Virat kohli:ಬ್ರೇಕಿಂಗ್ ನ್ಯೂಸ್-ವಿರಾಟ್ ಕೊಹ್ಲಿ ನಿವೃತ್ತಿ ದಿನಾಂಕ ಘೋಷಣೆ

Virat kohli: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಕುರಿತು ಸ್ಪಷ್ಟತೆ ನೀಡಿದ್ದಾರೆ. ಏಪ್ರಿಲ್ 2ರಂದು ಗುಜರಾತ್ ಟೈಟಾನ್ಸ್-ಆರ್‌ಸಿಬಿ ಐಪಿಎಲ್ ಪಂದ್ಯಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವಿರಾಟ್, ತನ್ನ ನಿವೃತ್ತಿಯ ದಿನಾಂಕದ ಬಗ್ಗೆ ಮಾತನಾಡಿದರು.

ವಿರಾಟ್ ತನ್ನ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಿ, 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಮತ್ತು ನಮೀಬಿಯಾದಲ್ಲಿ ನಡೆಯುವ ಏಕದಿನ ವಿಶ್ವಕಪ್ ತನ್ನ ಅಂತಿಮ ಟೂರ್ನಿಯಾಗಬಹುದು ಎಂದು ಹೇಳಿದ್ದಾರೆ. 16 ವರ್ಷಗಳ ಕ್ರಿಕೆಟ್‌ ಬಳಿಕ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್ ಜಯಿಸಲು ಅವರು ಆಸಕ್ತರಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯಿಸಿದ ನಂತರ ಕೊಹ್ಲಿಯ ಭವಿಷ್ಯದ ಬಗ್ಗೆ ಹಲವು ಚರ್ಚೆಗಳು ನಡೆದವು. ಆದರೆ, ತಕ್ಷಣ ನಿವೃತ್ತಿಯ ಯೋಜನೆ ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಬೂಟುಗಳನ್ನು ನೇತುಹಾಕುವ ಮೊದಲು ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲುವ ಬಯಕೆ ಹೊಂದಿದ್ದಾರೆ.

ನಿರೂಪಕರ ಪ್ರಶ್ನೆ: ಮುಂದಿನ ದೊಡ್ಡ ಹೆಜ್ಜೆ ಏನು?ವಿರಾಟ್ ಕೊಹ್ಲಿಯ ಉತ್ತರ: ನನಗೆ ಖಚಿತವಾಗಿ ತಿಳಿದಿಲ್ಲ, ಆದರೆ ಮುಂದಿನ ವಿಶ್ವಕಪ್ ಗೆಲ್ಲಲು ಪ್ರಯತ್ನಿಸಬಹುದು.

ಈ ಉತ್ತರಕ್ಕೆ ಪ್ರೇಕ್ಷಕರು ಹುಮ್ಮಸ್ಸಿನಿಂದ ಚಪ್ಪಾಳೆ ತಟ್ಟಿದರು. 2023 ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಆದರೆ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತು ಪ್ರಶಸ್ತಿ ಕೈಚೆಲ್ಲಿ ಹೋಗಿತು. ಭಾರತ ಕೊನೆಯ ಬಾರಿ 2011ರಲ್ಲಿ ಧೋನಿಯ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿಯ ಮಿಂಚು

ಟಿ20 ವಿಶ್ವಕಪ್ ಗೆದ್ದ ನಂತರ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. ಆಸ್ಟ್ರೇಲಿಯಾ ಪ್ರವಾಸದ ನಿರಾಶಾದಾಯಕ ಪ್ರದರ್ಶನದ ನಂತರ ಅವರ ನಿವೃತ್ತಿ ಚರ್ಚೆ ಇನ್ನಷ್ಟು ತೀವ್ರಗೊಂಡಿತ್ತು. ಆದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಬೃಹತ್ ಪ್ರದರ್ಶನ ನೀಡಿದರು—ಪಾಕಿಸ್ತಾನದ ವಿರುದ್ಧ ಶತಕ, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ 84 ರನ್ ಸೇರಿ 227 ರನ್ ಗಳಿಸಿದರು.

ಬಾರ್ಡರ್-ಗವಾಸ್ಕರ್ ಟ್ರೋಫಿ ಅನುಮಾನ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದ ಕೊಹ್ಲಿ, ಈ ಸರಣಿಯಲ್ಲಿ ಮುಂದಿನ ಬಾರಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಫ್-ಸ್ಟಂಪ್ ಎಸೆತಗಳಿಗೆ ಪದೇಪದೇ ಔಟಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.ಐಪಿಎಲ್ 2025 ಪ್ರಾರಂಭಕ್ಕೂ ಮೊದಲು ನಡೆದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ, ಬಿಜಿಟಿ ಸರಣಿಯಲ್ಲಿ ಭಾಗಿಯಾಗುವುದು ಅನುಮಾನ ಎಂಬುದನ್ನು ಹಿಂಟು ನೀಡಿದ್ದಾರೆ.

sreelakshmisai
Author

sreelakshmisai

Leave a Reply

Your email address will not be published. Required fields are marked *