ ಬ್ಯಾಂಕ್

ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆ ಹೇಗೆ? 

ಮೆಗ್ನೆಟಿಕ್ ಸ್ಟ್ರೈಪ್ (Magnetic Stripe) ಕಾರ್ಡ್ ಅನ್ನು PIN (ವೈಯಕ್ತಿಕ ಗುರುತಿನ ಸಂಖ್ಯೆ) ಸಹಿತ, ISO IIN (ಅಂತರರಾಷ್ಟ್ರೀಯ ಮಾನದಂಡ ಸಂಸ್ಥೆ ನೀಡುವ ಅಂತರರಾಷ್ಟ್ರೀಯ ಗುರುತು ಸಂಖ್ಯೆ) ಯೊಂದಿಗೆ ನೀಡಲಾಗುತ್ತದೆ, ಇದು ಎಲ್ಲಾ ಬ್ಯಾಂಕುಗಳ ATM ಗಳಿಗೆ ಮತ್ತು ಮೈಕ್ರೋ ATM ಗಳಲ್ಲಿ ಹಣ ಡ್ರಾ ಮಾಡಲು ಅನುವು ಮಾಡಿಕೊಡುತ್ತದೆ.

ಒಂದು ವೇಳೆ, ಬ್ಯಾಂಕುಗಳು UIDAI (ಆಧಾರ್ ದೃಢೀಕರಣ) ಕೇಂದ್ರಿತ ಬಯೋಮೆಟ್ರಿಕ್ ಪ್ರಾಮಾಣಿಕರಣ ಮೂಲಸೌಕರ್ಯವನ್ನು ಬಳಸಲು ಇಚ್ಛಿಸುತ್ತಿದ್ದರೆ, ಕಿಸಾನ್ ಕ್ರಿಡೆಟ್ ಕಾರ್ಡ್ ಗಳಿಗೆ ಮೆಗ್ನೆಟಿಕ್ ಸ್ಟ್ರೈಪ್ , PIN ಮತ್ತು ISO IIN ಯೊಂದಿಗೆ UIDAI ನ ಬಯೋಮೆಟ್ರಿಕ್ ದೃಢೀಕರಣ ಮಾಡಿಕೊಂಡ ನಂತರ, ರೈತರಿಗ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಬಹುದು.

ಬ್ಯಾಂಕುಗಳ ಗ್ರಾಹಕರ ಆಧಾರದ ಮೇಲೆ, ಕೇವಲ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಮೆಗ್ನೆಟಿಕ್ ಸ್ಟ್ರೈಪ್ ಕಾರ್ಡ್‌ಗಳನ್ನು ಕೂಡಾ ನೀಡಬಹುದು. UIDAI ರೀತಿಯಲ್ಲಿ ವ್ಯಾಪಕವಾಗಿ ಬಳಕೆ ಮಾಡಬಹುದು.


ಬ್ಯಾಂಕುಗಳು EMV (Europay, Mastercard ಮತ್ತು VISA) ಮತ್ತು RUPAY ಮಾನದಂಡಗಳಿಗೆ ಅನುಗುಣವಾದ ಚಿಪ್ ಕಾರ್ಡ್‌ಗಳನ್ನು, ಮೆಗ್ನೆಟಿಕ್ ಸ್ಟ್ರೈಪ್, PIN, ಮತ್ತು ISO IIN ನೊಂದಿಗೆ ನೀಡಲು ಆಯ್ಕೆ ಮಾಡುತ್ತವೆ.

ಹೆಚ್ಚುವರಿಯಾಗಿ, ಬಯೋಮೆಟ್ರಿಕ್ ದೃಢೀಕರಣ ಮತ್ತು ಸ್ಮಾರ್ಟ್ ಕಾರ್ಡ್‌ಗಳು ಐಡಿಆರ್ ಬಿಟಿ (IDRBT) ಮತ್ತು ಐಬಿಎ (IBA) ನಿಂದ ಸೂಚಿಸಲ್ಪಟ್ಟ ಸಾಮಾನ್ಯ ರೀತಿಯ ಮಾನದಂಡಗಳನ್ನು ಅನುಸರಿಸಬಹುದು. ಇದರಿಂದ ರೈತರಿಗೆ ತಮ್ಮ ಉತ್ಪನ್ನವನ್ನು ಮಾರುಕಟ್ಟೆಗಳಲ್ಲಿ ಅಥವಾ ಖರೀದಿ ಕೇಂದ್ರಗಳಲ್ಲಿ ಮಾರಿದಾಗ ಬರುವ ಹಣವನ್ನು ನೇರವಾಗಿ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವ ಮತ್ತು ಇನ್ ಪುಟ್ ಡೀಲರ್‌ಗಳೊಂದಿಗೆ ಸರಳವಾಗಿ ವ್ಯವಹರಿಸುವ ಅನಕೂಲತೆಯನ್ನು ನೀಡುತ್ತವೆ. 


ಕೃಷಿ ಸಾಲ ಪಡೆಯುವುದು ಹೇಗೆ?(How to get loan through Kisan credit card) 

ದೇಶದ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ ಮೂಲಕ ಕೃಷಿ ಸಾಲ ಪಡೆಯಬಹುದು. ಅದರಲ್ಲೂ ಸರಿಯಾದ ಸಮಯದಲ್ಲಿ ಲೋನ್ ರೀ ಪೇಮೆಂಟ್ ಮಾಡಿದವರಿಗೆ ಬಡ್ಡಿಯಲ್ಲಿ ಸಬ್ಸಿಡಿ ಕೂಡ ಸಿಗಲಿದೆ. ಯಾವುದೇ ಜಾಮೀನು ಇಲ್ಲದೆ ಬರೋಬ್ಬರಿ 1.60 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಇದಕ್ಕೆ ವಿಮೆ ಕೂಡ ಮಾಡಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?(How to apply for Kisan credit card)

ರೈತರು ಯಾವುದೇ ಬ್ಯಾಂಕ್‌ನಲ್ಲಿ ಬೇಕಾದ್ರೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಒಂದು ಕಂಡೀಷನ್ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.ನೀವು ಪಡೆಯುವ ಬೆಳೆಸಾಲವನ್ನು ಕಿಸಾನ್ ಕ್ರೇಡಿಟ್ ಕಾರ್ಡ್ ಮೂಲಕ ನೀಡಲಾಗುತ್ತದೆ.

ಕ್ರೆಡಿಟ್ ಕಾರ್ಡನ್ನು ಯಾರು ಪಡೆಯಬಹುದು?(Kisan credit card eligibility)

ರೈತರು ಯಾರು ಬೇಕಾದ್ರೂ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ರೂ. 3,00,000 ಇರಲಿದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಹೆಚ್ಚು ಸಾಲು ಕೂಡ ಸಿಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿ ದರ ಎಷ್ಟು?(kisan credit card interest) 

ಬಡ್ಡಿ ದರ ಕೇವಲ ಶೇ. 7 ರಷ್ಟಿದೆ, ಅದರಲ್ಲೂ 3 ರಷ್ಟು ಬಡ್ಡಿ ರಿಯಾಯಿತಿ ಇದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *