Marriage subsidy scheme-ಕಾರ್ಮಿಕರ ಮದುವೆಗೆ ರಾಜ್ಯ ಸರ್ಕಾರ 60,000 ಸಹಾಯಧನ ನೀಡುತ್ತಿದ್ದು, ಅರ್ಹ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ.
ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದು.
ಫಲಾನುಭವಿಯ ಮೊದಲನೆ ಮದುವೆಗೆ ಅಥವಾ ಫಲಾನುಭವಿಯ ಎರಡು ಅವಲಂಭಿತ ಮಕ್ಕಳಿಗೆ ಮದುವೆಯ ವೆಚ್ಚವನ್ನು ಭರಿಸಲು ಸಹಾಯಧನವಾಗಿ ರೂ.60,000/- ಗಳನ್ನೂ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಿ ವಿಧಾನ
1) ಮೊದಲು https://karbwwb.karnataka.gov.in/kn ಗೆ ಭೇಟಿ ನೀಡಿ
2) ನೀವು ಕಡ್ಡಾಯವಾಗಿ ಲಾಗಿನ್ ಆಗಬೇಕು
3) ನೀವು ಮತ್ತೊಮ್ಮೆ Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ
4) ನಂತರ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ
5) ನಂತರ ಅಲ್ಲಿ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ
6) ನಂತರ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ
7) ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ
ಏನೆಲ್ಲಾ ದಾಖಲೆಗಳು ಬೇಕು..?
1) ಆಧಾರ್ ಕಾರ್ಡ್
2) ಬ್ಯಾಂಕ್ ವಿವರಗಳು
3) ಮ್ಯಾರೇಜ್ ಸರ್ಟಿಫಿಕೇಟ್
4) ಮದುವೆ ಕರ್ನಾಟದ ಹೊರಗೆ ನಡೆದಿದ್ದಲ್ಲಿ ಅಫಿಡವಿಟ್ ಸಲ್ಲಿಸುವುದು
ಅರ್ಜಿ ಸಲ್ಲಿಸುವ ಮುನ್ನ ಈ ಸೂಚನೆ ಗಮನಿಸಿ :
* ಕಾರ್ಮಿಕನು ಮದುವೆಯ ಸಹಾಯ ಧನ ಪಡೆಯಲು ಮದುವೆಯಾದ ದಿನಾಂಕದಿಂದ ನೋಂದಣಿಯಾದ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು.
*ಕಟ್ಟಡ ಕಾರ್ಮಿಕನ ಮಗ/ ಮಗಳು ಮದುವೆ ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.
*ವಿವಾಹ ನೋಂದಣಾಧಿಕಾರಿಯಿಂದ ಪಡೆದ ವಿವಾಹ ನೋಂದಣಾ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು
* ಮದುವೆ ಆಗಿರುವ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು
*ನೋಂದಾಯಿತ ಕಟ್ಟಡ ಕಾರ್ಮಿಕನ ಕುಟುಂಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.