Pradan mantri krishi sinchayi yojane-ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (2024-25) ಅಡಿಯಲ್ಲಿ, ಕೊಪ್ಪಳ ತಾಲ್ಲೂಕಿನ ಪರಿಶಿಷ್ಠ ಜಾತಿ ವರ್ಗದ ರೈತರಿಗೆ 651 ಹೆಕ್ಟರ್‌ಗಳಿಗೆ ತುಂತುರು ನೀರಾವರಿ ಘಟಕಗಳ ವಿತರಣೆಗೆ ಗುರಿ ನಿಗದಿಯಾಗಿದೆ. ಇದರಲ್ಲಿ ಈಗಾಗಲೇ 192 ಹೆಕ್ಟರ್ ಘಟಕಗಳನ್ನು ವಿತರಿಸಲಾಗಿದೆ.
ರೈತರು 2 ಹೆಕ್ಟರ್‌ಗಳವರೆಗೆ ತುಂತುರು ನೀರಾವರಿ ಘಟಕ ಪಡೆಯಲು ಅರ್ಹರಾಗಿದ್ದು, ದರಗಳು ಹೀಗಿವೆ:
75 ಎಂ.ಎಂ. ವ್ಯವಸ್ಥೆ:1 ಹೆಕ್ಟರ್: ರೈತ ವಂತಿಕೆ ₹4,667, ಸಹಾಯಧನ ₹21,7752 ಹೆಕ್ಟರ್: ರೈತ ವಂತಿಕೆ ₹6,540, ಸಹಾಯಧನ ₹31,191
63 ಎಂ.ಎಂ. ವ್ಯವಸ್ಥೆ:1 ಹೆಕ್ಟರ್: ರೈತ ವಂತಿಕೆ ₹4,139, ಸಹಾಯಧನ ₹19,4292 ಹೆಕ್ಟರ್: ರೈತ ವಂತಿಕೆ ₹5,772, ಸಹಾಯಧನ ₹28,050
ಯೋಜನೆಯ ಲಾಭ ಪಡೆಯಲು, ರೈತರು ಸಂಬಂಧಿತ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ನಿಗದಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು.