National livestock mission-2025 ಹೈನುಗಾರಿಕೆ,ಕುರಿ,ಕೋಳಿ,ಹಂದಿ ಸಾಕಾಣಿಕೆಗೆ ಸಿಗಲಿದೆ 50% ಸಬ್ಸಿಡಿ

National livestock mission-2025 ಈ ಕಾರ್ಯಕ್ರಮದಡಿ ಗ್ರಾಮೀಣ ಕೋಳಿ ಉದ್ಯಮಶೀಲತೆ(poultry), ಕುರಿ(Sheep), ಮೇಕೆ(goat), ಹಂದಿ ಸಾಕಾಣಿಕೆ ಮತ್ತು ರಸಮೇವು(Silage) ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

National livestock mission 


ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ಹೊಸ
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ

(ದನ/ಎಮ್ಮೆ, ಕುರಿ/ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗಾಗಿ)


 ಕೇಂದ್ರ ಸರ್ಕಾರದ ಕಿಸಾನ್ ಕ್ರೇಡಿಟ್ ಕಾರ್ಡ್ (Kisan credit card)ಯೋಜನೆಯನ್ವಯ (ಕೆ,ಸಿ,ಸಿ) ಈ ಕೆಳಗಿನ ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟಿçಕೃತ ಬ್ಯಾಂಕ್ / ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಹೊಸ ಕಿಸಾನ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.


 ಆಸಕ್ತ ರೈತಾಪಿ ವರ್ಗದವರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ, ಅರ್ಜಿ ನಮೂನೆಯನ್ನು ಪಡೆದು ಸಲ್ಲಿಸಬಹುದಾಗಿದೆ.

ಅವಶ್ಯಕ ದಾಖಲಾತಿಗಳು :- 

1)ಆಧಾರ,

2)ಪಹಣಿ ಪತ್ರ

3)ಬ್ಯಾಂಕ್‌ಖಾತೆ ಸಂಖ್ಯೆ,

ಬ್ಯಾಂಕಿನ ಹೆಸರು, ಶಾಖೆ ಮತ್ತು ಐ.ಎಫ್.ಎಸ್.ಸಿ. ಕೊಡ್ ನೊಂದಿಗೆ ಬ್ಯಾಂಕ್ ಖಾತೆ ವಿವರಗಳು ಮತ್ತು

4)ಭಾವ ಚಿತ್ರ.

ಕ್ರ.ಸಂ ಘಟಕ ಸೌಲಭ್ಯಗಳ ವಿವರ
  ಹೈನುಗಾರಿಕೆ  
1ಮಿಶ್ರತಳಿ ದನಗಳ ನಿರ್ವಹಣೆ (1+1)ಪ್ರತಿ ಹಸುವಿಗೆ ಗರಿಷ್ಠ ರೂ.14,000/-ರಂತೆ ಒಟ್ಟೂ ಎರಡು ಹಸುಗಳಿಗೆ ರೂ.28,000/-ಸಾಲ ಸೌಲಭ್ಯ
 ಆ. ಸುಧಾರಿತ ಎಮ್ಮೆಗಳ ನಿರ್ವಹಣೆ 
 (1+1)
ಪ್ರತಿ ಎಮ್ಮೆಗೆ ಗರಿಷ್ಠ ರೂ.16,000/-ರಂತೆ ಒಟ್ಟೂ ಎರಡು ಎಮ್ಮೆಗಳಿಗೆ ರೂ.32.000/-ಸಾಲ ಸೌಲಭ್ಯ
  ಕುರಿ ಸಾಕಾಣಿಕೆ  
2ಕುರಿಗಳ ನಿರ್ವಹಣೆ (10+01) ಕಟ್ಟಿಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.12,000/-ರಂತೆ ಸಾಲ ಸೌಲಭ್ಯ
 ಕುರಿಗಳ ನಿರ್ವಹಣೆ (20+01)ಕಟ್ಟಿಮೇಯಿಸುವ ಕುರಿಗಳಿಗೆ ರೂ.48,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.24,000/-ರಂತೆ ಸಾಲ ಸೌಲಭ್ಯ
 ಟಗರುಗಳ ನಿರ್ವಹಣೆ (10)ರೂ. 13,000 ರಂತೆ ಸಾಲ ಸೌಲಭ್ಯ
  ಟಗರುಗಳ ನಿರ್ವಹಣೆ (20)ರೂ. 26,000 ರಂತೆ ಸಾಲ ಸೌಲಭ್ಯ
 ಮೇಕೆ ಸಾಕಾಣಿಕೆ  
3ಮೇಕೆಗಳ ನಿರ್ವಹಣೆ (10+01)ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 24,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,13,000/- ರಂತೆ ಸಾಲ ಸೌಲಭ್ಯ
 ಮೇಕೆಗಳ ನಿರ್ವಹಣೆ (20+01)ಕಟ್ಟಿಮೇಯಿಸುವ ಮೇಕೆಗಳಿಗೆ ರೂ, 48,000/- ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ,26,000/- ರಂತೆ ಸಾಲ ಸೌಲಭ್ಯ
4ಹಂದಿ ಸಾಕಾಣಿಕೆ (10)ರೂ,60,000 ರಂತೆ ಸಾಲ ಸೌಲಭ್ಯ
            ಕೋಳಿ ಸಾಕಾಣಿಕೆ  
5ಮಾಂಸದ ಕೋಳಿ ಸಾಕಾಣಿಕೆ2000 ಕೋಳಿಗಳಿಗೆ ಗರಿಷ್ಠ ರೂ, 1,60,000/-ರ ವರೆಗೆ ಸಾಲ ಸೌಲಭ್ಯ
  ಮೊಟ್ಟೆ ಕೋಳಿ ಸಾಕಾಣಿಕೆ1000 ಕೋಳಿಗಳಿಗೆ ಗರಿಷ್ಠ ರೂ, 1,80,000/-ರ ವರೆಗೆ ಸಾಲ ಸೌಲಭ್ಯ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉಪನಿರ್ದೇಶಕರು/ ಜಿಲ್ಲೆಯ ಎಲ್ಲ ತಾಲ್ಲೂಕಿನ ಸಹಾಯಕ ನಿರ್ದೇಶಕರಗಳು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಸಂಪರ್ಕಿಸಬಹುದಾಗಿದೆ.


Vetarnary department subsidy schemes 2024-ಪಶುಇಲಾಖೆಯಲ್ಲಿರುವ ಯೋಜನೆಗಳ ಪಟ್ಟಿ ಬಿಡುಗಡೆ,ಯಾವ ಯೋಜನೆಯಿಂದ ಯಾವ ಸೌಲಭ್ಯ ಸಿಗಲಿದೆ?

ಹಾಲು ಉತ್ಪಾದಕರಿಗೆ ಪ್ರೋತ್ಸಾಹ(Milk incentive)
• ಹಾಲು ಉತ್ಪಾದಕ ಸದಸ್ಯರು ಸರಬರಾಜು ಮಾಡುವ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ 5/- ರಂತೆ ರೂ. 1103.22 ಕೋಟಿಗಳನ್ನು ವಿತರಿಸಲಾಗಿರುತ್ತದೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ ಎಮ್ಮೆ ಖರೀದಿಗೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ. 6ರ ಬಡ್ಡಿ ಸಹಾಯಧನ ನೀಡಲಾಗುವುದು.

ಲಸಿಕಾ ಕಾರ್ಯಕ್ರಮ(Vaccination program)
• ಕಾಲುಬಾಯಿ ರೋಗ, ಕಂದುರೋಗ, ಪಿ ಪಿ ಆರ್ ರೋಗ, ಹಂದಿಜ್ವರ, ಗಳಲೆ ರೋಗ, ಕರಳುಬೇನೆ ರೋಗ, ಚರ್ಮಗಂಟು ರೋಗಗಳ ವಿರುದ್ಧ ಉಚಿತವಾಗಿ ಲಸಿಕೆ ಹಾಕಲಾಗುವುದು.


ನಾಟಿ ಕೋಳಿ ಮರಿಗಳ ವಿತರಣೆ(Back yard poultry)
• ಮಹಿಳಾ ಸ್ವಸಹಾಯಕ ಸಂಘಗಳ ಆಯ್ದ ಗ್ರಾಮೀಣ ಮಹಿಳಾ ಸದಸ್ಯರಿಗೆ ತಲಾ 20 ಆರು ವಾರದ ನಾಟಿ ಕೋಳಿ ಮರಿಗಳನ್ನು 2650 ಫಲಾನುಭವಿಗಳಿಗೆ 53,000 ಕೋಳಿ ಮರಿಗಳನ್ನು ವಿತರಿಸಲಾಗುವುದು

ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ
* 6 ತಿಂಗಳ ಮೇಲ್ಪಟ್ಟ ಹಸು, ಎಮ್ಮೆ, ಎತ್ತು, ಕೋಣ, ಹೋರಿ ಆಕಸ್ಮಿಕವಾಗಿ ಮರಣ ಹೊಂದಿದಾಗ ಗರಿಷ್ಠ 10000 ರೂ ಪರಿಹಾರಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ.20 ಕೋಟಿ ನಿಗಧಿಪಡಿಸಿದೆ.


ಕುರಿಗಾರರಿಗೆ ಅನುಗ್ರಹ ಕೊಡುಗೆ
• ಆಕಸ್ಮಿಕವಾಗಿ ಮರಣ ಹೊಂದಿದ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ರೂ. 5000.00 ಹಾಗೂ 3 ರಿಂದ 6 ತಿಂಗಳ ಕುರಿ/ಮೇಕೆಗಳಿಗೆ ರೂ. 3500 ಪರಿಹಾರ ಧನ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೂ. 20 ಕೋಟಿ ನಿಗಧಿಪಡಿಸಿದೆ.


