PM Surya Ghar Muft Bijli Yojana-2025:PM Surya Ghar Yojana: ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆಗೆ ಹೊಸದಾಗಿ ʼಪಿಎಂ ಸೂರ್ಯ ಘರ್ʼ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು. ಇದಾದ ನಂತರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆತಿತ್ತು. ಈಗ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿ ಆಗಿರುವ ಕಾರಣ ಈ ಯೋಜನೆಗೆ ಮತ್ತಷ್ಟು ಹೆಚ್ಚಿನ ಸಹಾಯಧನ ದೊರೆಯುತ್ತಿದೆ.
300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿ
ʼಪಿಎಂ ಸೂರ್ಯ ಘರ್ʼ ಯೋಜನೆಯಲ್ಲಿ ಮೊದಲ ಹಂತದಲ್ಲಿ 1 ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಸಿ, ಇದರಿಂದ ಬರುವ ವಿದ್ಯುತ್‌ನಿಂದ ಬಡವರಿಗೆ ಉಚಿತ ವಿದ್ಯುತ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ ಮಧ್ಯಮ ಮತ್ತು ಬಡ ವರ್ಗದ ಜನರಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬಹುದು ಎಂಬ ಆಕಾಂಕ್ಷೆ ಇದೆ.
ಸೌರ ವಿದ್ಯುತ್ ಫಲಕಕ್ಕೆ ತಗುಲುವ ವೆಚ್ಚ ಹಾಗೂ ಸಬ್ಸಿಡಿ ಎಷ್ಟು?
ನೀವು ʼಪಿಎಂ ಸೂರ್ಯ ಘರ್ʼ ಯೋಜನೆಯಡಿ ವಿದ್ಯುತ್ ಪ್ಯಾನೆಲ್ ಅಳವಡಿಕೆ ಮಾಡಿದ್ರೆ 1 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 90,000 ರೂ. ಖರ್ಚು ಆಗುತ್ತದೆ. ಅದೇ ನೀವು 2 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 1,50,000 ರೂ. ಖರ್ಚು ಆಗುತ್ತದೆ. 3 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 2,00,000 ರೂ.ವರೆಗೆ ಖರ್ಚು ಆಗುತ್ತದೆ. ನೀವು ಎಷ್ಟು ಕಿಲೋ ವ್ಯಾಟ್ ಸೋಲಾರ್ ಫಲಕ ಅಳವಡಿಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ. ಒಂದು ಕಿಲೋ ವ್ಯಾಟ್‌ಗೆ 18,000 ರೂ., 2 ಕಿಲೋ ವ್ಯಾಟ್‌ಗೆ 30,000 ರೂ. ಹಾಗೂ 3 ಕಿಲೋ ವ್ಯಾಟ್‌ಗೆ 78,000 ರೂ. ಮೊತ್ತವನ್ನು ಸಬ್ಸಿಡಿ ನೀಡಲಾಗುತ್ತದೆ. ಈ ಸಹಾಯಧನದ ಮೊತ್ತವನ್ನು ಕೇಂದ್ರವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.
ಸೌರಫಲಕ ಅಳವಡಿಕೆ ಮಾಡುವುದರ ಉಪಯೋಗವೇನು?
ವಿದ್ಯುತ್ ಬಿಲ್ ಪಾವತಿಸುವ ಅವಶ್ಯಕತೆಯಿಲ್ಲ: ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಅಗತ್ಯ ಇಲ್ಲ. ಬಡವರಿಗೆ ಈ ಹಣವು ಉಳಿತಾಯ ಆಗುವುದರಲ್ಲಿ ಸಂಶಯವಿಲ್ಲ.
