2025ರ ಏಪ್ರಿಲ್ 3, ಗುರುವಾರ, ಜ್ಯೋತಿಷ್ಯಶಾಸ್ತ್ರದಲ್ಲಿ ವಿಶೇಷ ದಿನವಾಗಲಿದೆ. ಈ ದಿನ ವೈದಿಕ ಜ್ಯೋತಿಷ್ಯದ ಎರಡು ಪ್ರಮುಖ ಗ್ರಹಗಳಾದ ಮಂಗಳ ಮತ್ತು ಬುಧ ತಮ್ಮ ರಾಶಿ ಸಂಕ್ರಮಣ ಮಾಡಲಿವೆ.
ಈ ದಿನ, ಮಂಗಳನು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುತ್ತಾನೆ. ಅದೇ ದಿನ ಸಂಜೆ 5:31ಕ್ಕೆ, ಬುಧನು ಉತ್ತರಾಭಾದ್ರಪದ ನಕ್ಷತ್ರವನ್ನು ತೊರೆದು ಪೂರ್ವಭಾದ್ರಪದ ನಕ್ಷತ್ರಕ್ಕೆ ಹೋಗುತ್ತಾನೆ. ಈ ಸಂಕ್ರಮಣವು 5 ರಾಶಿಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ, ಹೊಸ ಅವಕಾಶಗಳನ್ನು ತರುವ ಸಾಧ್ಯತೆಯಿದೆ. ಈ ಗ್ರಹ ಚಲನೆಯು ವೃತ್ತಿ, ವ್ಯವಹಾರ, ಮತ್ತು ಆರ್ಥಿಕ ಪ್ರಗತಿಗೆ ಅನುಕೂಲಕರವಾಗಿರಬಹುದು
ಕಟಕ ರಾಶಿ:ಮಂಗಳನ ಪ್ರವೇಶವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೊಸ ವೃತ್ತಿ ಅವಕಾಶಗಳು ಲಭ್ಯವಾಗಬಹುದು. ವ್ಯಾಪಾರ ಹೂಡಿಕೆಗಳು ಮತ್ತು ಪಾಲುದಾರಿಕೆಯಿಂದ ಲಾಭವಾಗಬಹುದು. ಹಣಕಾಸು ದೃಷ್ಟಿಯಿಂದ ಸುಧಾರಣೆಯಾಗಬಹುದು.
ವೃಶ್ಚಿಕ ರಾಶಿ:ನಾನುಕುಲ ಪ್ರಭಾವದ ಜೊತೆಗೆ ಕೆಲವು ಸವಾಲುಗಳೂ ಎದುರಾಗಬಹುದು. ಪ್ರಯಾಣ ಮತ್ತು ಒತ್ತಡ ಹೆಚ್ಚಾಗಬಹುದು. ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ನಡೆಯುವುದು ಒಳಿತು. ಆದರೆ ಹೊಸ ಹಣಾರ್ಜನದ ಅವಕಾಶಗಳು ಲಭ್ಯವಾಗಬಹುದು.
ವೃಷಭ ರಾಶಿ:ಈ ಸಂಕ್ರಮಣವು ಕುಟುಂಬ ಮತ್ತು ವೃತ್ತಿಜೀವನದ ಮೇಲಿನ ಪ್ರಭಾವವನ್ನು ಹೆಚ್ಚಿಸುತ್ತದೆ. ಹೊಸ ವ್ಯವಹಾರ ಆಲೋಚನೆಗಳು ಮತ್ತು ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಲಾಭದಾಯಕ ಸಮಯ.
ಧನು ರಾಶಿ:ಈ ಸಂಕ್ರಮಣವು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ತರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಆರ್ಥಿಕ ಸ್ಥಿತಿ ಬಲಪಡಿಸಲು ಹೊಸ ಹೂಡಿಕೆ ಅವಕಾಶಗಳು ಲಭ್ಯವಾಗಬಹುದು.
ಗಮನಿಸಿ: ಇದು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ ಮಾಹಿತಿ. ವೈಯಕ್ತಿಕ ನಿರ್ಧಾರಗಳನ್ನು ಸ್ವಂತ ವಿವೇಚನೆಯ ಮೇರೆಗೆ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.