ಶಕ್ತಿ ಯೋಜನೆಯ ಜಾರಿಗೆ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಣಕಾಸು ನಿರ್ವಹಣೆಗೆ ಸಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಯೋಜನೆಯ ಪರಿಣಾಮವಾಗಿ ನಿಗಮಗಳ ಆದಾಯದಲ್ಲಿ ಕೆಲವು ಮಟ್ಟದ ಹೆಚ್ಚಳ ಕಂಡರೂ, ನಗದು ಒಳಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಇದಕ್ಕೂ ಮೊದಲು, ಸಾರಿಗೆ ನಿಗಮಗಳು ಹಲವು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು, ಆದಾಯ ಕೊರತೆ ಉಂಟಾಗಿತ್ತು. ಈವರೆಗೆ ನಷ್ಟದ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದ ಸಾರಿಗೆ ಇಲಾಖೆ, ಇದೀಗ ವಿಧಾನ ಪರಿಷತ್‌ನಲ್ಲಿ ನಷ್ಟದ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.
ನಷ್ಟದ ಬಗ್ಗೆ ಚರ್ಚೆ: ನಿಗಮಗಳ ಸ್ಥಿತಿ
ವಿಧಾನ ಪರಿಷತ್ ಸಭೆಯಲ್ಲಿ ಕೇಶವ ಪ್ರಸಾದ್ ಅವರು ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆಯ ಪ್ರಶ್ನೆ ಎತ್ತಿ, ಹೊಸ ಬಸ್‌ಗಳನ್ನು ಖರೀದಿಸಲಾಗಿದೆಯೇ ಎಂಬುದರ ಕುರಿತು ಮಾಹಿತಿ ಕೇಳಿದರು. ನಿಗಮಗಳು ನಷ್ಟ ಅನುಭವಿಸುತ್ತಿರುವ ಕಾರಣವನ್ನು ಸ್ಪಷ್ಟಪಡಿಸಲು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯ ಮಾತ್ರವಲ್ಲದೆ ದೇಶದ ಬಹುತೇಕ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ತಿಳಿಸಿದರು. ನಷ್ಟ ತಗ್ಗಿಸಲು ಟಿಕೆಟ್ ದರವನ್ನು ಪರಿಷ್ಕರಿಸಲಾಗಿದ್ದು, ಪ್ರಯಾಣಿಕರಿಗೆ ಸುಗಮತೆ ಒದಗಿಸಲು ಬಸ್‌ಗಳನ್ನು ಹೋಟೆಲ್‌ಗಳ ಬಳಿಯೇ ನಿಲ್ಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶಕ್ತಿ ಯೋಜನೆಗೆ 2000 ಕೋಟಿ ರೂಪಾಯಿ ಅನುದಾನ ಅಗತ್ಯ
ಶಕ್ತಿ ಯೋಜನೆಗೆ ಇನ್ನೂ 2000 ಕೋಟಿ ರೂಪಾಯಿ ಅಗತ್ಯವಿದ್ದು, ಹೊಸ ಬಸ್‌ಗಳ ಖರೀದಿ ಮತ್ತು ನೌಕರರ ನೇಮಕಾತಿಗೆ ಸರ್ಕಾರ ಮುನ್ನಡೆಸುತ್ತಿದೆ. ಸಾರಿಗೆ ಇಲಾಖೆಯ ಪ್ರಕಾರ, ಈ ಅವಧಿಯಲ್ಲಿ 5,360 ಹೊಸ ಬಸ್‌ಗಳನ್ನು ಖರೀದಿಸಲಾಗಿದೆ.
ನಿಗಮಗಳ ನಷ್ಟದ ವಿವರ
ಕೆಎಸ್‌ಆರ್‌ಟಿಸಿ – ₹1500 ಕೋಟಿಬಿಎಂಟಿಸಿ – ₹1544 ಕೋಟಿಕಲ್ಯಾಣ ಕರ್ನಾಟಕ ಸಾರಿಗೆ ನಿಗಮ – ₹777 ಕೋಟಿವಾಯುವ್ಯ ಕರ್ನಾಟಕ ಸಾರಿಗೆ ನಿಗಮ – ₹1386 ಕೋಟಿ
ಡ್ರೈವರ್‌ಗಳ ಆರೋಗ್ಯದ ಬಗ್ಗೆ ಸರ್ಕಾರದ ಗಮನಸರ್ಕಾರ ಚಾಲಕರ ಆರೋಗ್ಯದತ್ತ ಗಮನಹರಿಸಿದ್ದು, ಜಯದೇವ ಆಸ್ಪತ್ರೆಯಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಇತರ ಆಸ್ಪತ್ರೆಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದರು.