Pradhan Mantri Krishi Sinchayee Yojana: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) 2015ರಲ್ಲಿ ಪ್ರಾರಂಭವಾಗಿದ್ದು, ದೇಶದ ಎಲ್ಲಾ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಯ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಯೋಜನೆಯಡಿಯಲ್ಲಿ ಹಣಕಾಸು ಹಂಚಿಕೆ 75:25 ಅನುಪಾತದಲ್ಲಿದ್ದು, ಸರ್ಕಾರ ಒಟ್ಟು ವೆಚ್ಚದ 75%ನ್ನು ವಹಿಸಿಕೊಳ್ಳುತ್ತದೆ, ಮತ್ತು ರೈತರು ಉಳಿದ 25% ಹೂಡಿಕೆ ಮಾಡಬೇಕು.
PMKSY-WDC 2.0 ಯೋಜನೆಯು ದೇಶದ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿಯ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುವುದು, ಜಲಾನಯನ ಮಟ್ಟದಲ್ಲಿ ರೈತರಿಗೆ ಹೆಚ್ಚಿನ ಆದಾಯವನ್ನು ಸಾಧಿಸಲು ಅನುವುಮಾಡುವುದು, ಭೂರಹಿತರಿಗೆ ವಿಸ್ತರಿಸಿದ ಜೀವನೋಪಾಯದ ಆಯ್ಕೆಗಳನ್ನು ಒದಗಿಸುವುದು, ಯೋಜನೆಯ ಸವಲತ್ತುಗಳ ವಿತರಣೆಯಲ್ಲಿ ಸಮಾನತೆ, ಸಮುದಾಯದ ಮಾಲೀಕತ್ವ ಮತ್ತು ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.
2024-25ರ ರಾಷ್ಟ್ರೀಯ ಕೃಷಿ ನೀರಾವರಿ ಯೋಜನೆ
ಈ ಯೋಜನೆಯಡಿ ರೈತರು ಸ್ಪ್ರಿಂಕ್ಲರ್ ಪೈಪ್ (ಡ್ರಿಪ್ ಇರಿಗೇಶನ್ ಯೂನಿಟ್) ಗಾಗಿ ಸಹಾಯಧನ ಪಡೆಯಬಹುದು.
Pradhan Mantri Krishi Sinchayee Yojana: ಹಣಕಾಸು ಹಂಚಿಕೆ ವಿಧಾನ:
ಸಾಮಾನ್ಯ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಸೇರಿದ ಎಲ್ಲ ವರ್ಗದ ರೈತರು ಪ್ರತಿ ಹೆಕ್ಟೇರಿಗೆ ಕೇವಲ ₹4,667/- ಮಾತ್ರ ಪಾವತಿಸಬೇಕಾಗುತ್ತದೆ.
Pradhan Mantri Krishi Sinchayee Yojana ದಾಖಲೆಗಳು:
ಭೂಮಿಯ ದಾಖಲೆ (ಪಹಣಿ)ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿಕತಿಬ್ಯಾಂಕ್ ಪಾಸ್ಬುಕ್ ಝೆರಾಕ್ಸ್ ಪ್ರತಿಕತಿಬೆಳೆ ಪ್ರಮಾಣ ಪತ್ರ (ಉದಾ: ಭತ್ತ, ಜೋಳ, ಕಾಳು, ಕದಲೆ)ಬೋರ್ವೆಲ್ ಪ್ರಮಾಣ ಪತ್ರ₹100 ಸ್ಟಾಂಪ್ ಪೇಪರ್ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
ಯೋಜನೆಯ ಮುಖ್ಯ ಲಾಭಗಳು:
ಎಲ್ಲಾ ರೈತರಿಗೆ ಆರ್ಥಿಕ ಸಹಾಯ ನೀಡುವುದು.ಉತ್ತಮ ನೀರಾವರಿ ವ್ಯವಸ್ಥೆಯಿಂದ ಕೃಷಿ ಚಟುವಟಿಕೆಗಳನ್ನು ಉತ್ತೇಜಿಸುವುದು.ಕಡಿಮೆ ನೀರಿನ ಬಳಕೆಯಿಂದ ಅಧಿಕ ಬೆಳೆ ಉತ್ಪಾದನೆ.ಆಧುನಿಕ ನೀರಾವರಿ ವಿಧಾನಗಳಿಂದ ನೀರಿನ ವ್ಯರ್ಥವನ್ನು ತಡೆಯುವುದು.ಸಂಪತ್ತು ಹಂಚಿಕೆ ಮೂಲಕ ರೈತರ ನಡುವೆ ಸ್ನೇಹಭಾವ ಬೆಳೆಸುವುದು.
ನಿರಂತರ ಕೃಷಿಗೆ ಪ್ರೇರಣೆ:
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ನೀರಿನ ಕೊರತೆಯನ್ನು ನಿವಾರಿಸಿ, ಪರಿಣಾಮಕಾರಿಯಾದ ನೀರಾವರಿ ಪದ್ಧತಿಗಳನ್ನು ಅಳವಡಿಸುವ ಮೂಲಕ ರೈತರ ಬದುಕು ಮತ್ತು ಕೃಷಿ ಉತ್ಪಾದಕತೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ರೈತರು ಈ ಯೋಜನೆಯ ಲಾಭವನ್ನು ಪಡೆಯಲು ತಮ್ಮ ಹತ್ತಿರದ ಕೃಷಿ ಸೇವಾ ಕೇಂದ್ರವನ್ನು ಭೇಟಿಯಿಡಬಹುದು.
ಇದನ್ನು ಓದಿ: