PMEGP 2025
PMEGP 2025-ಪ್ರಧಾನ ಮಂತ್ರಿಗಳ ರೋಜ್‍ಗಾರ್ (PMRY) ಯೋಜನೆಯನ್ನು ಗ್ರಾಮೀಣ ಉದ್ಯೋಗ ಸೃಜನ (REGP) ಯೋಜನೆಯಲ್ಲಿ ವಿಲೀನಗೊಳಿಸಿ ಭಾರತ ಸರ್ಕಾರದ ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವಾಲಯವು ಹೊಸದಾಗಿ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ (PMEGP) ಎಂಬ ಯೋಜನೆಯನ್ನು 2008-09 ನೇ ಸಾಲಿನಿಂದ ಜಾರಿಗೆ ತಂದಿರುತ್ತದೆ.
PMEGP 2025 ಯೋಜನೆಯ ರೂಪರೇಷಗಳು:-
ಗ್ರಾಮಾಂತರ ಪ್ರದೇಶ:- 2001 ರ ಜನಗಣತಿಯಂತೆ ಸರ್ಕಾರದಿಂದ ಕಂದಾಯ ಗ್ರಾಮವಾಗಿ ಪ್ರಕಟವಾಗಿರುವ ಅಥವಾ 20,000 ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣ ಪ್ರದೇಶ.
ಪ್ರಧಾನ ಅಂಶಗಳು:-
- ಯೋಜನಾ ವೆಚ್ಚ : ಸೇವಾ ಉದ್ದಿಮೆಗಳಿಗೆ ಗರಿಷ್ಠ ಯೋಜನಾ ವೆಚ್ಚ ರೂ.10,00 ಲಕ್ಷ (ಹತ್ತು ಲಕ್ಷ) ಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಹಾಗೂ ಉತ್ಪಾದನಾ ಉದ್ದಿಮೆಗಳಿಗೆ ರೂ.25,00 ಲಕ್ಷ (ಇಪ್ಪತ್ತೈದು ಲಕ್ಷ)ಗಳವರೆಗೆ ಯೋಜನೆಗಳನ್ನು ರೂಪಿಸಬಹುದಾಗಿದೆ.
- ಅರ್ಹ ಉದ್ದಿಮೆದಾರರು :-
- ರೂ.10 ಲಕ್ಷ ಯೋಜನಾ ವೆಚ್ಚಕ್ಕೆ ಮೇಲ್ಪಟ್ಟ ತಯಾರಿಕಾ ಘಟಕಕ್ಕೆ ಮತ್ತು ರೂ.5 ಲಕ್ಷ ಮೇಲ್ಪಟ್ಟ ಸೇವಾ ವಲಯದ ಘಟಕಗಳಿಗೆ ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಈ ಯೋಜನೆಯಡಿ 18 ವರ್ಷ ತುಂಬಿರುವ ವೈಯುಕ್ತಿಕ ಕಸಬುದಾರರು, ಉದ್ಯಮಶೀಲರು/ಸಂಘ ಸಂಸ್ಥೆಗಳು/ಸಹಕಾರ ಸಂಘಳು/ಸ್ವಸಹಾಯ ಗುಂಪುಗಳು ಆರ್ಹವಾಗಿವೆ. ಆದರೆ ಪಾಲುದಾರಿಕೆ/ಖಾಸಗಿ ನಿಯಮಿತ ಕಂಪನಿಗಳು/ಜಂಟಿ ಉದ್ದಿಮೆದಾರರು/ಹಿಂದೂ ಅವಿಭಾಜಿತ ಕುಟುಂಬಗಳು ಈ ಯೋಜನೆಗೆ ಆರ್ಹವಾಗಿರುವುದಿಲ್ಲ.
- ಒಂದು ಕುಟುಂಬಕ್ಕೆ ಒಂದು ಘಟಕಕ್ಕೆ ಮಾತ್ರ ಸಾಲ ಪಡೆಯಲು ಅವಕಾಶವಿರುತ್ತದೆ.
- ಯೋಜನಾ ವೆಚ್ಚದ ಶೇ.5 ರಷ್ಟು ಹಾಗೂ ಸಾಮಾನ್ಯ ವರ್ಗದವರು ಶೇ.10 ರಷ್ಟು ಸ್ವಂತ ಬಂಡವಾಳವನ್ನು ಹೂಡಬೇಕಾಗುತ್ತದೆ. ಉಳಿಕೆ ಹಣವನ್ನು ಸಾಲವಾಗಿ ಬ್ಯಾಂಕಿನಿಂದ ಪಡೆದು ಒಟ್ಟು 100% ಭಾಗದಷ್ಟು ಹಣವನ್ನು ಘಟಕದಲ್ಲಿ ತೊಡಗಿಸಬೇಕು.
- ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಯಾವುದೇ ಆದಾಯದ ಮಿತಿ ಇರುವುದಿಲ್ಲ.
ಅಂಚು ಹಣ:- - ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗಕ್ಕೆ ಯೋಜನಾ ವೆಚ್ಚದ ಶೇ.25ರಷ್ಟು ಮತ್ತು ವಿಶೇಷ ವರ್ಗಗಳಿಗೆ ಅಂದರೆ ಪರಿಶಿಷ್ಟ ಜಾತಿ/ಪಂಗಡ/ಹಿಂದುಳಿದ ವರ್ಗಗಳು/ಮಾಜಿ ಸೈನಿಕರು/ ಅಂಗವಿಕಲರು/ ಮಹಿಳೆಯರು/ ಅಲ್ಪಸಂಖ್ಯಾತರಿಗೆ ಶೇ.35 ರಷ್ಟು ಅಂಚು ಹಣ ಪಡೆಯಲು ಅರ್ಹತೆ ಇದೆ.
- ಬ್ಯಾಂಕುಗಳು ಉದ್ದಿಮೆದಾರಿಗೆ ಸಾಲ ಮಂಜೂರುಮಾಡಿ ಮೊದಲನೆ ಕಂತಿನ ಹಣ ಬಿಡುಗಡೆ ಮಾಡಿದ ನಂತರ ಬ್ಯಾಂಕ್‍ಗಳು ಅಂಚುಹಣ (ಮಿಡಲ್ ಎಂಡ್ ಸಬ್ಸಿಡಿ) ಕ್ಲೈಮ್ ಮಾಡಿ ಅಂಚು ಹಣವನ್ನು ಉದ್ದಿಮೆದಾರರ ಹೆಸರಿನಲ್ಲಿ ಟಿ.ಡಿ.ಆರ್.ಖಾತೆಯಲ್ಲಿ 3 ವರ್ಷ ಠೇವಣಿ ಇಡಬೇಕಾಗಿರುತ್ತದೆ. ಘಟಕ ಕೆಲಸ ಮಾಡುವುದನ್ನು ಪರಿಶೀಲಿಸಿದ ನಂತರ ಉದ್ದಿಮೆದಾರರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಲು ತಿಳಿಸಲಾಗುವುದು. ಟಿ.ಡಿ.ಆರ್. ಖಾತೆಯಲ್ಲಿ ಇಟ್ಟ ಹಣಕ್ಕೆ ಬ್ಯಾಂಕ್‍ಗಳು ಬಡ್ಡಿ ನೀಡಬೇಕಾಗಿಲ್ಲ ಹಾಗೂ ಉದ್ದಿಮೆದಾರರಿಗೆ ನೀಡಿದ ಅಷ್ಟೆ ಮೊತ್ತದ ಸಾಲದ ಹಣಕ್ಕೂ ಬ್ಯಾಂಕ್ ಬಡ್ಡಿ ವಿಧಿಸುವಂತಿಲ್ಲ.
ಉದ್ಯಮಶೀಲತಾ ಅಭಿವೃದ್ಧಿಕಾರ್ಯಕ್ರಮ:-
ಉದ್ಯಮ ಶೀಲತಾಭಿವೃದ್ಧಿ ತರಬೇತಿಯನ್ನು ಬ್ಯಾಂಕುಗಳಿಂದ ಮೊದಲ ಕಂತು ಬಿಡುಗಡೆಯಾಗುವ ಮುನ್ನ ಅಂಗೀಕೃತ ತರಬೇತಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪಡೆಯಬೇಕಾಗಿದೆ ರೂ.25/- ಲಕ್ಷದ ಯೋಜನಾ ವೆಚ್ಚದ ಉತ್ಪಾದನಾ ಘಟಕಗಳಿಗೆ ಹಾಗೂ ರೂ.10/- ಲಕ್ಷಗಳ ಯೋಜನಾ ವೆಚ್ಚಗಳ ಸೇವಾ ಘಟಕಗಳಿಗೆ (ಅಂಗೀಕೃತ ತರಬೇತಿ ಕೇಂದ್ರಗಳಲ್ಲಿ) ಎರಡು ವಾರ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಆನ್-ಲೈನ್ ಮುಖಾಂತರ ಇ.ಡಿ.ಪಿ ತರಬೇತಿ ಪಡೆಯಬಹುದು.
ಅರ್ಜಿ ಸಲ್ಲಿಕೆ:
www.kviconline.gov.in ರಲ್ಲಿಆನ್ ಲೈನ್ ಮುಖಾಂತರಸ್ವೀಕರಿಸುವುದು.
ಅರ್ಜಿಯ ಜೊತೆಗೆಸಲ್ಲಿಸಬೇಕಾದದಾಖಲಾತಿಗಳು
- ಅರ್ಜಿ ನಮೂನೆ
- ಭಾವಚಿತ್ರಗಳು-2
- ವಾಸಸ್ಥಳ ದೃಢೀಕರಣ ಪತ್ರ
- ಯೋಜನಾ ವರದಿ
- ಸ್ಥಾಪಿಸುವ ಘಟಕ ಗ್ರಾಮೀಣ ಪ್ರದೇಶವಾಗಿರುವುದಕ್ಕೆ ದಾಖಲಾತಿ
- ಜಾತಿ ಪ್ರಮಾಣ ಪತ್ರ/ಮಾಜಿ ಸೈನಿಕ/ಅಂಗವಿಕಲರಾಗಿರುವುದಕ್ಕೆ ದಾಖಲಾತಿ
- ವಿದ್ಯಾಭ್ಯಾಸ/ತಾಂತ್ರಿಕ ವಿದ್ಯಾರ್ಹತೆ ಪ್ರಮಾಣ ಪತ್ರದ ಪ್ರತಿ.
- ಯಂತ್ರೋಪಕರಣಗಳ ದರ ಪಟ್ಟಿ
- ಪಂಚಾಯತ್ ಲೈಸೆನ್ಸ್
- ಘಟಕದ ಕಟ್ಟಡದ ದಾಖಲಾತಿಗಳು.
ಸರ್ಕಾರದಿಂದಸಹಾಯಧನ:-
ಫಲಾನುಭವಿಗಳವರ್ಗೀಕರಣ | ಯೋಜನಾವೆಚ್ಚದಲ್ಲಿಪ್ರವರ್ತಕರವಂತಿಕೆ | ಯೋಜನಾವೆಚ್ಚದ ಮೇಲೆಅರ್ಹತೆಯಿರುವಸಹಾಯಧನ |
ಸಾಮಾನ್ಯ ವರ್ಗ | ಶೇ.10% | ಶೇ.25% |
ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ ಮಹಿಳೆ | ಶೇ.5% | ಶೇ.35% |
ಯೋಜನೆಅನುಷ್ಠಾನಗೊಳಿಸುವಬ್ಯಾಂಕ್ಗಳು
- ರಾಷ್ಟ್ರೀಕೃತ ಬ್ಯಾಂಕ್‍ಗಳು,
- ಗ್ರಾಮೀಣ ಬ್ಯಾಂಕ್‍ಗಳು
- ಎಸ್.ಎಲ್.ಬಿ.ಸಿ. ಯಿಂದ ಅನುಮೋದಿಸಲ್ಪಟ್ಟ ಖಾಸಗಿ ವಾಣಿಜ್ಯ ಬ್ಯಾಂಕ್‍ಗಳು/ಸಹಕಾರಿ ಬ್ಯಾಂಕ್‍ಗಳು.
ಸಂಯುಕ್ತ ಸಾಲ:
ರಾಷ್ಟ್ರೀಕೃತ ಬ್ಯಾಂಕ್‍ಗಳು/ವಾಣಿಜ್ಯ ಬ್ಯಾಂಕ್‍ಗಳು/ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಂತಹ ಹಣಕಾಸು ಸಂಸ್ಥೆಗಳು ಸಾಮಾನ್ಯ ಸಾಲ ಯೋಜನೆ ಅಡಿಯಲ್ಲಿ ಅಥವಾ ಸಿ.ಜಿ.ಟಿಎಂ.ಎಸ್.ಇ ಯೋಜನೆ ಅಡಿಯಲ್ಲಿ ಅಳವಡಿಸಿಕೊಂಡು ಯೋಜನಾ ವೆಚ್ಚದ ಶೇ 90-95% ರಷ್ಟು ಸಾಲವನ್ನು ಮಂಜೂರು ಮಾಡುವುದು.
ಪ್ರವರ್ತಕರ ವಂತಿಕೆ:
ಸಾಮಾನ್ಯ ವರ್ಗದ ಉದ್ಯಮಶೀಲರು ಯೋಜನಾ ವೆಚ್ಚದ ಶೇ 10% ರಷ್ಟು ಬಂಡವಾಳವಾಗಿ ತೊಡಗಿಸಬೇಕು. ಉದ್ಯಮಶೀಲರು ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ/ಮಾಜಿ ಸೈನಿಕ/ಅಂಗವಿಕಲ/ಮಹಿಳೆ ಆಗಿದ್ದಲ್ಲಿ ಯೋಜನಾ ವೆಚ್ಚದ ಶೇ.5% ರಷ್ಟು ಬಂಡವಾಳ ತೊಡಗಿಸಬೇಕು.
