Solar pumpset-ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಸರ್ಕಾರ ಕೃಷಿಗೆ 7 ಗಂಟೆಗಳ ತ್ರಿಫೇಜ್ ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಗೃಹಬಳಕೆ ಮತ್ತು ಕೈಗಾರಿಕೆಗಳಿಗೆ 24×7 ವಿದ್ಯುತ್ ಸರಬರಾಜು ಮಾಡುವುದು ತಮ್ಮ ಬದ್ದತೆಯ ಭಾಗವಾಗಿದೆ ಎಂದು ಹೇಳಿದರು. ಮಂಗಳವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಇಂಧನ ಇಲಾಖೆ ಅಧಿಕಾರಿಗಳು ಹಾಗೂ ಶಾಸಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಕೊರತೆ ಮತ್ತು ನಿರ್ವಹಣೆ:
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲದಿದ್ದರೂ, ತಾಂತ್ರಿಕ ಕಾರಣಗಳಿಂದ ಕೆಲವೆಡೆ ನಿರ್ವಹಣಾ ಕಡಿತಗಳನ್ನು ಅನಿವಾರ್ಯವಾಗಿ ಮಾಡಲಾಗುತ್ತಿದೆ. ಆದರೆ, ಕೃಷಿ( Solar pumpset) ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ 18,500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ, ಬೇಸಿಗೆಯಲ್ಲಿ ಶೇಕಡಾ 10ರಷ್ಟು ಹೆಚ್ಚಳ ಉಂಟಾಗಿದೆ. ಇದಕ್ಕಾಗಿ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳೊಂದಿಗೆ ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜೂನ್‌ನಿಂದ ಕರ್ನಾಟಕ ವಿದ್ಯುತ್ ವಾಪಸು ಪಡೆಯಲಿದೆ.
ನೂತನ ವಿದ್ಯುತ್ ಉತ್ಪಾದನೆ:
ಕುಸುಮ್-ಸಿ (Kusum-B)ಯೋಜನೆಯಡಿಯಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ 3,000 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿಯಾಗಿದ್ದು, ಈಗಾಗಲೇ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಈ ಏಪ್ರಿಲ್‌ನಲ್ಲೇ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್‌ಗೆ ಸೇರಿಸುವ ಯೋಜನೆ ರೂಪಿಸಲಾಗಿದೆ.
ಮಾನವ ಸಂಪತ್ತಿನ ನೇಮಕಾತಿ:
ಇಂಧನ ಇಲಾಖೆಯ ಗುಣಮಟ್ಟದ ಸೇವೆ ಹೆಚ್ಚಿಸಲು 3,000 ಪವರ್ ಮ್ಯಾನ್(Lineman) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 3 ಲಕ್ಷ ಅರ್ಜಿಗಳು ಬಂದಿದ್ದು, 1 ಲಕ್ಷ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. ದೈಹಿಕ ಪರೀಕ್ಷೆ ನಂತರ ಮೀಸಲಾತಿ ಹಾಗೂ ಅಂಕಗಳ ಆಧಾರದ ಮೇಲೆ ನೇಮಕಾತಿ ಏಪ್ರಿಲ್ ಒಳಗೆ ಮುಗಿಯಲಿದೆ.
