ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಈ ಬಾರಿ 9 ಕೋಟಿ 80 ಲಕ್ಷ ರೈತರಿಗೆ ಒಟ್ಟು ₹22,000 ಕೋಟಿ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ. ಬಿಹಾರದ ಭಾಗಲ್ಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಯೋಜನೆಯ ಹಣ ಬಿಡುಗಡೆ ಮಾಡಲಾಯಿತು
2019ರಲ್ಲಿ ಆರಂಭವಾದ ಈ ಯೋಜನೆಯು ಸಣ್ಣ ರೈತರಿಗೆ ಆರ್ಥಿಕ ಸಹಾಯ ನೀಡಲು ಕೇಂದ್ರ ಸರ್ಕಾರದ ಪ್ರಮುಖ ಪಠ್ಯಕ್ರಮವಾಗಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ₹6,000 ನೀಡಲಾಗುತ್ತದೆ:
ಏಪ್ರಿಲ್ – ಜುಲೈಆಗಸ್ಟ್ – ನವೆಂಬರ್ಡಿಸೆಂಬರ್ – ಮಾರ್ಚ್
ಈ ಹಣವನ್ನು ಫಸಲು ಬೆಳೆಸಲು, ಬೀಜ, ಗೊಬ್ಬರ, ಕಟಾವು ಮುಂತಾದ ಖರ್ಚುಗಳಿಗೆ ಬಳಸಿಕೊಳ್ಳಬಹುದು.
ಪಿಎಂ-ಕಿಸಾನ್ ಹಣ ಹೇಗೆ ಪರಿಶೀಲಿಸಬಹುದು?
- ಆಧಿಕೃತ ವೆಬ್‌ಸೈಟ್‌ಗೆ ಹೋಗಿ: https://www.pmkisan.gov.in
- ‘Beneficiary Status’ ಆಯ್ಕೆಮಾಡಿ: ರೈತರ ಕಾರ್ನರ್‌ನಲ್ಲಿ ಈ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ವಿವರಗಳನ್ನು ನಮೂದಿಸಿ: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನೀಡಿ.
- ಸ್ಥಿತಿಯನ್ನು ಪರಿಶೀಲಿಸಿ: ‘Get Data’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಿಎಂ-ಕಿಸಾನ್ ಸ್ಥಿತಿ ಕಾಣಬಹುದು.
ಮೊಬೈಲ್ ಆಪ್ ಮೂಲಕ ಹಣ ಚೆಕ್ ಮಾಡುವ ವಿಧಾನ:
- PM Kisan ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ (Google Play Store ಅಥವಾ Apple Store-ನಿಂದ).
- ಲಾಗಿನ್ ಮಾಡಿ – ಆಧಾರ್, ಖಾತೆ ಸಂಖ್ಯೆ ಮೂಲಕ.‘Beneficiary Status’ ಕ್ಲಿಕ್ ಮಾಡಿ – ನಿಮ್ಮ ಪಾವತಿ ವಿವರಗಳು ತಕ್ಷಣ ಲಭ್ಯವಾಗುತ್ತವೆ.
ನಿಮ್ಮ ಹೆಸರು ಪಿಎಂ-ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿದೆಯೇ?
- https://pmkisan.gov.in ವೆಬ್‌ಸೈಟ್ ತೆರೆಯಿರಿ.‘Beneficiary List’ ಕ್ಲಿಕ್ ಮಾಡಿ.
- ರಾಜ್ಯ, ಜಿಲ್ಲೆ, ತಾಲೂಕು, ಹಳ್ಳಿ ಆಯ್ಕೆ ಮಾಡಿ.‘Get Report’ ಮೇಲೆ ಕ್ಲಿಕ್ ಮಾಡಿದರೆ ಪಟ್ಟಿ ಲಭ್ಯವಾಗುತ್ತದೆ.
ಯಾವುದೇ ಸಮಸ್ಯೆ ಬಂದರೆ, ಸಂಪರ್ಕಿಸಿ:
📧 ಇಮೇಲ್: [email protected], [email protected]
📞 ಸಹಾಯವಾಣಿ ಸಂಖ್ಯೆ: 011-24300606, 155261☎ ಟೋಲ್-ಫ್ರೀ: 1800-115-526.
ಈ ಮೂಲಕ ಪಿಎಂ-ಕಿಸಾನ್ ಯೋಜನೆ 6 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಸಣ್ಣ ರೈತರಿಗೆ ನಿರಂತರ ಆರ್ಥಿಕ ಬೆಂಬಲ ನೀಡುತ್ತಿದೆ!