ಈ ಯೋಜನೆಯಲ್ಲಿಕೈಗೊಳ್ಳಬಹುದಾದ ಕೆಲವುಚಟುವಟಿಕೆಗಳು:-
ಖನಿಜಾಧಾರಿತ ಉದ್ದಿಮೆಗಳು:
- ಗೃಹ ಕುಂಬಾರಿಕೆ ಉದ್ದಿಮೆ
- ಸುಣ್ಣಕಲ್ಲು,ಕಪ್ಪೆ ಚಿಪ್ಪು ಮತ್ತಿತ್ತರ ಸುಣ್ಣ ಉತ್ಪನ್ನ ಉದ್ದಿಮೆ
- ಕಲ್ಲುಪುಡಿ ಮಾಡುವುದು,ಸೈಜು ಕಲ್ಲುಗಳನ್ನು ತಯಾರಿಸುವುದು.ಕಟ್ಟಡ ಮತ್ತು ದೇವಾಲಯಗಳಿಗೆ ಕಲ್ಲಿನಲ್ಲಿ ಶಿಲ್ಪಗಳ ತಯಾರಿಕೆ.
- ಕಲ್ಲಿನಿಂದ ಬಳಕೆ ವಸ್ತುಗಳ ತಯಾರಿಕೆ
- ಸ್ಲೇಟ್ ಮತ್ತು ಬಳಪಗಳ ತಯಾರಿಕೆ
- ಪ್ಲಾಸ್ಟರ್ ಆಫ್ ಪ್ಯಾರಿಸ್ ಉತ್ಪಾದನೆ
- ಪಾತ್ರೆಗಳನ್ನು ತೊಳೆಯುವ ಪುಡಿ
- ಸೌದೆಯಿಂದ ಇದ್ದಿಲು ತಯಾರಿಕೆ
- ಚಿನ್ನ,ಬೆಳ್ಳಿ,ಕಲ್ಲು,ಚಿಪ್ಪುಗಳು ಹಾಗೂ ಕೃತಕ ವಸ್ತುಗಳಿಂದ ಆಭರಣಗಳ ತಯಾರಿಕೆ
- ಗುಲಾಲು ಮತ್ತು ರಂಗೋಲಿಗಳ ತಯಾರಿಕೆ
- ಬಳೆಗಳ ತಯಾರಿಕೆ
- ಪೇಯಿಂಟುಗಳು,ವಾರ್ನಿಷ್‍ಗಳು,ಡಿಸ್ಟೆಂಪರ್ ಗಳ ಉತ್ಪಾದನೆ
- ಗಾಜಿನ ಅಲಂಕಾರಿಕ ವಸ್ತುಗಳ ತಯಾರಿಕೆ, ಹೊಳಪು ನೀಡುವುದು
- ಆಭರಣದ ಕಲ್ಲುಗಳ ತಯಾರಿಕೆ
- ಐಯೋಡೈಸ್ಡ್ ಉಪ್ಪು ತಯಾರಿಕೆ
ಅರಣ್ಯಾಧಾರಿತ ಕೈಗಾರಿಕೆ:
- ಕೈಕಾಗದ
- ಕತ್ತಾಳೆ ನಾರು ತಯಾರಿಕೆ
- ಗೊಂದು ಮತ್ತು ರೆಸಿನ್‍ಗಳ ತಯಾರಿಕೆ
- ಷೆಲ್ಲಾಕ್ ತಯಾರಿಕೆ
- ಗೃಹ ಬೆಂಕಿಕಡ್ಡಿ,ಪಟಾಕಿ ಹಾಗೂ ಅಗರಬತ್ತಿಗಳ ತಯಾರಿಕೆ
- ಬೆತ್ತ ಮತ್ತು ಬಿದಿರು ಉದ್ದಿಮೆ
- ಕಾಗದದ ದೊನ್ನೆ, ತಟ್ಟೆ,ಕೈಚೀಲ ಮತ್ತಿತರ ಕಾಗದದ ವಸ್ತುಗಳ ತಯಾರಿಕೆ
- ಎಕ್ಸರ್ ಸೈಜ್ ಪುಸ್ತಕದ ರಟ್ಟು ಹಾಕುವಿಕೆ, ಕವರುಗಳ ತಯಾರಿಕೆ, ರಿಜಿಸ್ಟರ್ ಪುಸ್ತಕಗಳ ತಯಾರಿಕೆ ಇತ್ಯಾದಿಗಳ ಕಾಗದದಿಂದ ತಯಾರಿಸಲಾಗುವ ವಸ್ತುಗಳು
