New pension scheme-ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸಾರ್ವತ್ರಿಕ ಪಿಂಚಣಿ ಯೋಜನೆ ರೂಪಿಸಲು ಮುಂದಾಗಿದೆ. ಈ ಹೊಸ ಯೋಜನೆ ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಮತ್ತು ವ್ಯಾಪಾರಿಗಳಿಗೆ ಲಾಭಕರವಾಗಲಿದೆ.
ಯೋಜನೆಯ ಮುಖ್ಯಾಂಶಗಳು
- ಈ ಯೋಜನೆ ಸ್ವಯಂ ಪ್ರೇರಿತ ಪಿಂಚಣಿ ಸ್ಕೀಮ್, ಅಂದರೆ ಭಾಗವಹಿಸುವವರು ತಮ್ಮದೇ ಆದ ಉಳಿತಾಯ ಮಾಡಬೇಕು.
- ಸರ್ಕಾರ ಯಾವುದೇ ನೇರ ಹಣಕಾಸು ಕೊಡುಗೆ ನೀಡುವುದಿಲ್ಲ, ಆದರೆ ನಿಯಂತ್ರಣ ಮತ್ತು ಅನುಷ್ಠಾನ ಭಾರ ಹೊರುತ್ತದೆ.
- ಪ್ರಸ್ತುತ ಇರುವ ಭವಿಷ್ಯನಿಧಿ ಸಂಘಟನೆ (EPFO) ಪಿಂಚಣಿ ಯೋಜನೆಯಿಗಿಂತ ಭಿನ್ನವಾಗಿದೆ
- ಕೇಂದ್ರ ಕಾರ್ಮಿಕ ಸಚಿವಾಲಯ ಈ ಸ್ಕೀಮ್ ಅನ್ನು ಜಾರಿಗೆ ತರುವ ತಯಾರಿಯಲ್ಲಿ ಇದೆ.
ಯಾರು ಅರ್ಹರು?
- 18 ರಿಂದ 60 ವರ್ಷ ವಯಸ್ಸಿನ ಪ್ರತಿಯೊಬ್ಬರೂ ಈ ಯೋಜನೆಗೆ ನೋಂದಾಯಿಸಬಹುದು.
- ನಿರ್ಮಾಣ ಕಾರ್ಮಿಕರು, ಗಿಗ್ ಕೆಲಸಗಾರರು, ಅಸಂಘಟಿತ ವಲಯದ ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳು ಪ್ರಮುಖವಾಗಿ ಈ ಯೋಜನೆಯ ಗುರಿ ಸಮೂಹ
60 ವರ್ಷದ ಬಳಿಕ ಪಿಂಚಣಿ ಹೇಗೆ ಸಿಗಲಿದೆ?
ನೋಂದಾಯಿತ ಸದಸ್ಯರು 60 ವರ್ಷವಾದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ.
ಇದಕ್ಕಾಗಿ ಪ್ರತಿದಿನ ₹55 ರಿಂದ ₹200 ರವರೆಗೆ ಪಾವತಿಸಬೇಕು (ವಯೋಮಾನವನ್ನು ಅವಲಂಬಿಸಿ).
ಸರ್ಕಾರವೂ ಅಷ್ಟೇ ಮೊತ್ತವನ್ನು ಕೊಡುಗೆ ನೀಡುವುದು, ಇದರ ಪರಿಣಾಮವಾಗಿ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ದೊರೆಯಲಿದೆ.
ವಿಶ್ವದ ಇತರ ದೇಶಗಳಲ್ಲಿ ಈ ರೀತಿಯ ಪಿಂಚಣಿ ಯೋಜನೆಗಳಿವೆ?
ಅಮೆರಿಕ, ಕೆನಡಾ, ರಷ್ಯಾ, ಚೀನಾ, ಹಾಗೂ ಯುರೋಪಿನ ಹಲವು ರಾಷ್ಟ್ರಗಳು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಹೊಂದಿವೆ.
ಡೆನ್ಮಾರ್ಕ್, ಸ್ವೀಡನ್, ನಾರ್ವೆ, ನೆದರ್ಲ್ಯಾಂಡ್ಸ್ ಮತ್ತು ನ್ಯೂಜಿಲೆಂಡ್ ದೇಶಗಳು ತಮ್ಮ ಹಿರಿಯ ನಾಗರಿಕರಿಗೆ ವಿಸ್ತೃತ ಪಿಂಚಣಿ ಸೌಲಭ್ಯ ನೀಡುತ್ತವೆ.
ಯೋಜನೆಗೆ ಮುಂಬರುವ ಹಂತಗಳು
ಪ್ರಸ್ತುತ ಪ್ರಸ್ತಾವನೆ ಪೂರ್ಣಗೊಂಡಿದ್ದು, ಸರ್ಕಾರದ ಕ್ಯಾಬಿನೆಟ್ ಅನುಮೋದನೆಗೆ ಕಾಯಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಈಗಿರುವ ಕೆಲವು ಪಿಂಚಣಿ ಯೋಜನೆಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ.
“ರಾಷ್ಟ್ರೀಯ ಪಿಂಚಣಿ ಯೋಜನೆ” (NPS) ಅಸ್ತಿತ್ವದಲ್ಲೇ ಉಳಿಯುತ್ತದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.
ಈ ಯೋಜನೆಯು 2036ರ ಹೊತ್ತಿಗೆ 60 ವರ್ಷ ಮೇಲ್ಪಟ್ಟ 22.7 ಕೋಟಿ ಜನರಿಗೆ ಪಿಂಚಣಿ ಭದ್ರತೆ ಒದಗಿಸಲಿದೆ. ಇದರಿಂದ ಭಾರತದ ಹಿರಿಯ ನಾಗರಿಕರಿಗೆ ದೊಡ್ಡ ಮಟ್ಟದ ಆರ್ಥಿಕ ಸಹಾಯ ದೊರೆಯಲಿದೆ. ಕೇವಲ ಸರ್ಕಾರಿ ಮತ್ತು ಖಾಸಗಿ ಉದ್ಯೋಗಸ್ಥರಿಗೆ ಮಾತ್ರ ಸಿಗುತ್ತಿದ್ದ ಪಿಂಚಣಿ ಎಲ್ಲರಿಗೂ ಲಭ್ಯವಾಗುವುದು, ಇದು ಸಮಾಜದಲ್ಲಿ ಮಹತ್ವದ ಪರಿವರ್ತನೆ ತರಲಿದೆ.