ಪಂಚಾಯತ್ ಮಟ್ಟದ ವಿದ್ಯುತ್ ಉತ್ಪಾದನೆ:
ಗ್ರಾಮ ಪಂಚಾಯಿತಿಗಳು ಸ್ವಾವಲಂಬಿಯಾಗಿ ವಿದ್ಯುತ್ ಉತ್ಪಾದನೆ ಮಾಡಲು ದಾವಣಗೆರೆ ಜಿಲ್ಲೆಯಲ್ಲಿ ಪೈಲಟ್ ಯೋಜನೆ ರೂಪಿಸಲಾಗಿದೆ. 400 ಎಕರೆ ಜಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ, ಉತ್ಪಾದಿತ ವಿದ್ಯುತ್ ಅನ್ನು ಗ್ರಿಡ್‌ಗೆ ಸೇರಿಸಿ ಸ್ಥಳೀಯ ಸೇವೆಗಳಿಗೆ ಬಳಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ವಿದ್ಯುತ್ ದರ ಪರಿಷ್ಕರಣೆ:
ಎಲ್ಲಾ ಎಸ್ಕಾಂಗಳ ವಿದ್ಯುತ್ ದರ ಪರಿಷ್ಕರಣೆಯ ನಿರ್ಧಾರ ಕೆಇಆರ್‍ಸಿ (ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್) ಕೈಗೊಳ್ಳಲಿದೆ. ಸಾರ್ವಜನಿಕ ಅಭಿಪ್ರಾಯ ಪಡೆದ ಬಳಿಕ ಮಾತ್ರ ದರ ಹೆಚ್ಚಳ ನಿರ್ಧಾರ ಮಾಡಲಾಗುವುದು.
ಗೃಹಜ್ಯೋತಿ ಯೋಜನೆ(Gruhajyothi):
ಈ ಯೋಜನೆಯಡಿಯಲ್ಲಿ 200 ಯುನಿಟ್ ವರೆಗೆ ಶೂನ್ಯ ಬಿಲ್ ನೀಡಲಾಗುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ 4,33,897 ಆರ್.ಆರ್. ಸಂಖ್ಯೆಗಳ ಪೈಕಿ ಶೇ. 88.93 ಗೃಹಜ್ಯೋತಿ ಯೋಜನೆಯಡಿ ಒಳಗೊಂಡಿವೆ. 2023 ಆಗಸ್ಟ್‌ನಿಂದ 2024 ಡಿಸೆಂಬರ್‌ವರೆಗೆ 309 ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗಿದೆ.
ಕೃಷಿಗೆ 7 ಗಂಟೆ ವಿದ್ಯುತ್:
ರಾಜ್ಯ ಸರ್ಕಾರವು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ತ್ರಿಫೇಜ್ ವಿದ್ಯುತ್ ಪೂರೈಕೆ ನೀಡುವ ಬದ್ದತೆಯಲ್ಲಿದೆ. ದಾವಣಗೆರೆ ಜಿಲ್ಲೆಯ ಆನಗೋಡು, ಮಾಯಕೊಂಡ ಭಾಗಗಳಲ್ಲಿ ವಿದ್ಯುತ್ ಪೂರೈಕೆ 3-4 ಗಂಟೆಗಳಷ್ಟೇ ಇರುವ ಬಗ್ಗೆ ಶಾಸಕರು ಪ್ರಶ್ನೆ ಎತ್ತಿದಾಗ, ಬೆಸ್ಕಾಂ ಎಲ್ಲಾ ರೈತರಿಗೂ 7 ಗಂಟೆ ವಿದ್ಯುತ್ ಪೂರೈಕೆ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಕುಸುಮ್ ಬಿ ಯೋಜನೆ:
ಈ ಯೋಜನೆಯಡಿಯಲ್ಲಿ 7.5 ಹೆಚ್.ಪಿ. ವರೆಗೆ ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರೈತರು ಶೇಕಡಾ 20 ವಂತಿಗೆ ನೀಡಬೇಕಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇಕಡಾ 30 ಹಾಗೂ 50 ಸಹಾಯಧನ ನೀಡಲಿವೆ.
ಈ ಸಭೆಯಲ್ಲಿ ಶಾಸಕರಾದ ಕೆ.ಎಸ್. ಬಸವಂತಪ್ಪ, ಲತಾ ಮಲ್ಲಿಕಾರ್ಜುನ್, ಬಿ.ದೇವೇಂದ್ರಪ್ಪ, ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ಎಂಡಿ ಡಾ. ಶಿವಶಂಕರ್ ಎನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.