- ಪೊರಕೆ ಮತ್ತು ತಟ್ಟಿಗಳ ತಯಾರಿಕೆ
- ಅರಣ್ಯ ಉತ್ಪನ್ನಗಳ ಸಂಗ್ರಹಣೆ,ಪರಿಷ್ಕರಣೆ ಹಾಗೂ ಪ್ಯಾಕಿಂಗ್
- ಪೋಟೋಗಳಿಗೆ ಕಟ್ಟು ಹಾಕುವಿಕೆ
- ಸೆಣಬಿನ ಉತ್ಪನ್ನಗಳ ಉತ್ಪಾದನೆ (ನಾರು ಉದ್ದಿಮೆ ಅಡಿಯಲ್ಲಿ)
ಕೃಷಿ ಆಧಾರಿತ ಮತ್ತು ಆಹಾರಉದ್ದಿಮೆಗಳು:-
- ಏಕದಳ,ಸಾಂಬಾರು ಪದಾರ್ಥಗಳ, ಹಪ್ಪಳ,ಸಂಡಿಗೆ ಮಸಾಲೆಪುಡಿಗಳ ಪರಿಷ್ಕರಣೆ, ಪ್ಯಾಕಿಂಗ್ ಮತ್ತು ಮಾರಾಟ
- ನ್ಯೂಡಲ್ಸ್‍ಗಳ ತಯಾರಿಕೆ
- ಹಿಟ್ಟಿನ ಗಿರಣಿ
- ಬೇಳೆಗಳನ್ನು ತಯಾರಿಸುವುದು
- ಸಣ್ಣ ಅಕ್ಕಿ ನುಚ್ಚಮಾಡುವ ಘಟಕ
- ಪನೆ ಬೆಲ್ಲ ತಯಾರಿಕೆ ಮತ್ತಿತ್ತರ ಪನೆ ಬೆಲ್ಲ ಉತ್ಪನ್ನಗಳ ಉದ್ದಿಮೆ
- ಬೆಲ್ಲ ಮತ್ತು ಖಂಡಸಾರಿ
- ಭಾರತೀಯ ಸಿಹಿ ತಂಡಿಗಳ ತಯಾರಿಕೆ
- ಕಬ್ಬಿನ ರಸ ತೆಗೆಯುವ ಘಟಕ
- ಜೇನು ಸಾಕಾಣೆ
- ಹಣ್ಣು ಮತ್ತು ತರಕಾರಿಗಳ ಪರಿಷ್ಕರಣೆ ಹಾಗೂ ಉಪ್ಪಿನಕಾಯಿ ತಯಾರಿಕೆ
- ಗಾಣ ಎಣ್ಣೆ ತಯಾರಿಕೆ
- ಮೆಂಥಾಲ್ ಎಣ್ಣೆ ತಯಾರಿಕೆ
- ತೆಂಗಿನ ನಾರು ಹಾಗೂ ಇತರೆ ನಾರು ಉದ್ದಿಮೆ
- ವೈದ್ಯಕೀಯ ಉದ್ದೇಶಗಳಿಗಾಗಿ ಅರಣ್ಯ ಗಿಡಮೂಲಿಕೆಗಳ ಹಾಗೂ ಹಣ್ಣುಗಳ ಸಂಗ್ರಹಣೆ
- ರಾಗಿ ಮತ್ತು ಮೆಕ್ಕೆ ಜೋಳದ ಪರಿಷ್ಕರಣೆ
- ಬೆಂಡಿನ ಕೆಲಸ, ಚಾಪೆ ಹಾಗೂ ಹೂವಿನ ಹಾರಗಳು ಇತ್ಯಾದಿಗಳ ತಯಾರಿಕೆ
- ಗೋಡಂಬಿ ಪರಿಷ್ಕರಣೆ
- ಅಡಿಕೆ ಎಲೆಯ ತಟ್ಟೆ,ದೊನ್ನೆ ತಯಾರಿಕೆ
- ಹಾಲಿನ ಉತ್ಪನ್ನಗಳ ಘಟಕ
- ಪಶು ಆಹಾರ,ಕೋಳಿ ಆಹಾರ ತಯಾರಿಕೆ
ಪಾಲಿಮರ್ ಮತ್ತು ರಾಸಾಯನಿಕಆಧಾರಿತ ಉದ್ದಿಮೆಗಳು
- ಗೃಹ ಚರ್ಮೋದ್ಯೋಗ-ಇದರಲ್ಲಿ ಚರ್ಮ ಸುಲಿಯುವುದು,ಚರ್ಮಹದ ಮಾಡುವುದು ಇತ್ಯಾದಿಗಳು ಸೇರಿವೆ.