ವಿದ್ಯುತ್ ಮಾರಾಟ ಮಾಡಿ ಹಣ ಗಳಿಕೆ: ಸೌರ ಫಲಕ ಅಳವಡಿಕೆ ಮಾಡಿಸಿಕೊಂಡರೆ ನಿಮ್ಮ ಮನೆಯಲ್ಲಿ ಬಳಕೆ ಆಗದೆ ಉಳಿಯುವ ವಿದ್ಯುತ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಹಣ ಗಳಿಸಲು ಸಾಧ್ಯವಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜ್ ಹಾಕಲು: ಸೌರ ಫಲಕ ಅಳವಡಿಕೆ ಮಾಡಿದರೆ ಯಾವುದೇ ಹೆಚ್ಚಿನ ಖರ್ಚು ಇಲ್ಲದೆಯೇ ಎಲೆಕ್ಟಿಕ್ ವಾಹನಗಳು ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಹಾಗೂ ಮೊಬೈಲ್‌ಗಳಿಗೆ ಚಾರ್ಜ್ ಹಾಕಲು ಸಹಾಯವಾಗುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
* ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು
* 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಹಿಂದುಳಿದ ಅಥವಾ ಮಾಧ್ಯಮ ವರ್ಗದವರಿಗೆ ಹೆಚ್ಚು ಆದ್ಯತೆ ಇದೆ
* ಕುಟುಂಬದ ವಾರ್ಷಿಕ ಆದಾಯ 1,50,000 ರೂ.ಗಿಂತ ಜಾಸ್ತಿ ಇರಬಾರದು
* ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಹುದ್ದೆಯಲ್ಲಿ ಇರಬಾರದು
ದೇಶದ ಬಡ, ಮಧ್ಯಮ ವರ್ಗದ ಜನರ ಮನೆಗಳಿಗೆ ಉಚಿತ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಭಾಗವಾಗಿ ಕೋಟ್ಯಂತರ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಸಿಸ್ಟಂ ಅಳವಡಿಸಲಾಗುತ್ತದೆ. ‘ಪಿಎಂ ಸೂರ್ಯ ಘರ್-ಮುಫ್ತ್ ಬಿಜ್ನಿ ಯೋಜನೆ’ಯ ಮೂಲಕ ಫಲಾನುಭವಿಗಳು ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಇದಕ್ಕಾರಿ ಸರ್ಕಾರ 75,021 ಕೋಟಿ ರೂ. ಮೀಸಲಿಟ್ಟಿದೆ.
ಈ ಯೋಜನೆಯ ಲಾಭ ಪಡೆಯಲು ರಾಷ್ಟ್ರೀಯ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಪೋರ್ಟಲ್‌ನಲ್ಲಿ ಸೌರ ರೂಫ್ ಸ್ಥಾಪನೆಗೆ ಸೂಕ್ತವಾದ ಮಾರಾಟಗಾರರನ್ನೂ ಸಹ ನೀವು ಆಯ್ಕೆ ಮಾಡಬಹುದು.
ಮೊದಲು ಅಧಿಕೃತ ಪೋರ್ಟಲ್ https://www.pmsuryaghar.gov.inಗೆ ಭೇಟಿ ನೀಡಿ.
ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ನಿರ್ದಿಷ್ಟಪಡಿಸಿ.
ನಂತರ ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಿ.
ಈ ವಿವರಗಳನ್ನು ಭರ್ತಿ ಮಾಡಿದ ನಂತರವೇ ನಿಮ್ಮ ಅರ್ಜಿಯನ್ನು ನೋಂದಾಯಿಸಲಾಗುತ್ತದೆ.
- ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಮಾಡಿ.
- ಇದು ರೂಫ್ ಟಾಪ್ ಸೋಲಾರ್ ಪವರ್ ಅರ್ಜಿ ತೋರಿಸುತ್ತದೆ. ಅರ್ಜಿಯಲ್ಲಿ ಸಂಪೂರ್ಣ ವಿವರ ತುಂಬಬೇಕು.
ಅರ್ಜಿ ಪರಿಶೀಲನೆ:
- ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಸ್ಥಳೀಯ ವಿದ್ಯುತ್ ವಿತರಣಾ ಕಂಪನಿ (ಡಿಸ್ಕಾಂ) ಅರ್ಜಿಯನ್ನು ಪರಿಶೀಲಿಸುತ್ತದೆ.
- ಇದರ ಅನುಮೋದನೆಗೆ ಕೆಲವು ವಾರಗಳು ಬೇಕಾಗುತ್ತವೆ.
- ಡಿಸ್ಕಮ್‌ನಿಂದ ಯೋಜನೆಯ ಅನುಮೋದನೆಗಾಗಿ ನಿರೀಕ್ಷಿಸಿ.
ಸೌರ ಫಲಕಗಳ ಅಳವಡಿಕೆ:
- ಡಿಸ್ಕಾಂನಿಂದ ಅನುಮೋದನೆ ಪಡೆದ ನಂತರ ನೀವು ನಿಮ್ಮ ಡಿಸ್ಕಾಂನ ಲಿಸ್ಟ್ ಮಾಡಿದ ಮಾರಾಟಗಾರರಿಂದ ಮಾತ್ರ ಮನೆಗೆ ಸೋಲಾರ್ ಪ್ಲಾಂಟ್ ಅಳವಡಿಸಬೇಕು.
- ಅನುದಾನ ಪಡೆಯಲು ಈ ಮಾರಾಟಗಾರರ ನೋಂದಣಿ ಅಗತ್ಯ.
ನೆಟ್ ಮೀಟರಿಂಗ್‌ಗೆ ಅರ್ಜಿ ಸಲ್ಲಿಕೆ ಹೇಗೆ?:
- ಸೋಲಾರ್ ಅಳವಡಿಕೆ ಪೂರ್ಣಗೊಳಿಸಿದ ನಂತರ ನೀವು ಪೋರ್ಟಲ್‌ನಲ್ಲಿ ನಿಮ್ಮ ವಿದ್ಯುತ್ ಸ್ಥಾವರದ ವಿವರ ನಮೂದಿಸಬೇಕಾಗುತ್ತದೆ.
