Sukanya samruddi yojane-ಸುಕನ್ಯಾ ಸಮೃದ್ಧಿ ಯೋಜನೆ (SSY) – ಅಜ್ಜ-ಅಜ್ಜಿ ತೆರೆದ ಖಾತೆಗಳ ಮಾಲೀಕತ್ವಕ್ಕೆ ಹೊಸ ನಿಯಮ
ಅಕ್ಟೋಬರ್ 1, 2024 ರಿಂದ SSY ಖಾತೆಗಳಿಗೆ ಮಹತ್ವದ ಬದಲಾವಣೆ
ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಬೆಂಬಲಿತ ಉಳಿತಾಯ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆ (SSY) ನಲ್ಲೊಂದು ಪ್ರಮುಖ ನಿಯಮ ಬದಲಾವಣೆಯಾಗುತ್ತಿದೆ. ಅಜ್ಜ-ಅಜ್ಜಿ ತೆರೆದ ಖಾತೆಗಳನ್ನು ಮಗುವಿನ ಪೋಷಕರು ಅಥವಾ ಕಾನೂನುಬದ್ಧ ಪೋಷಕರಿಗೆ ವರ್ಗಾಯಿಸುವುದು ಕಡ್ಡಾಯ ಎಂದು ಸರ್ಕಾರ ನಿರ್ಧರಿಸಿದೆ.
ಈ ಹೊಸ ಮಾರ್ಗಸೂಚಿಯನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯ ಜಾರಿಗೆ ತರಿದ್ದು, ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳನ್ನು ಸುವ್ಯವಸ್ಥಿತಗೊಳಿಸುವುದೇ ಇದರ ಉದ್ದೇಶ.
ಈ ಬದಲಾವಣೆಯ ಅಗತ್ಯತೆ ಏನು?
ಮೊದಲು, ಮೊಮ್ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಅಜ್ಜ-ಅಜ್ಜಿ SSY ಖಾತೆ ತೆರೆಯಲು ಅವಕಾಶ ಇತ್ತು. ಆದರೆ, ಖಾತೆಯ ಮಾಲೀಕತ್ವ ಹಾಗೂ ನಿರ್ವಹಣೆಯಲ್ಲಿ ಗೊಂದಲಗಳು ಎದುರಾಗುತ್ತಿದ್ದು, ಸರಿಯಾದ ಆರ್ಥಿಕ ನಿಯಂತ್ರಣ ಮತ್ತು ಖಾತೆಯ ಸರಳ ನಿರ್ವಹಣೆ ಗುರಿಯಾಗಿದ್ದು ಪೋಷಕರು ಅಥವಾ ಕಾನೂನುಬದ್ಧ ಪೋಷಕರಿಗೆ ಮಾತ್ರ ಖಾತೆ ಮಾಲೀಕತ್ವ ನೀಡಲು ಸರ್ಕಾರ ತೀರ್ಮಾನಿಸಿದೆ.
SSY ಖಾತೆಗೆ ಹೊಸ ನಿಯಮಗಳು
✔ ಅಜ್ಜ-ಅಜ್ಜಿ ತೆರೆಯಿರುವ ಖಾತೆಗಳನ್ನು ಮಗುವಿನ ಪೋಷಕರು/ಕಾನೂನುಬದ್ಧ ಪೋಷಕರಿಗೆ ವರ್ಗಾಯಿಸುವುದು ಕಡ್ಡಾಯ.
✔ ಈ ಪ್ರಕ್ರಿಯೆಯನ್ನು ಖಾತೆ ತೆರೆದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿಯೇ ಪೂರ್ಣಗೊಳಿಸಬೇಕು.
✔ ಒಂದೇ ಹೆಣ್ಣು ಮಗುವಿಗೆ ಬೇರೆ ಬೇರೆ ಖಾತೆಗಳು ಇದ್ದರೆ, ಹೆಚ್ಚುವರಿ ಖಾತೆಗಳನ್ನು ತಕ್ಷಣ ಮುಚ್ಚಬೇಕು. ಮುಚ್ಚಿದ ಖಾತೆಯ ಠೇವಣಿಯನ್ನು ಬಡ್ಡಿ ಇಲ್ಲದೆ ಹಿಂತಿರುಗಿಸಲಾಗುವುದು.
ಖಾತೆ ವರ್ಗಾಯಿಸದಿದ್ದರೆ ಏನಾಗಬಹುದು?
ಭವಿಷ್ಯದಲ್ಲಿ ಹಣ ಹಿಂಪಡೆಯಲು ತೊಂದರೆ ಉಂಟಾಗಬಹುದು
ಬಡ್ಡಿ ಪಾವತಿ ಮತ್ತು ಖಾತೆ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಬಹುದು.
ಈ ಹೊಸ ನಿಯಮಗಳು ಸುಕನ್ಯಾ ಸಮೃದ್ಧಿ ಯೋಜನೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ರೂಪಿಸುವುದಕ್ಕೆ ಸಹಾಯ ಮಾಡಲಿವೆ.