- ಗೃಹ ಸಾಬೂನು ಉದ್ದಿಮೆ
- ರಬ್ಬರ್ ವಸ್ತುಗಳ ತಯಾರಿಕೆ
- ರೆಕ್ಸಿನ್ ಮತ್ತು ಪಿ.ವಿ.ಸಿ. ಉತ್ಪನ್ನಗಳ ತಯಾರಿಕೆ
- ಕೊಂಬು,ಮೂಳೆ ಇವುಗಳ ಉತ್ಪನ್ನಗಳು
- ಮೇಣದಬತ್ತಿ,ಕರ್ಪೂರ,ವ್ಯಾಕ್ಸ್ ತಯಾರಿಕೆ
- ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ಸುಗಳ ತಯಾರಿಕೆ
- ಬಿಂದಿ ತಯಾರಿಕೆ
- ಮೆಹಂದಿ ತಯಾರಿಕೆ
- ಸುಗಂದ ಎಣ್ಣೆಗಳ ತಯಾರಿಕೆ
- ಷಾಂಪೂಗಳ ತಯಾರಿಕೆ
- ಕೇಶ ತೈಲಗಳ ಉತ್ಪಾದನೆ
- ಡಿಟರ್ಜೇಂಟ್ಸ್ ಮತ್ತು ವಾಷಿಂಗ್ ಪೌಡರ್ ಗಳ ತಯಾರಿಕೆ
ಎಂಜಿನಿಯರಿಂಗ್ ಹಾಗೂಅಸಾಂಪ್ರದಾಯಕ ಶಕ್ತಿ
- ಬಡಗಿತನ
- ಕಮ್ಮಾರಿಕೆ
- ಗೃಹ ಬಳಿಕೆಗಾಗಿ ಅಲ್ಯೂಮಿನಿಯಂ ಪಾತ್ರೆಗಳ ತಯಾರಿಕೆ
- ಹಸುವಿನ ಸಗಣಿ ಮತ್ತಿತ್ತರ ನಿರುಪಯುಕ್ತ ವಸ್ತುಗಳಿಂದ (ಮಲ,ಸತ್ತ ಪ್ರಾಣಿಗಳ ಮಾಂಸ ಇತ್ಯಾದಿ) ಮಿಥೇನು (ಗೊಬ್ಬರ)ಅನಿಲದ ಉತ್ಪಾದನೆ ಮತ್ತು ಬಳಕೆ
- ವರ್ಮಿಕಲ್ಚರ್ (ಸಾವಯವ ಗೊಬ್ಬರ)
- ಗುಂಡು ಸೂಜಿಗಳು ಕ್ಲಿಪ್ಪುಗಳು,ಸುರಕ್ಷತಾ ಪಿನ್ನುಗಳು,ಸೀಸೆಗಳು, ಗಾಜಿನ ಲೋಟಗಳ ತಯಾರಿಕೆ
- ಛತ್ರಿ ಜೋಡಣೆ
- ಸೌರ ಹಾಗೂ ವಾಯುಶಕ್ತಿ ಉಪಕರಣಗಳು
- ಹಿತ್ತಾಳೆಯಿದ ಕೈಯಿಂದ ತಯಾರಿತ ವಸ್ತುಗಳ ಉತ್ಪಾದನೆ
- ತಾಮ್ರದಿಂದ ಕೈಯಿಂದ ತಯಾರಿತ ವಸ್ತುಗಳ ಉತ್ಪಾದನೆ
- ಕಂಚಿನಿಂದ ತಯಾರಿಸಲ್ಪಡುವ ಇತರೆ ವಸ್ತುಗಳ ತಯಾರಿಕೆ
- ಹಿತ್ತಾಳೆ,ತಾಮ್ರ ಮತ್ತು ಕಂಚಿನಿಂದ ತಯಾರಿಸಲ್ಪಡುವ ಇತರೆ ವಸ್ತುಗಳು
- ರೇಡಿಯೋ ಜೋಡಣೆ ಮತ್ತು ರಿಪೇರಿ
- ಕ್ಯಾಸೆಟ್ ಪ್ಲೇಯರ್ ಗಳ ತಯಾರಿಕೆ(ರೇಡಿಯೋದಲ್ಲಿ ಅಳವಡಿಸುವ ಹಾಗೂ ಅಳವಡಿಸದ)
- ಕ್ಯಾಸೆಟ್ ರಿಕಾರ್ಡ್‍ಗಳ ತಯಾರಿಕೆ (ರೇಡಿಯೋದಲ್ಲಿ ಅಳವಡಿಸುವ ಹಾಗೂ ಅಳವಡಿಸದ)
- ವೋಲ್ಟೇಜ್‍ಸ್ಟೇಬಿಲೈಸರ್ ತಯಾರಿಕೆ
- ಎಲೆಕ್ಟ್ರಾನಿಕ್ ಗಡಿಯಾರಗಳ, ಅಲಾರಾಂ ಗಡಿಯಾರಗಳ ತಯಾರಿಕೆ.
- ಕಲಾತ್ಮಕ ಪೀಠೋಪಕರಣಗಳ ತಯಾರಿಕೆ.
- ಟಿನ್ ಸೇವೆ.
- ಮೋಟರ್ ವೈಂಡಿಂಗ್.
- ತಂತಿ ಬಲೆ ತಯಾರಿಕೆ.
- ಕಬ್ಬಿಣದ ಗ್ರಿಲ್ ತಯಾರಿಕೆ
- ಗ್ರಾಮೀಣ ಸಾರಿಗೆ-ಅಂದರೆ ಕೈಗಾಡಿಗಳು,ಎತ್ತಿನ ಗಾಡಿಗಳು,ಇತ್ಯಾದಿಗಳ ಉತ್ಪಾದನೆ
- ಸಂಗೀತೋಪಕರಣಗಳ ತಯಾರಿಕೆ
ಸೇವಾ ಉದ್ದಿಮೆಗಳು:
- ಸೈಕಲ್ ಅಸೆಂಬೆಲ್
- ಎಂಬ್ರಾಯಿಡರಿ ಅಲಂಕಾರ
- ಬಟ್ಟೆಗೆ ಎಂಬ್ರಾಯಿಡರಿ ಅಲಂಕಾರ
- ಸಿದ್ದ ಉಡುಪುಗಳ ತಯಾರಿಕೆ
- ಸಿದ್ದ ಉಡುಪುಗಳ ತಯಾರಿಕೆ ಟೈಲರಿಂಗ್
- ಬಾಟಿಕ್ ಕೆಲಸ
- ಸ್ಟೌವ್ ಬತ್ತಿಗಳು
- ಆಟದ ಸಾಮಾನುಗಳು ಹಾಗೂ ಬೊಂಬೆಗಳ ತಯಾರಿಕೆ
- ದಾರದ ಉಂಡೆಗಳು,ಉಲ್ಲನ್ ಉಡುಪುಗಳು
- ಶಸ್ತ್ರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ಬ್ಯಾಂಡೇಜ್‍ಗಳು
- ಬ್ಯೂಟಿ ಪಾರ್ಲರ್
- ಲಾಂಡ್ರಿ
- ಕ್ಷೌರಿಕ ಘಟಕ
- ಎಲೆಕ್ಟ್ರಿಕಲ್ ವೈರಿಂಗ್ ಎಲೆಕ್ಟ್ರಾನಿಕ್ಸ್ ಮತ್ತು ಈ ಬಗೆಯ ಗೃಹ ಬಳಕೆ ವಸ್ತುಗಳ ತಯಾರಿಕೆ
- ಡೀಸೆಲ್ ಇಂಜಿನ್‍ಗಳ ರಿಪೇರಿ, ಪಂಪುಸೆಟ್ಟುಗಳ ರಿಪೇರಿ
- ಟೈರ್/ವಲ್ಕನೈಎಸಿಂಗ್/ಘಟಕ
- ಸ್ಟ್ರಯರ್ ಗಳ ಕ್ರಿಮಿನಾಶಕಗಳ ಪಂಪುಸೆಟ್ಟುಗಳ ಇತ್ಯಾದಿ ಕೃಷಿ ಸೇವಾ ಉದ್ದಿಮೆಗಳು
- ಸೌಂಡ್ ಸಿಸ್ಟಂ
- ಬ್ಯಾಟರಿ ಚಾರ್ಜಿಂಗ್
- ಆರ್ಟ್ ಬೋರ್ಡ್ ಪೈಂಟಿಂಗ್
- ಸೈಕಲ್ ರಿಪೇರಿ
- ಕಟ್ಟಡದ ಕೆಲಸ
- ಬ್ಯಾಂಡ್ ಟ್ರೂಪ್
- ಟೀ ಸ್ಟಾಲುಗಳು
ನಿಷೇಧಿತ ಉದ್ದಿಮೆಗಳ ಪಟ್ಟಿ:
ಮಾಂಸಾಹಾರಕ್ಕೆ ಸಂಬಂಧಿಸಿದ ಉದ್ದಿಮೆಗಳು,ಅಂದರೆ ಮಾಂಸದ ಸಂಸ್ಕರಣೆ ಶೇಖರಣೆ ಮತ್ತು ಇತರೆ ವಸ್ತುಗಳ ಮಾರಾಟ,ಮಾದಕ ವಸ್ತುಗಳಾದ ಬೀಡಿ,ಸಿಗರೇಟ್ ಪಾನ್ ಪರಾಗ್, ಇತ್ಯಾದಿಗಳು ಡಾಬಾದಲ್ಲಿ ಮದ್ಯ ಪೂರೈಕೆ ತಂಬಾಕು ಉತ್ಪನ್ನಗಳ ತಯಾರಿಕೆ, ನೀರಾ ಅಥವಾ ಈಚಲು ಮರದ ರಸ ಇಳಿಸುವಿಕೆ,ವ್ಯವಸಾಯ ಮತ್ತು ಪ್ಲಾಂಟೇಷನ್‍ಗಳಿಗೆ ಸಂಬಂಧಪಟ್ಟ ವಸ್ತುಗಳು, ಬೆಳೆ ಕೊಯ್ಲುಗೆ ಸಂಬಂಧಿಸಿದ ಯಂತ್ರೋಪಕರಣಗಳು, 20 