PMIS app-ಪಿಎಂ ಇಂಟರ್ನ್ ಶಿಪ್ ಆ್ಯಪ್ ಬಿಡುಗಡೆ,1 ಕೋಟಿ ಯುವಕರಿಗೆ ಉದ್ಯೊಗವಕಾಶ

PMIS App-ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ, ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ (PMIS)ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು.

ಪ್ರಧಾನ ಮಂತ್ರಿಯವರ ದೃಷ್ಟಿಕೋನದ ಪ್ರಕಾರ, ಈ ಯೋಜನೆಯು ತರಗತಿಯ ಕಲಿಕೆ ಮತ್ತು ಉದ್ಯಮದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಉದ್ಯೋಗ, ಕೌಶಲ್ಯ ಮತ್ತು ಅವಕಾಶಗಳನ್ನು ಉತ್ತೇಜಿಸಲು ಈ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವರು ಶ್ಲಾಘಿಸಿದರು.

ಯೋಜನೆಯ ಯಶಸ್ಸಿಗೆ ಉದ್ಯಮಗಳ ಸಹಭಾಗಿತ್ವ ಅಗತ್ಯವಿದ್ದು, ಇದು ಕೌಶಲ್ಯಪೂರ್ಣ ಕಾರ್ಯಪಡೆಯ ಬೆಳೆಸಲು ಸಹಾಯ ಮಾಡುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. PMIS ಅಪ್ಲಿಕೇಶನ್‌ನ ಲಾಂಚಿಂಗ್ ಇಂಟರ್ನ್‌ಶಿಪ್ ಅವಕಾಶಗಳಿಗೆ ಯುವಕರ ಪ್ರವೇಶವನ್ನು ಸುಗಮಗೊಳಿಸುತ್ತದೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ ತಿಳಿಸಿದ್ದಾರೆ.

2024-25ರ ಬಜೆಟ್‌ನಲ್ಲಿ ಘೋಷಿತ ಈ ಯೋಜನೆಯ ಗುರಿ, ಐದು ವರ್ಷಗಳಲ್ಲಿ ಅಗ್ರ 500 ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಒದಗಿಸುವುದಾಗಿದೆ. ಇದರ ಅಂಗವಾಗಿ, ಕಳೆದ ಅಕ್ಟೋಬರ್‌ನಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳ ಪೈಲಟ್ ಯೋಜನೆ ಆರಂಭಿಸಲಾಯಿತು.

ಪೈಲಟ್ ಯೋಜನೆಯ ಮೊದಲ ಸುತ್ತಿನಲ್ಲಿ 25 ವಲಯಗಳ 280 ಕಂಪನಿಗಳು 745 ಜಿಲ್ಲೆಗಳಲ್ಲಿ 1.27 ಲಕ್ಷಕ್ಕೂ ಹೆಚ್ಚು ಅವಕಾಶಗಳನ್ನು ನೀಡಿದ್ದು, 82,000 ಕ್ಕೂ ಹೆಚ್ಚು ಆಫರ್‌ಗಳನ್ನು ಅಭ್ಯರ್ಥಿಗಳಿಗೆ ನೀಡಲಾಯಿತು. ಎರಡನೇ ಸುತ್ತು ಜನವರಿ 2025ರಲ್ಲಿ ಆರಂಭಗೊಂಡಿದ್ದು, 327 ಕಂಪನಿಗಳು 1.18 ಲಕ್ಷಕ್ಕೂ ಹೆಚ್ಚು ಅವಕಾಶಗಳನ್ನು ಪ್ರಕಟಿಸಿದ್ದವು. ಈ ಸುತ್ತಿನ ಅರ್ಜಿ ವಿಂಡೋ ಈ ತಿಂಗಳ ಅಂತ್ಯದವರೆಗೆ ತೆರೆಯಿರಲಿದೆ.

sreelakshmisai
Author

sreelakshmisai

Leave a Reply

Your email address will not be published. Required fields are marked *