ಲಿಂಗನಿರ್ಧರಿತ ವೀರ್ಯನಳಿಕೆ ಬಳಕೆ
* ಹೆಣ್ಣು ಕರುಗಳ ಸಂತತಿಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯಲ್ಲಿ ಲಿಂಗನಿರ್ಧರಿತ ವೀರ್ಯನಳಿಕೆಗಳನ್ನು ಬಳಸಲಾಗುತ್ತಿದೆ.

ಸಂಚಾರಿ ಪಶು ಚಿಕಿತ್ಸಾ ಘಟಕ
ಸಂಚಾರಿ ಪಶುಚಿಕಿತ್ಸಾ ಘಟಕ ಮೂಲಕ ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶುವೈದ್ಯಕೀಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ನೀಡಲಾಗುತ್ತಿದೆ. ಪಶುವೈದ್ಯಕೀಯ ತುರ್ತು ಚಿಕಿತ್ಸೆ ಅವಶ್ಯವಿರುವ ಜಾನುವಾರು ಮಾಲೀಕರು “1962” ಸಂಚಾರಿ ಪಶುಚಿಕಿತ್ಸಾ ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದಾಗಿರುತ್ತದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
– ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಸದಸ್ಯರಿಗೆ 20+1 ಕುರಿ/ಮೇಕೆ ಘಟಕಗಳನ್ನು NCDC ಸಾಲ, ಸರ್ಕಾರದ ಸಹಾಯಧನದೊಂದಿಗೆ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ ಒಟ್ಟು 20,000 ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು.


ಮೇವಿನ ಬೀಜವ ಕಿರು ಪೊಟ್ಟಣ ವಿತರಣೆ
– ಬರಗಾಲದ ನಿರ್ವಹಣೆಗೆ ರೂ.8.17 ಲಕ್ಷ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ರೂ.22.00 ಕೋಟಿಗಳ ಅನುದಾನದಲ್ಲಿ ಉಚಿತವಾಗಿ ವಿತರಿಸಲಾಗಿದೆ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಶೇ. 50% ಸಹಾಯಧನದೊಂದಿಗೆ ರೂ.6.10 ಕೋಟಿ ವೆಚ್ಚದಲ್ಲಿ 3666 ಫಲಾನುಭವಿಗಳಿಗೆ ವಿತರಿಸಲಾಗಿದೆ.

ತಾಲ್ಲೂಕೂಗಳಲ್ಲಿ ಪಾಲಿಕ್ಲಿನಿಕ್ ಸ್ಥಾಪನೆ
* ರಾಜ್ಯದ ಆಯ್ದ 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ರೂ 10 ಕೋಟಿ ಅನುದಾನದಲ್ಲಿ ಪಾಲಿಕ್ಲಿನಿಕ್‌ಗಳನ್ನಾಗಿ i ಮೇಲ್ದರ್ಜೆಗೇರಿಸಲಾಗುವುದು.

1 ಹಸು 1 ಎಮ್ಮೆ ಸಾಕಾಣಿೆಕೆಗೆ 65 ಸಾವಿರ ಸಹಾಯಧನ ಪಡೆಯಲು ಅರ್ಜಿ ಆಹ್ವಾನ-Dairy farming 

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ
ಇಲಾಖೆ(Vetarnary department)ವತಿಯಿಂದ ಹಾಲು ಉತ್ಪಾದಕರ ಉತ್ತೇಜನ ಉಳಿಕೆ ಅನುದಾನದಡಿ ರೈತ ಮಹಿಳೆಯರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಒಂದು ಹಸು ಅಥವಾ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮಹಿಳೆಯರಿಗೆ ಶೇಕಡಾ 6ರ ಬಡ್ಡಿಯ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.



ರೈತ ಮಹಿಳೆಯರು ತಮ್ಮ ವ್ಯಾಪ್ತಿಯ ರಾಷ್ಟ್ರೀಕೃತ, ಗ್ರಾಮೀಣ, ಸಹಕಾರ ಬ್ಯಾಂಕ್‌ಗಳಿಂದ ಹೈನುಗಾರಿಕೆಗೆ ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿರಬೇಕು.
.

ಆಯ್ಕೆಯಾದ ಫಲಾನುಭವಿಗಳಿಂದ ಮುಂಗಡ ಹಣದ ಸ್ವೀಕೃತಿ ರಶೀದಿ ಪಡೆದು ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. 2024ರ ಏಪ್ರೀಲ್ 1ರಿಂದ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ರೈತ ಮಹಿಳೆಯರು ಸಂಬಂಧ ಪಟ್ಟ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಪಶುವೈದ್ಯ ಸಂಸ್ಥೆಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಪಶು ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಾಣ
* 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahvs.karnataka.gov.in/info-2/Schemes+&+Benefits/kn

sreelakshmisai
Author

sreelakshmisai

Leave a Reply

Your email address will not be published. Required fields are marked *