Next Kumbamela-ಮುಂದಿನ ಕುಂಬಮೇಳ ಎಲ್ಲಿ ಮತ್ತು ಯಾವಾಗ ನಡೆಯಲಿದೆ?
ಕುಂಭಮೇಳ ಎಂದರೆ ಭಾರತ ಮಾತ್ರವಲ್ಲ, ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ. ಈ ಬಾರಿಯ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. 144 ವರ್ಷಕ್ಕೊಮ್ಮೆ ನಡೆಯುವ ಈ ಮಹಾ ಕುಂಭಮೇಳವು ಜನವರಿ 13ರಂದು ಮಕರ ಸಂಕ್ರಾಂತಿಯ ಮುನ್ನದಿನ ಆರಂಭವಾಗಿ, 45 ದಿನಗಳ ಪವಿತ್ರ ಯಾತ್ರೆಯ ನಂತರ ಇಂದು ಮಹಾ ಶಿವರಾತ್ರಿ ದಿನ ಅಮೃತ ಸ್ನಾನದೊಂದಿಗೆ ಅಂತ್ಯಗೊಳ್ಳಲಿದೆ.
ಭಕ್ತರ ಅಪಾರ ಪಾಲ್ಗೊಳ್ಳುವಿಕೆ
ಈ ಬಾರಿಯ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಭಕ್ತರ ಲಹರಿ ನಿರೀಕ್ಷೆಗೂ ಮೀರಿ ಹರಿದು ಬಂದಿದ್ದು, ಭಾರತದೆಲ್ಲೆಡೆ ಮತ್ತು ವಿದೇಶಗಳಿಂದಲೂ ಗಣ್ಯರು ಹಾಗೂ ಭಕ್ತರು ಸೇರಿಕೊಂಡಿದ್ದಾರೆ. ಇದರಿಂದಾಗಿ ಈ ಬಾರಿಯ ಕುಂಭಮೇಳದಲ್ಲಿ ಸುಮಾರು 67 ಕೋಟಿ ಜನ ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ಕುಂಭಮೇಳದ ಪ್ರಕಾರಗಳು
ಪ್ರತಿ 4 ವರ್ಷಕ್ಕೊಮ್ಮೆ ಕುಂಭಮೇಳಪ್ರತಿ 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳಪ್ರತಿ 144 ವರ್ಷಕ್ಕೊಮ್ಮೆ ಮಹಾ ಕುಂಭಮೇಳ
ಕುಂಭಮೇಳ ನಡೆಯುವ ಸ್ಥಳಗಳು
ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿಹರಿದ್ವಾರ (ಉತ್ತರಾಖಂಡ) – ಗಂಗಾ ನದಿಯ ದಡದಲ್ಲಿನಾಸಿಕ್ (ಮಹಾರಾಷ್ಟ್ರ) – ಗೋದಾವರಿ ನದಿಯ ತೀರದಲ್ಲಿಉಜ್ಜಯಿನಿ (ಮಧ್ಯಪ್ರದೇಶ) – ಶಿಪ್ರಾ ನದಿಯ ದಡದಲ್ಲಿ
ಮುಂದಿನ ಕುಂಭಮೇಳ ಎಲ್ಲಿ?
ಈ ಬಾರಿಯ ಕುಂಭಮೇಳ ಯಶಸ್ವಿಯಾದ ಬೆನ್ನಲ್ಲೇ, ಮುಂದಿನ ಪೂರ್ಣ ಕುಂಭಮೇಳ 2027ರಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆಯಲಿದೆ. ಇದನ್ನು ಸಿಂಹಸ್ಥ ಕುಂಭಮೇಳ ಎಂದು ಕರೆಯಲಾಗುತ್ತಿದ್ದು, ಗೋದಾವರಿ ನದಿಯ ತೀರದಲ್ಲಿ ಈ ಅದ್ಧೂರಿ ಧಾರ್ಮಿಕ ಉತ್ಸವ ನಡೆಯಲಿದೆ. 17ನೇ ಶತಮಾನದಿಂದ ನಾಸಿಕ್‌ನಲ್ಲಿ ಈ ಮಹೋತ್ಸವ ನಡೆಯುತ್ತಿದ್ದು, ಲಕ್ಷಾಂತರ ಭಕ್ತರಿಗೆ ಪವಿತ್ರ ಸ್ನಾನ ಮಾಡೋ ಅವಕಾಶ ಒದಗಿಸಲಿದೆ.