ಮೋದಿ ಸರ್ಕಾರವು ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಹಲವು ಜನಪರ ಯೋಜನೆಗಳನ್ನು ಆರಂಭಿಸಿದೆ. ಈ ಪೈಕಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಕೂಡ ಪ್ರಮುಖವಾಗಿದೆ. ಸಣ್ಣ ಉದ್ಯಮಿಗಳನ್ನು ಮತ್ತು ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡುವ ಉದ್ದೇಶವಿರುವ ಈ ಯೋಜನೆಯಡಿ, ನಾನಾ ರೀತಿಯ ವ್ಯಾಪಾರಗಳಿಗೆ ಸಾಲ ಸಿಗುತ್ತದೆ.
ಮುದ್ರಾ ಸಾಲ ಅಂದರೆನು?
ಮುದ್ರಾ ಎಂದರೆ ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫೈನಾನ್ಸ್ ಏಜೆನ್ಸಿ. ಇದರಡಿಯಲ್ಲಿ ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಮತ್ತು ಸುಲಭ ಶರತ್ತಿನಲ್ಲಿ ಸಾಲವನ್ನು ನೀಡುತ್ತದೆ.
ಯಾರು ಈ ಸಾಲ ಪಡೆಯಬಹುದು?
ಸಣ್ಣ ವ್ಯಾಪಾರಿಗಳುಬೀದಿ ವ್ಯಾಪಾರಿಗಳುಮಹಿಳೆಯರುಅಂಗಡಿಗಳು ಮತ್ತು ಸೇವಾ ಕೇಂದ್ರ ತೆರೆಯುವವರುಸ್ಟಾರ್ಟ್‌ಅಪ್ಸ್ ಅಥವಾ ಗೃಹ ಕೈಗಾರಿಕೆ ಆರಂಭಿಸುವವರು
18 ವರ್ಷ ಮೇಲ್ಪಟ್ಟ ಎಲ್ಲರೂ ಈ ಸಾಲಕ್ಕೆ ಅರ್ಜಿ ಹಾಕಬಹುದು. ಉದ್ಯೋಗವಿಲ್ಲದವರೂ ಅರ್ಹರಾಗಿರುತ್ತಾರೆ.
ಏನಿಗೆ ಸಾಲ ಸಿಗುತ್ತೆ?
ಆಟೋ, ಟ್ಯಾಕ್ಸಿ, ಟ್ರ್ಯಾಕ್ಟರ್, ಸರಕು ಸಾಗಣೆ ವಾಹನ ಖರೀದಿಗೆ
ಸಲೂನ್, ಟೈಲರ್ ಅಂಗಡಿ, ಜಿಮ್, ಮೆಡಿಕಲ್ ಶಾಪ್, ಡ್ರೈ ಕ್ಲೀನಿಂಗ್, ಫೋಟೋಕಾಪಿ ಅಂಗಡಿಗೆ
ಹಪ್ಪಳ, ಉಪ್ಪಿನಕಾಯಿ, ಐಸ್‌ಕ್ರೀಮ್, ಬಿಸ್ಕತ್ತು, ಸಿಹಿತಿಂಡಿ ತಯಾರಿಕಾ ಘಟಕಕ್ಕೆ
ಕೋಳಿ, ಮೀನು, ಜೇನು ಮತ್ತು ಜಾನುವಾರು ಸಾಕಣೆ, ಕೃಷಿ ಸಂಸ್ಕರಣಾ ಘಟಕಗಳಿಗೆ
ಅಂಗಡಿಗಳು, ಸೇವಾ ಉದ್ಯಮಗಳು ಮತ್ತು ಕೃಷಿಯೇತರ ಚಟುವಟಿಕೆಗಳಿಗೆ
ಮುದ್ರಾ ಸಾಲದ ಪ್ರಕಾರಗಳು:
ಶಿಶು: ₹50,000 ವರೆಗೆಕಿಶೋರ್: ₹50,001 ರಿಂದ ₹5 ಲಕ್ಷ ವರೆಗೆತರುಣ್: ₹5,00,001 ರಿಂದ ₹10 ಲಕ್ಷ ವರೆಗೆ
ಭದ್ರತೆ ಅಥವಾ ಠೇವಣಿ ಬೇಡಸಾಲದ ಸಂಸ್ಕರಣಾ ಶುಲ್ಕ ಶೂನ್ಯ ಅಥವಾ ಕಡಿಮೆಸಾಲ ಪಾವತಿ ಗಡಿವೇಳೆ: 5 ವರ್ಷಗಳ ಒಳಗೆ
ಈ ಯೋಜನೆಯ ಮೂಲಕ, ನಿಮಗೂ ನಿಮ್ಮ ಕನಸಿನ ಉದ್ಯಮವನ್ನು ಆರಂಭಿಸೋ ಅವಕಾಶವಿದೆ