Toxic movie release date- ಪ್ಯಾನ್ ವರ್ಲ್ಡ್ರ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರ ಟಾಕ್ಸಿಕ್‌ನ ಬಿಡುಗಡೆ ದಿನಾಂಕವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಘೋಷಿಸಿದ್ದಾರೆ. 2026ರ ಮಾರ್ಚ್ 19ರಂದು ಟಾಕ್ಸಿಕ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಯಶ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಭರ್ಜರಿಯಾಗಿ ಚಿತ್ರ ಘೋಷಣೆ ಮಾಡಿದ ಬಳಿಕ ಚಿತ್ರದ ಕುರಿತಾಗಿ ಹೆಚ್ಚೇನೂ ಮಾಹಿತಿ ಹಂಚಿಕೊಳ್ಳದೇ ಇದ್ದ ಚಿತ್ರತಂಡ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಗ್ಲಿಂಪ್ಸ್ ಒಂದನ್ನು ಹಂಚಿಕೊಂಡಿತ್ತು. ಈ ಟೀಸರ್‌ನಲ್ಲಿ ಯಶ್ ಪಬ್ ಒಂದರ ಒಳಗೆ ಡಾನ್ಸರ್‌ಗಳ ಜತೆ ರಗಡ್ ಆಗಿ ಹೆಜ್ಜೆಹಾಕುತ್ತಾ ಕಾಣಿಸಿಕೊಂಡಿದ್ದರು.ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ರಾಕಿಂಗ್ ಸ್ಟಾರ್ ಭರವಸೆಯನ್ನು ಮೂಡಿಸಿದರು. ಇನ್ನು ಈ ಚಿತ್ರಕ್ಕೆ ಮಲಯಾಳಂನ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.