- ನಂತರ ನೆಟ್ ಮೀಟರಿಂಗ್‌ಗೆ ಅರ್ಜಿ ಸಲ್ಲಿಸಿ.
- ಈ ಸಾಧನವು ನಿಮ್ಮ ಸೌರ ಫಲಕಗಳಿಂದ ಉತ್ಪತ್ತಿಯಾಗುವ ಕರೆಂಟ್ ಮತ್ತು ಗ್ರಿಡ್ ವಿದ್ಯುತ್ ಸೇವಿಸುವುದನ್ನು ದಾಖಲಿಸುತ್ತದೆ.
- ಈ ಸೆಟಪ್‌ನೊಂದಿಗೆ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು DISCOMಗೆ ಮರಳಿ ಮಾರಾಟ ಮಾಡಬಹುದು.
- ಆದ್ದರಿಂದ ನೀವು ಹೆಚ್ಚುವರಿ ಆದಾಯ ಪಡೆಯಬಹುದು.
ಸಹಾಯಧನ ವಿತರಣೆ:
- ನೆಟ್ ಮೀಟರ್ ಅಳವಡಿಸಿದ ನಂತರ ಡಿಸ್ಕಾಂ ಅಧಿಕಾರಿಗಳು ಪರಿಶೀಲಿಸುತ್ತಾರೆ.
- ಈ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ ಪೋರ್ಟಲ್, ಆಯೋಗದ ಪ್ರಮಾಣಪತ್ರವನ್ನು ನೀಡುತ್ತದೆ.
- ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ಕ್ಯಾನ್ಸಲ್ ಚೆಕ್ ಅನ್ನು ಪೋರ್ಟಲ್‌ನಲ್ಲಿ ಸಲ್ಲಿಸಬೇಕು.
- ಅರ್ಜಿದಾರರು 3 kWವರೆಗೆ ರೂಫ್ ಟಾಪ್ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲು ಅಗತ್ಯವಿರುವ ಯಾವುದೇ ಡೌನ್ ಪಾವತಿ ಇಲ್ಲದೆ ಶೇ 7ರವರೆಗೆ ಕಡಿಮೆ ಬಡ್ಡಿಯ ಸಾಲ ಉತ್ಪನ್ನಗಳನ್ನು ಪಡೆಯಬಹುದು.
- ಅಂದರೆ, 3 ಕಿಲೋವ್ಯಾಟ್ ವ್ಯವಸ್ಥೆಗೆ 78 ಸಾವಿರ ರೂ.ವರೆಗೆ ಸಬ್ಸಿಡಿ.
- ಈ ಸಬ್ಸಿಡಿ ಮೊತ್ತವನ್ನು 30 ದಿನಗಳಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಯೋಜನೆಯ ಪ್ರಯೋಜನಗಳು:
- ಇದು ನಿಮಗೆ ಉಚಿತ ವಿದ್ಯುತ್ ಒದಗಿಸುವುದು ಮಾತ್ರವಲ್ಲದೆ ವಿದ್ಯುತ್ ಬಿಲ್‌ಗಳಲ್ಲಿ ಹಣ ಉಳಿಸುತ್ತದೆ.
- ಉದಾಹರಣೆಗೆ, ತಿಂಗಳಿಗೆ 300 ಯೂನಿಟ್ ವಿದ್ಯುತ್ ಖರ್ಚಾಗುವ 3 kW ಸೋಲಾರ್ ಸಿಸ್ಟಮ್ ಸ್ಥಾಪಿಸುವ ಮೂಲಕ ವರ್ಷಕ್ಕೆ ಸುಮಾರು 15,000 ರೂ. ಉಳಿಸಬಹುದು.
- ಹೆಚ್ಚುವರಿಯಾಗಿ, ಯೋಜನೆಯು 2 kWವರೆಗಿನ ವ್ಯವಸ್ಥೆಗಳಿಗೆ ಶೇ 60 ಸಬ್ಸಿಡಿ ಮತ್ತು 2ರಿಂದ 3 kW ನಡುವಿನ ವ್ಯವಸ್ಥೆಗಳಿಗೆ ಶೇ 40 ಸಬ್ಸಿಡಿಯನ್ನು ಒದಗಿಸುತ್ತದೆ. ಆರಂಭದಲ್ಲಿ ನಿಮ್ಮ ಮನೆಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡುತ್ತದೆ.
- ಇದಕ್ಕೆ ಮೇಲಾಧಾರ ರಹಿತ ಸಾಲವೂ ಲಭ್ಯ.