ಮೈಕ್ರಾನ್‍ಗಿಂತ ಕಡಿಮೆ ಇರುವ ಪಾಲಿಥಿನ್ ಕೈ ಚೀಲಗಳು, ಆಹಾರ ಪದಾರ್ಥಗಳ ಶೇಖರಣೆ ಪಾಶ್ಮಿನ ಉಣ್ಣೆ ಮತು ಕೈಯಿಂದ ನೇಯ್ಗೆ ಮಾಡಿದ, ನೂಲು ಮಾಡಿದ ಹಾಗೂ ಅದಕ್ಕೆ ಸಂಬಂಧಪಟ್ಟ ವಸ್ತುಗಳ ಪರಿಷ್ಕರಣೆ ಖಾದಿ ಕಾರ್ಯಕ್ರಮದಡಿಯಲ್ಲಿ ರಿಬೇಟ್ ಪಡೆಯುವಿಕೆ, ಗ್ರಾಮಾಂತರ ಸಾರಿಗೆ. (ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ ಆಟೋರಿಕ್ಷಾಗಳು,ಜಮ್ಮು ಕಾಶ್ಮೀರದಲ್ಲಿನ ಮನೆಯ ದೋಣಿ,ಶಿಕಾರ ಪ್ರವಾಸದ ದೋಣಿಗಳು ಮತ್ತು ಸೈಕಲ್ ರಿಕ್ಷಾಗಳನ್ನು ಹೊರತುಪಡಿಸಿ).
ಇತರೆ ಷರತ್ತುಗಳು:-
ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ. ವಿಸ್ತರಣೆ/ಆಧುನೀಕರಣ/ವೈವಿದ್ಯಿಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಇತರೆ ಯೋಜನೆಗಳಲ್ಲಿ ಸಾಲ ಮತ್ತಿತ್ತರ ಸೌಲಭ್ಯ ಪಡೆದ ಘಟಕಗಳು/ಉದ್ಯಮಶೀಲರು ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ:
ನಿಮ್ಮ ಹತ್ತಿರದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾಮಟ್ಟದ ಅಧಿಕಾರಿಗಳು/ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು/ಸಹಾಯಕ ನಿರ್ದೇಶಕರು/ಕೈಗಾರಿಕಾ ವಿಸ್ತಾರಣಾಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ. ಮಂಡಳಿಯ ಜಿಲ್ಲಾ ಕಛೇರಿಗಳಲ್ಲಿ ಪಿಎಂಇಜಿಪಿ ಯೋಜನೆಗಳ ಅನುಷ್ಠಾನಕ್ಕಾಗಿ ಉಚಿತ ನೆರವು ಕೇಂದ್ರಗಳನ್ನು ತೆರಯಲಾಗಿದೆ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ.
ಸಂಪರ್ಕ ವಿವರಗಳು(PMEGP contact details)
PMEGP ಸಂಪರ್ಕ ವಿವರಗಳು: 022-26711017
[email protected]
ವಿಭಾಗೀಯ ಕಛೇರಿ ಹುಬ್ಬಳ್ಳಿ : 0836-2282882, 9741482882
[email protected]
ರಾಜ್ಯ ಕಛೇರಿ ಬೆಂಗಳೂರು080-25665885
[email protected]